ಕೂಡಿಗೆ, ಫೆ. ೭: ರಾಜ್ಯದಲ್ಲಿ ವ್ಯಾಪಾರ ಮಳಿಗೆಗಳ ಎದುರು ಅಳವಡಿಸುವ ನಾಮಫಲಕಗಳಲ್ಲಿ ಕಡ್ಡಾಯವಾಗಿ ಶೇ. ೬೦ ರಷ್ಟು ಭಾಗ ಕನ್ನಡದಲ್ಲಿ ಮಾಹಿತಿ ಇರಬೇಕೆಂದಿದ್ದರೂ ಬೈಲುಕೊಪ್ಪ ಟಿಬೇಟ್ ಕ್ಯಾಂಪ್ನ ಹೊಟೇಲ್, ಅಂಗಡಿ ಸೇರಿದಂತೆ ಇತ್ಯಾದಿ ಮಳೆಗೆಗಳಲ್ಲಿ ಈ ನಿಯಮ ಪಾಲನೆಯಾಗುತ್ತಿರದೇ ಇದ್ದುದ್ದನ್ನು ಗಮನಿಸಿದ ಕನ್ನಡ ಕಾವಲು ಪಡೆ ಕೊಡಗು ಜಿಲ್ಲಾಧ್ಯಕ್ಷ ಎಂ ಕೃಷ್ಣ ಅವರು, ಟಿಬೇಟಿಯನ್ ಕಚೇರಿಗೆ ತೆರಳಿ, ನಿಯಮ ಪಾಲನೆ ಮಾಡುವಂತೆ ಸಂಬAಧಿಸಿದವರಿಗೆ ಮನವಿ ಪತ್ರವನ್ನು ನೀಡಿದರು.
೧೫ ದಿನಗಳೊಳಗೆ ಈ ನಿಯಮ ಪಾಲನೆಯಾಗದಿದ್ದರೆ ಕರ್ನಾಟಕ ಕಾವಲುಪಡೆ ವತಿಯಿಂದ ಮೈಸೂರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಲಾಗುವುದು ಎಂದು ಕಾವಲು ಪಡೆ ಜಿಲ್ಲಾಧ್ಯಕ್ಷ ಎಂ.ಕೃಷ್ಣ ತಿಳಿಸಿದ್ದಾರೆ.