ಸೋಮವಾರಪೇಟೆ, ಫೆ. ೬: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ, ಸಿ.ಎಂ.ಸಿ.ಎA. ಸಂಸ್ಥೆ ಬೆಂಗಳೂರು ಹಾಗೂ ನಾವು ಪ್ರತಿಷ್ಠಾನ ಕೊಡಗು ಇವರ ಸಹಯೋಗದಲ್ಲಿ ತೋಳೂರುಶೆಟ್ಟಳ್ಳಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಗ್ರಾಮ ಸಭೆ ನಡೆಯಿತು.

ವಿದ್ಯಾರ್ಥಿಗಳಾದ ಯಶ್ವಂತ್, ಸೌಮ್ಯ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವಾನಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ತೋಳೂರುಶೆಟ್ಟಳ್ಳಿ ಶಾಲೆ ವಿದ್ಯಾರ್ಥಿ ಸಂಭ್ರಮ್ ಮಾತನಾಡಿ, ಶಾಲೆಗೆ ಹೋಗುವ ರಸ್ತೆ ಗುಂಡಿಮಯವಾಗಿದ್ದು ಸರಿಪಡಿಸಿಕೊಡಿ ಎಂದು ಬೇಡಿಕೆ ಇಟ್ಟರು.

ಶಾಲೆಯ ಸುತ್ತ ಬೇಲಿ ಹಾಕಬೇಕು. ಕಾಡು ಕಡಿದು ಸರಿಪಡಿಸಬೇಕೆಂದು ತನುಶ್ರೀ ಮತ್ತು ಪುಣ್ಯ ಮನವಿ ಮಾಡಿದರು. ಶಾಲೆಯ ಅಭಿವೃದ್ಧಿಗೆ ಅನುದಾನ ಕಲ್ಪಿಸುವ ಭರವಸೆಯನ್ನು ಪಿಡಿಓ ಹರೀಶ್ ನೀಡಿದರು.

ಗ್ರಾ.ಪಂ. ಉಪಾಧ್ಯಕ್ಷೆ ಆರತಿ, ಎಸ್‌ಡಿಎಂಸಿ ಅಧ್ಯಕ್ಷ ಮೋಹನ್ ಕುಮಾರ್, ಮುಖ್ಯ ಶಿಕ್ಷಕಿಯರಾದ ವಾರಿಜಮಣಿ, ಎಸ್.ಜೆ. ಗಂಗಮ್ಮ ಪಂಚಾಯಿತಿ ಸದಸ್ಯರಾದ ಮೋಹಿತ್ ತಿಮ್ಮಯ್ಯ, ಎಂ.ಕೆ. ರುದ್ರಪ್ಪ, ಡಿ.ಎ. ನವೀನ್, ದಿವ್ಯ, ಉಷಾ, ನಾವು ಪ್ರತಿಷ್ಠಾನ ಸಂಸ್ಥೆಯ ಗೌತಮ್ ಕಿರಗಂದೂರು, ಸುಮನಾ, ಪಂಚಾಯಿತಿ ಕಾರ್ಯದರ್ಶಿ ಜವರಪ್ಪ ಇದ್ದರು.