ವೀರಾಜಪೇಟೆ, ಫೆ. ೩: ವೀರಾಜಪೇಟೆ ರೋಟರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಚಿರಂತ್, ಚರಣ್, ಲಿಥಿನ್ ಮತ್ತು ಯದುನಂದನ್ (೭ನೇ ತರಗತಿ), ರಕ್ಷಿತಾ (೫ನೇ ತರಗತಿ), ಫಾದಿಲ್ ಮತ್ತು ರಕ್ಷಕ್ (೪ನೇ ತರಗತಿ) ಅವರುಗಳು ಕುಶಾಲನಗರದ ರೈತ ಭವನದಲ್ಲಿ ನಡೆದ ೪ನೇ ರಾಜ್ಯ ಮಟ್ಟದ ಅಬಾಕಸ್ ಮತ್ತು ಕ್ಯಾಲಿಗ್ರಫಿ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದುಕೊಂಡಿದ್ದಾರೆ.
ಚಿರAತ್ ಅಬಾಕಸ್ ಹಾಗೂ ಕ್ಯಾಲಿಗ್ರಫಿ ಎರಡರಲ್ಲೂ ಪ್ರಥಮ ಬಹುಮಾನವನ್ನು ಮತ್ತು ಯದುನಂದನ್ ಅಬಾಕಸ್‌ನಲ್ಲಿ ತೃತೀಯ ಹಾಗೂ ಕ್ಯಾಲಿಗ್ರಫಿಯಲ್ಲಿ ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ.