*ಗೋಣಿಕೊಪ್ಪ, ಫೆ. ೪: ಇಲ್ಲಿನ ಹರಿಶ್ಚಂದ್ರಪುರ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಹೆಚ್.ಬಿ ಸ್ಕಿçÃನಿಂಗ್ ಮಾಡಲಾಯಿತು.

ರಾಷ್ಟಿçÃಯ ಜಂತುಹುಳು ನಿವಾರಣೆ, ವಿಟಮಿನ್-ಎ, ಸಾರ್ವತ್ರಿಕ ಲಸಿಕಾ, ಆರೋಗ್ಯ, ಶಿಕ್ಷಣ, ಪೌಷ್ಟಿಕ ಆಹಾರಗಳ ಬಗ್ಗೆ ರಾಷ್ಟಿçÃಯ ಬಾಲ್ಯ ಸ್ವಾಸ್ಥ ಕಾರ್ಯಕ್ರಮದ ವೈದ್ಯಾಧಿಕಾರಿ ಡಾ. ಶ್ರುತಿ ಮಾಹಿತಿ ನೀಡಿದರು.

ಶುಶ್ರೂಷಕಾಧಿಕಾರಿ ರಂಜಿನಿ ಸಿ.ಆರ್., ನೇತ್ರಾಧಿಕಾರಿ ಗ್ರೀಷ್ಮ ಎಂ.ಕೆ., ಮಕ್ಕಳು ಮತ್ತು ಪೋಷಕ ವೃಂದದವರು, ಅಂಗನವಾಡಿ ಕಾರ್ಯಕರ್ತೆ ಲತಾ ಆರ್., ಸಹಾಯಕಿ ಯಮುನಾ ಬಿ.ಎಸ್ ಇದ್ದರು.