ನಾಪೋಕ್ಲು, ಫೆ. ೪: ನಾಪೋಕ್ಲು ಶೌರ್ಯ ತಂಡದ ಸದಸ್ಯರು ವಾತ್ಸಲ್ಯ ಮನೆ ನಿರ್ಮಾಣಕ್ಕೆ ಶ್ರಮದಾನದ (ಸೇವೆ) ಮೂಲಕ ಮನೆಯ ತಳಪಾಯ ಕಾರ್ಯವನ್ನು ಮಾಡಿಕೊಟ್ಟು ಸಮಾಜಕ್ಕೆ ಮಾದರಿಯಾದರು.
ಇಲ್ಲಿಗೆ ಸಮೀಪದ ಕೋಕೇರಿ ಗ್ರಾಮದ ನಿವಾಸಿ ಕೂಲಿ ಕಾರ್ಮಿಕೆ ಜಾಜಿ ಎಂಬವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ವತಿಯಿಂದ ವಾತ್ಸಲ್ಯ ಮನೆ ನಿರ್ಮಾಣಕ್ಕೆ ಈಗಾಗಲೇ ಭೂಮಿಪೂಜೆ ನೆರವೇರಿಸಲಾಗಿದೆ. ಈ ಮನೆ ನಿರ್ಮಾಣಕ್ಕೆ ಬೇಕಾದ ತಳಪಾಯ ಕಾರ್ಯವನ್ನು ನಾಪೋಕ್ಲು ಶೌರ್ಯ ತಂಡದ ಸದಸ್ಯರು ಶ್ರಮದಾನದ ಮೂಲಕ ಮಾಡಿಕೊಟ್ಟು ಪ್ರಸಂಶೆಗೆ ಪಾತ್ರರಾದರು.
ನಾಪೋಕ್ಲು ಶೌರ್ಯ ತಂಡದ ಬಾಳೆಯಡ ದಿವ್ಯ ಮಂದಪ್ಪ ಅವರ ಮುಂದಾಳತ್ವದ ಶ್ರಮದಾನದಲ್ಲಿ ಸೇವಾ ಪ್ರತಿನಿಧಿ ಪ್ರಭಾ, ಸದಸ್ಯರುಗಳಾದ ಸೀನ ಮಾಧವನ್, ಶಂಕರ, ಶರವಣ, ಮಾಯಿಲಪ್ಪ, ಉಮಾಲಕ್ಷಿö್ಮ, ಚಂದ್ರಕಲಾ, ಶ್ಯಾಮಲಾ ಹಾಗೂ ಜಾಜಿ ಮನೆಯವರು ಹಾಜರಿದ್ದರು.