ಮಡಿಕೇರಿ,ಫೆ.೨: ಟೆಲಿಕಾಂ ಸಂಸ್ಥೆಯೊAದು ಗ್ರಾಹಕರಿಗೆ ಪ್ರೀ-ಪೇಯ್ಡ್ ಸೌಲಭ್ಯ ಬದಲು ಪೋಸ್ಟ್-ಪೇ ಸೌಲಭ್ಯ ಒದಗಿಸಿದಕ್ಕೆ ಸಂಸ್ಥೆಗೆ ರೂ.೧೦,೦೦೦ ದಂಡವನ್ನು ವಿಧಿಸಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
ವೀರಾಜಪೇಟೆ ತಾಲೂಕಿನ ನಿವಾಸಿ ಭರತೇಶ್ ಜಿ.ಎಂ ಎಂಬವರು ಜೂನ್-೨೦೨೫ರಲ್ಲಿ ಏರ್ಟೆಲ್ ಸರ್ವೀಸ್ ಕಚೇರಿಗೆ ಭೇಟಿ ನೀಡಿ ತಮ್ಮ ಕಾರ್ಪೋರೇಟ್ ಸಂಪರ್ಕವನ್ನು ಏರ್ಟೆಲ್ ಪ್ರಿ-ಪೇಡ್ಗೆ ಪೋರ್ಟ್ (ಬದಲಾಯಿಸಿ) ಮಾಡಲು ಮನವಿ ಮಾಡಿದ್ದಾರೆ.ಇದಕ್ಕೆ ಪೋರ್ಟ್ ಔಟ್ ಮಾಡಿಕೊಳ್ಳಿ, ನಂತರ ಬದಲಾಯಿಸಿಕೊಡುತ್ತೇವೆ ಎಂದು ಕಚೇರಿ ಸಿಬ್ಬಂದಿ ತಿಳಿಸಿದ್ದಾರೆ. ಅವರ ಸಲಹೆ ಮೇರೆಗೆ ಭರತೇಶ್ ಅವರು ತಮ್ಮ ಸಂಪರ್ಕವನ್ನು ಪೋರ್ಟ್ ಔಟ್ ಮಾಡಿ ಪ್ರೀ-ಪೇಡ್ ಸಿಮ್ ಅನ್ನು ಪಡೆದುಕೊಂಡಿದ್ದಾರೆ.
ಕೆಲವು ದಿನಗಳ ನಂತರ ಭರತೇಶ್ ಅವರಿಗೆ “ನಿಮ್ಮ ಪೋಸ್ಟ್ ಪೇಡ್ ಸಂಪರ್ಕವನ್ನು ನೀಡಲಾಗಿದೆ”ೆ ಎಂದು ಇ-ಮೇಲ್ ಬಂದಿದೆ. ಭರತೇಶ್ ಅವರ ಅನುಮತಿ ಇಲ್ಲದೆ ಏರ್ಟೆಲ್ ಪೋಸ್ಟ್-ಪೇಡ್ ಪ್ಲಾನ್ ಅನ್ನು ಆಕ್ಟಿವೇಟ್ ಮಾಡಲಾಗಿದೆ. ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಈ ವಿಷಯದ ಬಗ್ಗೆ ಏರ್ಟೆಲ್ ಕಂಪನಿಯವರಿಗೆ ಮೇಲ್ ಮಾಡಿದಾಗ ಪ್ರೀ-ಪೇಡ್ ಸಂಪರ್ಕಕ್ಕೆ ೯೦ ದಿನ ಕಾಯುವಂತೆ ತಿಳಿಸಿದ್ದಾರೆ.
ಆದರೆ ಇಲ್ಲಿಯವರೆಗೂ ಬದಲಾಯಿಸದ ಕಾರಣ ಹಾಗೂ ಪ್ರತಿ ಮಾಹೆ ಪೋಸ್ಟ್ ಪೇಡ್ ಬಿಲ್ ಕೂಡ ಬರುತ್ತಿರುವುದರಿಂದ ಭರತೇಶ್ ಅವರು ಗ್ರಾಹಕರ ಆಯೋಗಕ್ಕೆ ದೂರು ನೀಡಿದ್ದಾರೆ.
ಪ್ರಕರಣವನ್ನು ಆಯೋಗವು ದಾಖಲು ಮಾಡಿಕೊಂಡು ಉಭಯ ಕಡೆಯವರ ವಾದ-ವಿವಾದಗಳನ್ನು ಕೇಳಿ, ದಾಖಲಾತಿಗಳನ್ನು ಪರಿಶೀಲಿಸಿದ ನಂತರ ಪ್ರಿ-ಪೇಡ್ ಸೌಲಭ್ಯದ ಬದಲು ಪೋಸ್ಟ್-ಪೇ ಏರ್ಟೆಲ್ ಸರ್ವೀಸ್ ಅನ್ನು ಅನುಮತಿ ಇಲ್ಲದೆ ನೀಡಿರುವುದನ್ನು ಗಮನಿಸಿದೆ.
ಸಂಸ್ಥೆಯು ಅನುಚಿತ ವ್ಯಾಪಾರ ಪದ್ಧತಿಯನ್ನು ಅನುಸರಿಸಿರುವುದರಿಂದ ದೂರುದಾರರು ಪೋಸ್ಟ್-ಪೇಗೆ ಪಾವತಿಸಿರುವ ಮೊತ್ತ ರೂ.೧,೪೧೮ ಜೊತೆಗೆ ಅವರಿಗೆ ಉಂಟಾದ ಮಾನಸಿಕ ವೇದನೆಗೆ ಪರಿಹಾರವಾಗಿ ರೂ.೫,೦೦೦ ಮತ್ತು ವ್ಯಾಜ್ಯದ ಖರ್ಚು ವೆಚ್ಚಗಳಿಗೆ ರೂ.೫,೦೦೦ ಗಳನ್ನು ಪಾವತಿಸಬೇಕೆಂದು ಜಿಲ್ಲಾ ಗ್ರಾಹಕರ ಆಯೋಗದ ಪ್ರಭಾರ ಅಧ್ಯಕ್ಷರಾದ ಡಾ.ಸಿ.ರೇಣುಕಾಂಬ ಹಾಗೂ ಸದಸ್ಯರಾದ ಗೌರಮ್ಮಣ್ಣಿ ಅವರುಗಳು ಆದೇಶ ನೀಡಿದ್ದಾರೆ.