ಕುಶಾಲನಗರ, ಫೆ. ೫: ಮಾದಾಪಟ್ಟಣ ಮತ್ತು ನಂಜರಾಯಪಟ್ಟಣ ಗ್ರಾಮದಲ್ಲಿ ಕಾವೇರಿ ನದಿ ಬಫರ್ ಝೋನ್ ಒತ್ತುವರಿ ಅಳತೆ ಮತ್ತು ಗುರುತು ಮಾಡುವ ಸಂಬAಧ ಸರ್ವೆ ಕಾರ್ಯಕ್ಕೆ ದಿನಾಂಕ ನಿಗದಿಪಡಿಸಲಾಗಿದೆ. ಕುಶಾಲನಗರ ತಾಲೂಕು ತಹಶೀಲ್ದಾರ್ ಕಾರ್ಯಾಲಯದಿಂದ ಸೋಮವಾರಪೇಟೆ ತಾಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಈ ಸಂಬAಧ ಪತ್ರ ಬರೆಯಲಾಗಿದ್ದು ತಾ. ೧೨ ರಂದು ಕುಶಾಲನಗರ ಸಮೀಪದ ಮಾದಾಪಟ್ಟಣದಲ್ಲಿ ಹರಿಯುವ ಕಾವೇರಿ ನದಿ ತಟದ ಅಳತೆ ಮತ್ತು ತಾ. ೧೯ ರಂದು ನಂಜರಾಯ ಪಟ್ಟಣ ಗ್ರಾಮದಲ್ಲಿ ಹರಿಯುವ ಕಾವೇರಿ ನದಿ ಬಫರ್ ಝೋನ್ ಒತ್ತುವರಿ ಸರ್ವೆ ಕಾರ್ಯ ಸಂಬAಧ ಸರ್ವೆ ಕಾರ್ಯಕ್ಕೆ ಸೂಚನೆ ನೀಡಲಾಗಿದೆ ಎಂದು ತಹಶೀಲ್ದಾರ್ ಕಿರಣ್ ಜಿ ಗೌರಯ್ಯ ತಿಳಿಸಿದ್ದಾರೆ.