ಸುAಟಿಕೊಪ್ಪ, ಫೆ. ೪: ಇಲ್ಲಿನ ಮಿಡ್ ಸಿಟಿ ಯೂತ್ ಕ್ಲಬ್ ವತಿಯಿಂದ ಆಯೋಜಿಸಲಾದ ಮೂರನೇ ವರ್ಷದ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾಟವು ಮೂರು ದಿನಗಳವರೆಗೆ ನಡೆದಿದ್ದು ರಾಜ್ಯದ ಹಲವು ಕಡೆಗಳಿಂದ ಆಗಮಿಸಿದ್ದ ೩೨ ತಂಡಗಳು ಭಾಗವಹಿಸಿದ್ದವು.

ಸುಂಟಿಕೊಪ್ಪ ಜಿ.ಯಂ.ಪಿ ಶಾಲಾ ಮೈದಾನದಲ್ಲಿ ನಡೆದ ಫೈನಲ್ ಪಂದ್ಯಾಟದಲ್ಲಿ ಟರ್ಫ್ ೪೫ ತಿರುಚಿ ತಂಡ ಹಾಗೂ ಟರ್ಫ್ ಎಫ್.ಸಿ ಊಟಿ ತಂಡಗಳು ಸೆಣಸಾಡಿದವು. ಟರ್ಫ್೪೫ ತಿರುಚಿ ತಂಡವು ೨-೦ ಗೋಲುಗಳಿಂದ ಜಯಗಳಿಸಿ ರೂ. ೨ ಲಕ್ಷದ ೫೦ ಸಾವಿರ ನಗದು ಹಾಗೂ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ಎಫ್.ಸಿ ಊಟಿ ತಂಡವು ರನ್ರ‍್ಸ್ ಪ್ರಶಸ್ತಿ ಗಳಿಸಿ ರೂ.೧ ಲಕ್ಷದ ೫೦ ಸಾವಿರ ನಗದು ಹಾಗೂ ಟ್ರೋಫಿಯನ್ನು ಪಡೆಯುವಲ್ಲಿ ಸಫಲವಾಯಿತು. ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎಂ. ಲತೀಫ್, ಕಾಫಿ ಬೆಳೆಗಾರರಾದ ವಿಶಾಲ್ ಶಿವಪ್ಪ, ಬ್ಲೂ ಬಾಯ್ಸ್ ಸಂಘದ ಗೌರವ ಅಧ್ಯಕ್ಷ ಟಿ.ಆರ್ ಪ್ರಸನ್ನ, ಗ್ರಾಮ ಪಂಚಾಯಿತಿ ಸದಸ್ಯರಾದ ರಫೀಕ್ ಖಾನ್, ಜಿನಾಸುದ್ದೀನ್, ಸಮಾಜ ಸೇವಕ ಪಿ.ಎಲ್ ಹರ್ಷದ್, ಸುಂಟಿಕೊಪ್ಪ ಮಿಡ್ ಸಿಟಿ ಸಂಘದ ಅಧ್ಯಕ್ಷ ಹಮೀದ್, ಕಾರ್ಯದರ್ಶಿ ಪಾಂಡ್ಯನ್, ಸೌಖತ್, ಶಿವಮೊಗ್ಗದ ಸಮಾಜ ಸೇವಕ ಜಿತೇಂದ್ರ ಉಪಸ್ಥಿತರಿದ್ದರು.

ವಿಜೇತರಿಗೆ ವೇದಿಕೆಯಲ್ಲಿದ್ದ ಗಣ್ಯರು ನಗದು ಹಾಗೂ ಟ್ರೋಫಿಯನ್ನು ವಿತರಿಸಿದರು.