ಕೊಡ್ಲಿಪೇಟೆ,ಫೆ.೭: ಸರ್ಕಾರಿ ಬಸ್ ನಿಲ್ದಾಣದ ಕೊರತೆಯನ್ನು ಎದುರಿಸುತ್ತಿರುವ ಕೊಡ್ಲಿಪೇಟೆಯಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು ಎಂದು ರಾಜ್ಯ ಸಾರಿಗೆ ಸಚಿವ ರಾಮಲಿಂಗಾರೆಟ್ಟಿ ಭರವಸೆ ನೀಡಿದರು.

ಶನಿವಾರಸಂತೆಯಲ್ಲಿ ನೂತನವಾಗಿ ನಿರ್ಮಿಸಿರುವ ಸರ್ಕಾರಿ ಬಸ್ ನಿಲ್ದಾಣದ ಉದ್ಘಾಟನೆಗೆ ಆಗಮಿಸಿದ್ದ ಸಚಿವರು, ಶಾಸಕ ಡಾ. ಮಂತರ್ ಗೌಡ ಸೇರಿದಂತೆ ಸ್ಥಳೀಯ ಪ್ರಮುಖರೊಂದಿಗೆ ಕೊಡ್ಲಿಪೇಟೆಗೆ ಭೇಟಿ ನೀಡಿ, ಈಗಾಗಲೇ ಗುರುತಿಸಿರುವ ಜಾಗವನ್ನು ಪರಿಶೀಲಿಸಿ ಮಾತನಾಡಿದರು.

ಕೊಡ್ಲಿಪೇಟೆ ಬಸ್ ನಿಲ್ದಾಣ ನಿರ್ಮಾಣಕ್ಕೆ ಸಂಬAಧಿಸಿದAತೆ ಈಗಾಗಲೇ ಗುರುತಿಸಿರುವ ಜಾಗವನ್ನು ಇಲಾಖೆಗೆ ಹಸ್ತಾಂತರಿಸಿದ ಕೂಡಲೇ ನೂತನ ಬಸ್ ನಿಲ್ದಾಣ ನಿರ್ಮಾಣ ಪ್ರಕ್ರಿಯೆ ಪ್ರಾರಂಭಿಸಲಾಗುವುದೆAದು ಭರವಸೆ ನೀಡಿದರು.

ಈ ಹಿಂದೆ ಕೊಡ್ಲಿಪೇಟೆಗೆ ಆಗಮಿಸಿದ್ದ ಸಂದರ್ಭ ಶಾಸಕ ಮಂತರ್ ಗೌಡ ಮತ್ತು ಹಿರಿಯ ವಕೀಲರಾದ ಚಂದ್ರಮೌಳಿ ಅವರು ಬಸ್ ನಿಲ್ದಾಣ ನಿರ್ಮಾಣದ ಬಗ್ಗೆ ಗಮನ ಸೆಳೆದಿದ್ದರು. ಜಿಲ್ಲೆಯ ಗಡಿಭಾಗದ ಹೋಬಳಿ ಕೇಂದ್ರವಾದ ಕೊಡ್ಲಿಪೇಟೆಗೆ ಬಸ್ ನಿಲ್ದಾಣ ಅವಶ್ಯಕವಾಗಿದ್ದು, ಇದರಿಂದ ಈ ಭಾಗದ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಸಚಿವರು ಹೇಳಿದರು. ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಶನಿವಾರಸಂತೆಯಷ್ಟೇ ದೊಡ್ಡ ಹೋಬಳಿ ಕೇಂದ್ರ ಕೊಡ್ಲಿಪೇಟೆ. ಈ ಭಾಗದ ಜನರ ಬಹುಕಾಲದ ಬೇಡಿಕೆಯಾಗಿರುವ ಬಸ್ ನಿಲ್ದಾಣವನ್ನು ನಿರ್ಮಿಸಲು ಕ್ರಮ ವಹಿಸಲಾಗುವುದು. ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ಜಾಗವನ್ನು ಗುರುತಿಸಿದ್ದು, ೨೦೨೬ ರ ಬಜೆಟ್‌ನಲ್ಲಿ ಸೇರ್ಪಡೆ ಮಾಡಲು ಕ್ರಮವಹಿಸಲಾಗುವುದು. ಸ್ಥಳೀಯ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಾಗದ ದಾಖಲಾತಿಯನ್ನು ಇಲಾಖೆಗೆ ಹಸ್ತಾಂತರಿಸಿ ಅನುಷ್ಠಾನಕ್ಕೆ ತರುತ್ತೇವೆ. ಅಭಿವೃದ್ಧಿ ವಿಷಯದಲ್ಲಿ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು. ಕೆಶಿಪ್ ಯೋಜನೆಯ ರಸ್ತೆಯೂ ಸಹ ಇದೇ ಮಾರ್ಗದಲ್ಲಿದ್ದು, ಬಸ್ ನಿಲ್ದಾಣವಾದರೆ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಎಂದರು.

ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮೀಪದ ಕೆರಗನಹಳ್ಳಿ ಗ್ರಾಮದಲ್ಲಿರುವ ಸರಕಾರಿ ಜಾಗವನ್ನು ಬಸ್ ನಿಲ್ದಾಣಕ್ಕೆ ಗುರುತಿಸಲಾಗಿದೆ. ಸಾರಿಗೆ ನಿಗಮಕ್ಕೆ ಹಣ ಪಾವತಿಸಲು ಜಿಲ್ಲಾಧಿಕಾರಿಗಳಿಂದ ಆದೇಶವಾಗಿದ್ದು, ಶ್ರೀಘ್ರದಲ್ಲೇ ಇಲಾಖೆಗೆ ಜಾಗ ಹಸ್ತಾಂತರವಾಗಲಿದೆ ಎಂದು ತಾಲೂಕು ಬಗರ್ ಹುಕುಂ ಸಮಿತಿ ಸದಸ್ಯ ಜೆ.ಎಲ್. ಜನಾರ್ದನ್ ಮಾಹಿತಿ ನೀಡಿದರು.

ಈ ಸಂದರ್ಭ ಹ್ಯೆಕೋರ್ಟ್ ಹಿರಿಯ ವಕೀಲ ಹೆಚ್.ಎಸ್.ಚಂದ್ರಮೌಳಿ, ಪ್ರಮುಖರಾದ ಡಾ.ಉದಯ್‌ಕುಮಾರ್, ಔರಂಗಜೇಬ್, ಚಂದ್ರಶೇಖರ್, ತೇಜಕುಮಾರ್, ವೇದಕುಮಾರ್, ನಿಸಾರ್, ಸಾಬ್ಜಾನ್, ಮೋಹನ್ ಮೌರ್ಯ, ಜಯಪ್ಪ, ಪ್ರಸನ್ನ, ಅವಿನಾಶ್, ಚನ್ನಕೇಶವ ಸೇರಿದಂತೆ ಇತರರು ಇದ್ದರು.