ಸುಂಟಿಕೊಪ್ಪ: ಇಲ್ಲಿನ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ೭೭ನೇ ಗಣರಾಜ್ಯೋತ್ಸವ ಆಚರಿಸಲಾಯಿತು.

ಇದೇ ಸಂದರ್ಭದಲ್ಲಿ ಕಂಬಿಬಾಣೆಯ ಕಾಫಿ ಬೆಳೆಗಾರ ಸಮಾಜ ಸೇವಕ ಟಿ.ಕೆ.ಸಾಯಿಕುಮಾರ್ ಅವರು ನಿರ್ಮಿಸಿಕೊಟ್ಟ ಆಟೋ ನಿಲ್ದಾಣದ ಸ್ವಾಗತ ಕಮಾನ್ ಅನ್ನು ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಗಣರಾಜ್ಯೋತ್ಸವ ಅಂಗವಾಗಿ ಆಟೋಚಾಲಕ ಮತ್ತು ಮಾಲೀಕರ ಸಂಘದವರು ರಕ್ತದಾನ ಶಿಬಿರವನ್ನು ಏರ್ಪಡಿಸಿರುವುದು ಶ್ಲಾಘನೀಯ. ಹಗಲು ರಾತ್ರಿ ಎನ್ನದೇ ಸಾರ್ವಜನಿಕ ಸೇವೆಯಲ್ಲಿರುವÀ ಆಟೋಚಾಲಕರು ಸಮಾಜಮುಖಿಯಾದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಶ್ಲಾಘಿಸಿದರು..

ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಸಹಸ್ರಹಾರು ಜನರ ತ್ಯಾಗ ಬಲಿದಾನದಿಂದ ನಾವು ಸ್ವಾತಂತ್ರö್ಯ ಪಡೆದಿದ್ದೇವೆ. ತÀನ್ನದೆ ಆದ ಸಂವಿಧಾನವನ್ನು ಹೊಂದಿ ಬಲಿಷ್ಠ ಮತ್ತು ಸಧೃಡ ಭಾರತವನ್ನು ಕಟ್ಟುವ ನಿಟ್ಟಿನಲ್ಲಿ ನಾವೆಲ್ಲಾರೂ ಕೈಜೋಡಿಸಿಬೇಕು. ಸಂವಿಧಾನವನ್ನು ಸಮಾನತೆ ಸಾಮರಸ್ಯ ಮತ್ತು ಭ್ರಾತೃತ್ವ ನೆಲೆಗಟ್ಟಿನಲ್ಲಿ ರಚಿಸಲಾಗಿದೆ. ಪ್ರಸ್ತುತ ಭಾರತ ಹೇಗಿದೆ ಎಂಬುದನ್ನು ನಾವು ಆತ್ಮಾವಲೋಕನಾ ಮಾಡಿಕೊಂಡು ಮುಂದುವರಿಯಬೇಕೆAದು ಹೇಳಿದರು.

ಈ ಸಂದರ್ಭ ಗ್ರಾ.ಪಂ. ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಸದಸ್ಯರುಗಳಾದ ಪಿ.ಎಫ್. ಸಬಾಸ್ಟೀನ್, ಶಬ್ಬೀರ್, ಆಲಿಕುಟ್ಟಿ, ರಫೀಕ್‌ಖಾನ್, ಪ್ರಸಾದ್‌ಕುಟ್ಟಪ್ಪ, ಸೋಮನಾಥ್, ವಸಂತಿ, ಶಾಂತಿ, ನಾಗರತ್ನ, ವಾಹನ ಚಾಲಕರ ಸಂಘದ ಅಧ್ಯಕ್ಷ ಕಿಟ್ಟಣ್ಣ ರೈ, ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಶರೀಫ್, ಪ್ರಧಾನ ಕಾರ್ಯದರ್ಶಿ ಸಚಿನ್ ಸಂಘದ ಪದಾಧಿಕಾರಿಗಳು ಇದ್ದರು.

ಸುಂಟಿಕೊಪ್ಪ: ದೇಶದ ಪ್ರತಿಯೊಬ್ಬ ನಾಗರಿಕರಿಗೆ ಸಂವಿಧಾನದ ಆರಿವು ಇರಬೇಕು ಸಂವಿಧಾನ ಓದದವರು ದೇಶದ ಅಭಿವೃದ್ಧಿಯ ಹಿನ್ನಡೆಗೆ ಕಾರಣರಾಗುತ್ತಾರೆ ಎಂದು ಶಿಕ್ಷಕ ಕಾಜೂರು ಸತೀಶ್ ಅಭಿಪ್ರಾಯಿಸಿದರು.

ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಮತ್ತು ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸುಂಟಿಕೊಪ್ಪ ಜಿ.ಎಂ.ಪಿ.ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದ ಅವರು, ನಾಗರಿಕರಿಗೆ ತಮ್ಮ ಹಕ್ಕುಗಳು ಮತ್ತು ಜವಬ್ದಾರಿಗಳ ಬಗ್ಗೆ ಅರಿವಿದ್ದು, ಸಂವಿಧಾನನ ಬದ್ಧವಾಗಿ ನಡೆದುಕೊಂಡಾಗ ದೇಶದ ಏಳಿಗೆಗೆ ನಾವು ಕೊಡುಗೆ ನೀಡಿದಂತಾಗುತ್ತದೆ. ಗಣರಾಜ್ಯ ಎಂದರೆ ಜನರ ಆಡಳಿತ ಎಂದು ಅರ್ಥ ೧೯೪೭ ರಿಂದ ೧೯೬೦ರವರೆಗೆ ಸಂವಿಧಾನ ಇಲ್ಲದಿದ್ದ ಕಾಲಘಟ್ಟದಲ್ಲಿ ೧೯೩೫ರ ಆಂಗ್ಲರ ಕಾಯ್ದೆ ಅಡಿಯಲ್ಲಿ ನಾವು ಆಡಳಿತ ಮಾಡಿದ್ದೇವೆ. ಭಾರತದಂತಹ ವಿವಿಧ ಧರ್ಮಗಳ ವಿವಿಧ ಭಾಷೆಗಳ ಬಹು ಸಂಸ್ಕೃತಿಯ ನಾಡಿನಲ್ಲಿ ಎಲ್ಲಾರೂ ಒಪ್ಪುವಂತಹ ಸಂವಿಧಾನ ರಚನೆ ಸವಾಲಿನ ಕೆಲಸವಾಗಿತ್ತು ಎಂದು ಸ್ಮರಿಸಿದರು.

