ಸೋಮವಾರಪೇಟೆ, ಫೆ. ೪: ಕಾಫಿ ಕೊಯ್ಲು ಸಂದರ್ಭ ಕಾಂಕ್ರೀಟ್ ರಸ್ತೆ ಮಾಡಿದರೆ ರೈತರು ಹಾಗೂ ಕೃಷಿಕರಿಗೆ ತೊಂದ ರೆಯಾಗುತ್ತದೆ. ಈ ಹಿನ್ನೆಲೆ ಒಂದು ತಿಂಗಳ ಕಾಲ ಕಾಮಗಾರಿ ಯನ್ನು ಮುಂದೂಡುವAತೆ ನಾವು ಗಳೇ ಮನವಿ ಮಾಡಿದ್ದೆವು ಎಂದು ತೋಳೂರುಶೆಟ್ಟಳ್ಳಿಯ ಸ್ಥಳೀಯರು ಹಾಗೂ ವಲಯ ಕಾಂಗ್ರೆಸ್ ಪದಾಧಿಕಾರಿಗಳು ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಲಯ ಕಾಂಗ್ರೆಸ್ ಅಧ್ಯಕ್ಷ ಕೆ.ಯು. ಜಗದೀಶ್, ಕಾಫಿ ತೋಟದ ಕೆಲಸ ಇರುವುದರಿಂದ ತೋಳೂರು ಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರು ಶಾಸಕರನ್ನು ಭೇಟಿ ಮಾಡಿ ರಸ್ತೆ ಕಾಮಗಾರಿಯನ್ನು ಒಂದು ತಿಂಗಳ ಮಟ್ಟಿಗೆ ಮುಂದೂಡುವAತೆ ವಿನಂತಿಸಿದ್ದೆವು. ಹೀಗಾಗಿ ರಸ್ತೆ ಕಾಮಗಾರಿ ತಡವಾಗಿದೆ. ಇದನ್ನೇ ಬಿಜೆಪಿ ನಾಯಕರು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ರಸ್ತೆ ನಿರ್ಮಾಣಕ್ಕೆ ಅನುದಾನ ಒದಗಿಸಿರುವ ಶಾಸಕ ಮಂತರ್ ಗೌಡ ಅವರ ವಿರುದ್ಧ ಬಿಜೆಪಿಯವರು ಧಿಕ್ಕಾರ ಕೂಗಿರುವುದು ಖಂಡನೀಯ. ಅಭಿವೃದ್ಧಿಯನ್ನು ಸಹಿಸದ ಬಿಜೆಪಿ ಅನಗತ್ಯ ರಾಜಕೀಯ ಮಾಡುತ್ತಿದೆ ಎಂದು ದೂರಿದರು.

ಕಾಂಗ್ರೆಸ್ ಚುನಾವಣೆಗೂ ಮುನ್ನ ೫ ಗ್ಯಾರಂಟಿಗಳನ್ನು ನೀಡಿತ್ತು. ಅಧಿಕಾರಕ್ಕೆ ಬಂದ ನಂತರ ಅದನ್ನು ಈಡೇರಿಸಿದೆ. ಆದರೆ, ಬಿಜೆಪಿ ಈ ಯೋಜನೆ ಸಾಧ್ಯವಿಲ್ಲ. ಅಭಿವೃದ್ಧಿ ಕುಂಠಿತವಾಗುತ್ತದೆ ಎಂದು ಆರೋಪಿಸಿತ್ತು. ಆದರೆ, ಕ್ಷೇತ್ರದಲ್ಲಿ ಹತ್ತು ಹಲವು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಕುಶಾಲನಗರದಲ್ಲಿ ಬಸ್ ಡಿಪೊ, ಶನಿವಾರಸಂತೆಯಲ್ಲಿ ಬಸ್ ನಿಲ್ದಾಣ, ರಸ್ತೆಗಳ ಅಭಿವೃದ್ಧಿ ಸೇರಿದಂತೆ ಹಲವು ಯೋಜನೆಗಳು ಜಿಲ್ಲೆಯಲ್ಲಿ ನಡೆಯುತ್ತಿವೆ. ಇದನ್ನು ಸಹಿಸದ ಬಿಜೆಪಿ ಕುಂಟು ನೆಪಗಳನ್ನು ಇರಿಸಿಕೊಂಡು ಪ್ರತಿಭಟನೆ ಮಾಡುತ್ತಿದೆ. ಪ್ರತಿಭಟನೆಯಲ್ಲಿ ಪಾಲ್ಗೊಂಡು ಶಾಸಕರಿಗೆ ಧಿಕ್ಕಾರ ಕೂಗಿದ ಮಾಜಿ ಎಂಎಲ್‌ಸಿಯವರು ನಮ್ಮ ಭಾಗಕ್ಕೆ ನೀಡಿರುವ ಕೊಡುಗೆಯನ್ನು ತಿಳಿಸಬೇಕಿದೆ ಎಂದರು. ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ೨೫ ವರ್ಷ ಅಧಿಕಾರ ಮಾಡಿದರೂ, ಈ ಭಾಗಕ್ಕೆ ಯಾವುದೇ ಯೋಜನೆಗಳನ್ನು ತಂದಿಲ್ಲ. ರಾಜ್ಯ ಹೆದ್ದಾರಿಯಾಗಿರುವ ರಸ್ತೆ ಗುಂಡಿಮಯವಾಗಿ ಸಾಕಷ್ಟು ವರ್ಷಗಳೇ ಕಳೆದಿದ್ದರೂ, ಸಮರ್ಪಕ ರಸ್ತೆ ಮಾಡಿಕೊಡುವಂತೆ ಹತ್ತು ಹಲವು ಬಾರಿ ಮನವಿ ಮಾಡಿದರೂ, ಯಾವುದೇ ಪ್ರಯೋಜನವಾಗಿರಲಿಲ್ಲ ಎಂದರು.

ಕಳೆದ ಎರಡೂವರೆ ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಶಾಸಕರು ನಮ್ಮ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಇನಕನಹಳ್ಳಿಯಿಂದ ಕೂತಿ ಮಾರ್ಗವಾಗಿ ಎಡದಂಟೆ ರಸ್ತೆಗೆ ರೂ. ೧೦ ಕೋಟಿ ಅನುದಾನ ಬಿಡುಗಡೆಯಾಗಿದೆ. ಬಿಜೆಪಿ ಅವಧಿಯಲ್ಲಿ ಅಭಿವೃದ್ಧಿ ಶೂನ್ಯವಾಗಿತ್ತು ಎಂದು ಜಗದೀಶ್ ಹೇಳಿದರು. ಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಸದಸ್ಯ ಯು.ಕೆ. ಶಿವರಾಜು, ತೋಳೂರುಶೆಟ್ಟಳ್ಳಿ ವಲಯ ಕಾಂಗ್ರೆಸ್ ಉಪಾಧ್ಯಕ್ಷ ಹೆಚ್.ಟಿ. ಶಾಂತಪ್ಪ, ವಲಯ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಐ.ಟಿ. ಬಸವರಾಜು ಹಾಗೂ ಗ್ರಾಮಸ್ಥರಾದ ಕುಶಾಲಪ್ಪ ಇದ್ದರು.