ಕಣಿವೆ, ಫೆ. ೭: ದೇಶದ ಗಡಿಗಳಲ್ಲಿ ದುರ್ಗಮ ಪರಿಸ್ಥಿತಿಗಳಲ್ಲಿ ಹಗಲು - ರಾತ್ರಿ ಕರ್ತವ್ಯಗೈದು ಸುರಕ್ಷಿತವಾಗಿ ಮರಳುವ ಮೂಲಕ ಆರೋಗ್ಯವಂತ ಬದುಕು ನಡೆಸುತ್ತಿರುವ ನಿವೃತ್ತ ಯೋಧರನ್ನು ಇಡೀ ಸಮಾಜ ಸದಾ ಗೌರವಿಸಬೇಕು ಎಂದು ಕುಶಾಲನಗರ ವೃತ್ತನಿರೀಕ್ಷಕ ಪ್ರದೀಪ್ ಕುಮಾರ್ ಆಶಿಸಿದರು.

ಅರೆಸೇನಾಪಡೆಯ ನಿವೃತ್ತ ಯೋಧರ ಒಕ್ಕೂಟದ ವತಿಯಿಂದ ಗೌರವ ಸ್ವೀಕರಿಸಿ ಮಾತನಾಡಿದ ಅವರು, ಗಡಿಗಳನ್ನು ಕಾದು ಜನರು ಸುರಕ್ಷಿತವಾಗಿ ಇರಲು ಕಾರಣರಾದ ಯೋಧರ ಸೇವೆ ಸದಾ ಶ್ಲಾಘನೀಯ.

ತಮ್ಮ ಮನೆಯ ಪರಿಸರದಲ್ಲಿ ಸಮಾಜ ಬಾಹಿರ ಚಟುವಟಿಕೆಗಳು, ಮಾದಕ ವ್ಯಸನಿಗಳ ಉಪದ್ರ ಕಂಡು ಬಂದಲ್ಲಿ ಠಾಣೆಗೆ ಮಾಹಿತಿ ನೀಡುವ ಮೂಲಕ ಸಹಕಾರ ನೀಡಬೇಕೆಂದು ಕೋರಿದರು.

ನಿವೃತ್ತ ಯೋಧರ ಧ್ವನಿಯಾಗಿ ಪೊಲೀಸ್ ಇಲಾಖೆ ಕಾರ್ಯನಿರ್ವಹಿಸಲಿದೆ ಎಂದು ಪ್ರದೀಪ್ ಕುಮಾರ್ ಹೇಳಿದರು. ಯೋಧರ ಒಕ್ಕೂಟದ ಅಧ್ಯಕ್ಷ ಎಂ.ಜಿ. ಯತೀಶ್, ಉಪಾಧ್ಯಕ್ಷ ಪುಲಿಯಂಡ ಚಂಗಪ್ಪ, ಜಿ.ಕೆ. ದಿನೇಶ್ ಕುಮಾರ್, ಪುಟ್ಟೇಗೌಡ, ಬಿ.ಎಂ ರವೀಂದ್ರ, ಎಂ.ಎನ್. ಭೀಮಯ್ಯ, ಹರೀಶ್‌ಗೌಡ, ರಾಜಶೇಖರ, ಮನೋಹರ್, ಕಾಳಪ್ಪ, ಎಸ್.ಎಸ್ ಲೀಲಾವೇಣಿ, ಎಂ.ಎA. ವಿಜಯ, ಅಚ್ಚಯ್ಯ, ಸಿ.ಕೆ. ರಾಜು, ಕೆ.ಎ. ಚಂದ್ರೇಶ್, ಗೋಪಾಲಕೃಷ್ಣ, ಕೆ.ಬಿ. ಅಚ್ಚಯ್ಯ, ಎಂ.ಎA ಅಯ್ಯಣ್ಣ ಇದ್ದರು.