ವೀರಾಜಪೇಟೆ, ಫೆ. ೩: ಬೆಂಗಳೂರಿನ ಕಂಡೋರ್ ಅಂತರರಾಷ್ಟಿçÃಯ ಶಾಲೆಯಲ್ಲಿ ನಡೆದ ರಾಷ್ಟçಮಟ್ಟದ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಗೋಣಿಕೊಪ್ಪದ ಸಂತ ಅಂತೋಣಿ ಶಾಲೆಯ ೮ನೇ ತರಗತಿ ವಿದ್ಯಾರ್ಥಿ ಎನ್.ಎಂ. ಕೃತನ್ ಕಾರ್ಯಪ್ಪ ದ್ವಿತೀಯ ಸ್ಥಾನ ಪಡೆದಿದ್ದಾರೆ. ಸುಮಾರು ನೂರಕ್ಕೂ ಅಧಿಕ ಕರಾಟೆ ಪಟುಗಳು ವಿವಿಧ ವಿಭಾಗಗಳಲ್ಲಿ ಭಾಗವಹಿಸಿದ್ದರು. ಇವರು ಕರಾಟೆಪಟು ಈಶ್ವರ್ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ. ಇವರು ದೇವರಪುರ ಗ್ರಾಮದ ನಾಯಮಾಡ ಲವಿತಾ ಪೊನ್ನಪ್ಪ ಅವರ ಪುತ್ರ.