ಶನಿವಾರಸAತೆ, ಫೆ ೬: ಸಮೀಪದ ನಿಡ್ತ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ಸಂತೆ ನಡೆಯಿತು.

ವಿದ್ಯಾರ್ಥಿಗಳು ತಮ್ಮ ಮನೆಯ ಆವರಣದಲ್ಲಿ, ಹೊಲ-ಗದ್ದೆಗಳಲ್ಲಿ ಬೆಳೆದಿದ್ದ ಸೊಪ್ಪು, ವಿವಿಧ ಬಗೆಯ ತರಕಾರಿ, ಹಣ್ಣುಹಂಪಲುಗಳು ಹಾಗೂ ಮನೆಯಲ್ಲೇ ಸ್ವತ: ಸಿದ್ದಪಡಿಸಿದ ತಿಂಡಿ-ತಿನಸುಗಳನ್ನು ತಂದು ಅಂಗಡಿ ಇಟ್ಟು ವ್ಯಾಪಾರ ಮಾಡಿ ವಿನೂತನ ಅನುಭವ ಪಡೆದರು. ಕೂಡಿಗೆ ಡಯಟ್ ಉಪನ್ಯಾಸಕ ಜಗದೀಶ್ ಮಕ್ಕಳ ಸಂತೆಯನ್ನು ಉದ್ಘಾಟಿಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜಯಂತ್ ಮಾತನಾಡಿ, ಮಕ್ಕಳಲ್ಲಿ ದೈನಂದಿನ ಜೀವನ ದಲ್ಲಿ ವ್ಯವಹಾರಿಕ ಜ್ಞಾನ ವೃದ್ಧಿಸುವ ದೃಷ್ಟಿಯಿಂದ ಮಕ್ಕಳ ಸಂತೆಯನ್ನು ಆಯೋಜಿಸಲಾಗಿದೆ ಎಂದರು. ಮುಖ್ಯಶಿಕ್ಷಕಿ ಎಂ.ಸಿ. ನಳಿನಿ ಮಾತನಾಡಿ, ದೈನಂದಿನ ಜೀವನದಲ್ಲಿ ಗಣಿತದ ಮಹತ್ವ ಹಾಗೂ ಪ್ರಾಮುಖ್ಯತೆ ಬಗ್ಗೆ ತಿಳಿಸಿದರು. ಶಿಕ್ಷಕರಾದ ಮಾರುತಿ ಅರೇರ್, ಡಿ.ಎಸ್.ಮಧುಕುಮಾರ್, ಎಂ.ವಿ.ರೂಪಾ, ಮಹಾದೇವಿ, ಗೀತಾ, ಅಕ್ಷರ ದಾಸೋಹ ಸಿಬ್ಬಂದಿ ನೇತ್ರಾವತಿ ಹಾಜರಿದ್ದರು.