ಪೊನ್ನAಪೇಟೆ, ಫೆ. ೬: ರಾಷ್ಟಿçÃಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಆಚರಣೆ ಸಂಬAಧ ಪೊನ್ನಂಪೇಟೆಯಲ್ಲಿ ತಾ. ೮ ರಂದು ಹಿಂದೂ ಸಂಗಮ ಕಾರ್ಯಕ್ರಮ ಆಯೋಜಿಸಲಾಗಿದೆ.
ಕಾರ್ಯಕ್ರಮದ ಪೂರ್ವ ತಯಾರಿ ಭರದಿಂದ ಸಾಗಿದ್ದು, ಮಧ್ಯಾಹ್ನ ೩ ಗಂಟೆಗೆ ಪೊನ್ನಂಪೇಟೆ ಮಹಿಳಾ ಸಮಾಜದಿಂದ ಬೃಹತ್ ಶೋಭಾಯಾತ್ರೆ ಹೊರಟು ಬಸವೇಶ್ವರ ದೇವಸ್ಥಾನದ ಮುಂಭಾಗದಿAದ ಸಾಗಿ ಕೊಡವ ಸಮಾಜದ ಪಕ್ಕದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಸಂಪನ್ನಗೊಳ್ಳಲಿದೆ.
ನAತರ ಸಭಾ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಪರಹಿತಾನಂದ ಮಹಾರಾಜ್, ಪೊನ್ನಂಪೇಟೆ ಪಟ್ಟಣ ಸಹಕಾರಿ ಬ್ಯಾಂಕ್ ಅಧ್ಯಕ್ಷ ಚಿರಿಯಪಂಡ ಉಮೇಶ್ ಉತ್ತಪ್ಪ ಹಾಗೂ ದೇವತಕ್ಕರಾದ ಚೆಪ್ಪುಡಿರ ಪೊನ್ನಪ್ಪ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಯಶಸ್ವಿಗೆ ಹಿಂದೂ ಸಂಗಮ ತಾಲೂಕು ಆಯೋಜನ ಸಮಿತಿಯ ಪದಾಧಿಕಾರಿಗಳನ್ನು ಒಳಗೊಂಡ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಉತ್ಸಾಹಿ ಯುವಕರಿಗೆ ಅದರ ಹೊಣೆಗಾರಿಕೆಯನ್ನು ನೀಡಲಾಗಿದೆ. ಪೊನ್ನಂಪೇಟೆ ಪಟ್ಟಣ ವ್ಯಾಪ್ತಿಯ ಎಲ್ಲಾ ದೇವಸ್ಥಾನ ಸಮಿತಿ, ಸ್ಥಳೀಯ ಸಂಘ-ಸAಸ್ಥೆಗಳ ಪ್ರತಿನಿಧಿಗಳನ್ನು ಈಗಾಗಲೇ ಸಂಪರ್ಕಿಸಿ ಸಹಕಾರ ಕೋರಲಾಗಿದೆ . ಸುಮಾರು ೫೦೦೦ ಜನರು ಸೇರುವ ನಿರೀಕ್ಷೆಯಿದ್ದು, ಪೊನ್ನಂಪೇಟೆ ಪಟ್ಟಣವನ್ನು ಬಂಟಿAಗ್ಸ್ ಮತ್ತು ಕೇಸರಿ ಬಾವುಟಗಳನ್ನು ಕಟ್ಟಿ, ಅಲಂಕರಿಸಲಾಗಿದೆ.
ಶೋಭಾಯಾತ್ರೆಯ ಸಂದರ್ಭ ವಿವಿಧ ಕಲಾ ತಂಡಗಳಿAದ ನೃತ್ಯ ಮತ್ತು ಸ್ಥಳೀಯ ಸಂಘ-ಸAಸ್ಥೆಗಳ ಮಹಿಳೆಯರು ಕಲಶ ಹೊತ್ತು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ನಂತರ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿದೆ ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ.