ಕಡಂಗ, ಫೆ. ೩: ಸ್ಥಳೀಯ ವಿಜಯ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯ ವಿದ್ಯಾಸಂಸ್ಥೆಯ ಅಧ್ಯಕ್ಷ ಬಲ್ಲö್ಯಂಡ ಪಿ. ಬಿದ್ದಪ್ಪ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಪ್ರಾಂಶುಪಾಲರಾದ ಡಾ. ಸುಲೋಚನಾ ನಾರಾಯಣ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತಿನಿಂದ ಸಮಾಜವನ್ನು ಕಟ್ಟುವ ಕೆಲಸವಾಗಬೇಕು, ಬರಿ ಓದಿನಿಂದ ಮಾತ್ರ ಉತ್ತಮ ನಾಗರಿಕರಾಗಲು ಸಾಧ್ಯವಿಲ್ಲ. ಶಿಸ್ತು ಮತ್ತು ಉತ್ತಮ ನಡತೆಯಿಂದ ಉತ್ತಮ ಪ್ರಜೆಯಾಗಲು ಸಾಧ್ಯವೆಂದರು.
ಸAಸ್ಥೆಯ ಅಧ್ಯಕ್ಷ ಬಲ್ಲö್ಯಂಡ ಪಿ. ಬಿದ್ದಪ್ಪ ಮಾತನಾಡಿ, ಗ್ರಾಮೀಣ ಭಾಗದಲ್ಲಿರುವ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ಕೊಡಲು ಸಂಸ್ಥೆಯು ಸದಾ ಮುಂದಿದ್ದು ಸುತ್ತಮುತ್ತಲಿನ ಗ್ರಾಮಸ್ಥರು ಮುಂದಿನ ವರ್ಷಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾ ಅರ್ಹತೆಗೆ ನಮ್ಮ ಸಂಸ್ಥೆಯನ್ನು ಆಯ್ಕೆ ಮಾಡಿ ವಿವಿಧ ಸೌಲಭ್ಯಗಳ ಸದುಪಯೋಗ ಪಡೆಯಬೇಕೆಂದರು.
ಕಳೆದ ವರ್ಷ ಎಲ್ಲಾ ತರಗತಿಗಳಲ್ಲಿ ಪ್ರಥಮ ಸ್ಥಾನ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೂ ಪಾರಿತೋಷಕವನ್ನು ನೀಡಲಾಯಿತು. ವೇದಿಕೆಯಲ್ಲಿ ನಿವೃತ್ತ ಸೈನಿಕರಾದ ಬಾಚುರ ಪೂಣಚ್ಚ ಮತ್ತು ಪತ್ರಕರ್ತರಾದ ನೌಫಲ್ ಎಂ.ಬಿ. ಅವರನ್ನು ಸನ್ಮಾನಿಸಲಾಯಿತು.
ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯರಾದ ಕೋದಂಡ ಪಿ. ಸುಬ್ಬಯ್ಯ, ಬಲ್ಲಚಂಡ ಮಾದಯ್ಯ, ಕಾಂಗಿರ ಎಸ್. ಮಾಚಯ್ಯ, ಬಲ್ಲಚಂಡ ಗೌತಮ್, ಕೋಡಿರ ಪೊನ್ನು ಮಂದಣ್ಣ, ವೀರಾಜಪೇಟೆ ತಾಲೂಕು ಶಿಕ್ಷಣ ಕ್ಷೇತ್ರದ ಸಂಪನ್ಮೂಲ ವ್ಯಕ್ತಿಗಳಾದ ಟಿ.ಬಿ. ರಾಜೇಶ್ವರಿ, ಶೈಲಾ ಟಿ.ವಿ., ರುಕ್ಮಿಣಿ ಕೆ.ಎಲ್. ಅವರುಗಳು ಹಾಜರಿದ್ದರು.