ಕಣಿವೆ, ಫೆ. ೫: ಮೈಸೂರಿನಲ್ಲಿ ನಡೆದ ಮೈಸೂರು ಓಪನ್ ಆಲ್ ಇಂಡಿಯಾ ಲೆವೆಲ್ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಕುಶಾಲನಗರ ತಾಲೂಕಿನ ಅತ್ತೂರು ಜ್ಞಾನಗಂಗಾ ವಸತಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಸಾಧನೆ ತೋರಿದ್ದಾರೆ. ಮೊದಲ ಹಾಗೂ ದ್ವಿತೀಯ ಬಹುಮಾನಗಳನ್ನು ಗಳಿಸಿದ್ದಾರೆ.