ಗ್ರಾ.ಪಂ. ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್ ಮಾತನಾದರು. ಪುಟಾಣಿ ವಿದ್ಯಾರ್ಥಿಗಳ ಭಾರತಾಂಬೆಗೆ ನಮನ ಸಲ್ಲಿಸುವ ನೃತ್ಯ ಜನಮನ ರಂಜಿಸಿತು. ದೇಶಭಕ್ತಿ ಗೀತೆಗಳನ್ನು ಹಾಡುವ ಮೂಲಕ ವಿವಿಧ ಶಾಲೆಗಳ ಮಕ್ಕಳು ದೇಶಾಭಿಮಾನ ಮೂಡಿಸಿದರು.. ಇದೇ ಸಂದರ್ಭದಲ್ಲಿ ಮೈಸೂರು ವಿಶ್ವ ವಿದ್ಯಾನಿಲಯದಿಂದ ಎಂ.ಎಡ್ ಪದÀವಿಯಲ್ಲಿ ೫ ಚಿನ್ನದ ಪದಕಕ್ಕೆ ಭಾಜನರಾದ ಬಿ.ಪಿ.ಕೃತಿಕಾ, ನಿವೃತ್ತಿ ಶಿಕ್ಷಕರುಗಳಾದ ಗೀತಾ ಪಾರ್ಥ, ಮುತ್ತಮ್ಮ, ನಿವೃತ್ತ ಉಪನ್ಯಾಸಕಿ ಪದ್ಮ, ಸುಂಟಿಕೊಪ್ಪ ಪಂಚಾಯಿತಿ ಸಿಬ್ಬಂದಿ ಮಂದಣ್ಣ ಅವರುಗಳನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಗ್ರಾ.ಪಂ. ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಸದಸ್ಯರುಗಳಾದ ಪಿ.ಎಫ್.ಸಬಾಸ್ಟೀನ್, ಶಬ್ಬೀರ್, ಆಲಿಕುಟ್ಟಿ, ರಫೀಕ್‌ಖಾನ್, ಪ್ರಸಾದ್‌ಕುಟ್ಟಪ್ಪ, ಸೋಮನಾಥ್, ವಸಂತಿ, ಶಾಂತಿ, ನಾಗರತ್ನ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್, ಗ್ರಾ.ಪಂ.ಮಾಜಿ ಅಧ್ಯಕ್ಷರುಗಳಾದ ಕೆ.ಇ.ಕರೀಂ, ರೋಸ್‌ಮೇರಿ ರಾಡ್ರಿಗಸ್, ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿಯ ಕಾರ್ಯದರ್ಶಿ ರಹೆನಾ ಫೈರೋಜ್ ಸೇರಿದಂತೆ ಮತ್ತಿತರರು ಇದ್ದರು.ಗುಡ್ಡೆಹೊಸೂರು: ಇಲ್ಲಿನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಗಣರಾಜೋತ್ಸವ ಮತ್ತು ಮಕ್ಕಳ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ನಡೆಯಿತು. ಧ್ವಜಾರೋಹಣವನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ಆರ್.ನಾಗೇಂದ್ರ ನೆರವೇರಿಸಿದರು. ಈ ಸಂಧರ್ಭ ಮುಖ್ಯ ಅತಿಥಿಯಾಗಿ ನಿವೃತ್ತ ಮುಖ್ಯ ಶಿಕ್ಷಕಿ ಕೆ.ಕೆ.ಶೇಷಮ್ಮ ಮತ್ತು ಲಲಿತಾಸುಬ್ಬಯ್ಯ ಗೌಡ ಅವರು ಪಾಲ್ಗೊಡಿದ್ದರು. ಇದೇ ಸಂದರ್ಭ ಸಾರ್ವಜನಿಕರಿಗೆ ವಿವಿಧ ಕ್ರೀಡಾಕೂಟ ಏರ್ಪಡಿಸಲಾಗಿತ್ತು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಆರ್.ನಾಗೇಂದ್ರ ವಹಿಸಿದ್ದರು. ಕಾರ್ಯಕ್ರಮ ಉದ್ಘಾಟನೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೌಮ್ಯ ಭರತ್ ನೆರವೇರಿಸಿದರು. ಮುಖ್ಯಭಾಷಣಕಾರರಾಗಿ ನಿವೃತ್ತ ಕಲಾ ಶಿಕ್ಷಕ ಉ.ರಾ.ನಾಗೇಶ್ ಪಾಲ್ಗೊಂಡರು. ಮಖ್ಯ ಅಥಿತಿಗಳಾಗಿ ದತ್ತಿ ನಿಧಿ ಸ್ಥಾಪಕರಾದ ಆಮೆಮನೆ ಪಾರ್ವತಿ ಸೇರಿದಂತೆ ಇನ್ನಿತರರು ಹಾಜರಿದ್ದರು. ಇದೇ ಸಂದರ್ಭ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಶ್ರೀಮಂಗಲ: ವಿಶಿಷ್ಟ ಸಂಸ್ಕೃತಿ, ಆಚಾರ, ಪದ್ಧತಿ-ಪರಂಪರೆಯನ್ನು ಹೊಂದಿರುವ ಪುಟ್ಟ ಜಿಲ್ಲೆ ಕೊಡಗು ಇಂದು ಕ್ರೀಡಾ ಕ್ಷೇತ್ರದಲ್ಲಿ ತನ್ನದೇ ಆದಂತ ಛಾಪನ್ನು ಮೂಡಿಸುತ್ತಿದ್ದು, ಯುವ ಜನಾಂಗ ಈ ನಿಟ್ಟಿನಲ್ಲಿ ಹೆಚ್ಚು ಗಮನ ಹರಿಸಬೇಕು ಎಂದು ಒಲಂಪಿಯನ್ ಚೆಪ್ಪುಡಿರ ಪೂಣಚ್ಚ ಕರೆ ನೀಡಿದರು. ಪೊನ್ನಂಪೇಟೆ ಅಪ್ಪಚಕವಿ ವಿದ್ಯಾಲಯದಲ್ಲಿ ನಡೆದ ಗಣರಾಜ್ಯೋತ್ಸವ ಮತ್ತು ವಾರ್ಷಿಕ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಇಂದು ಕ್ರೀಡೆಯಲ್ಲಿ ಯುವಕರಿಗೆ ವಿಪುಲ ಅವಕಾಶವಿದ್ದು ಇದರೊಂದಿಗೆ ಕೊಡಗಿನ ಪರಿಸರವು ಸಹ ಪೂರಕವಾಗಿದೆ. ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕ್ರೀಡಾ ಚಟುವಟಿಕೆಯಲ್ಲಿ ಹೆಚ್ಚು ಗಮನಹರಿಸಿ ತಮ್ಮ ಉತ್ತಮವಾದ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಒಲಂಪಿಯನ್ ಲೆಫ್ಟಿನೆಂಟ್ ಕರ್ನಲ್ ಬಾಳೆಯಡ ಸುಬ್ರಮಣಿ ಮಾತನಾಡಿ, ಪೂರ್ವಜರ ತ್ಯಾಗ ಬಲಿದಾನದಿಂದ ಇಂದು ಭಾರತವು ಸರ್ವ ಶ್ರೇಷ್ಠತೆಯಲ್ಲಿ ವಿರಾಜಮಾನವಾಗಿ ಬೆಳೆಯುತ್ತಿದೆ. ಯುವ ಜನತೆ ಭಾರತವನ್ನು ಮತ್ತಷ್ಟು ಸದೃಢಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಅಲ್ಲದೆ ಶಾಲೆಯ ಪ್ರತಿಯೊಂದು ಚಟುವಟಿಕೆಯಲ್ಲೂ ತೊಡಗಿಸಿಕೊಂಡು ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಮಾತನಾಡಿ, ಪ್ರತಿಯೊಂದು ವಿದ್ಯಾರ್ಥಿಯಲ್ಲೂ ಸಾಕಷ್ಟು ಪ್ರತಿಭೆ ಅಡಗಿರುತ್ತದೆ. ಶಿಕ್ಷಕರು ಇದನ್ನು ಗುರುತಿಸಿ ಹೊರ ತರುವ ನಿಟ್ಟಿನಲ್ಲಿ ಕಾರ್ಯಪ್ರವರ್ತರಾಗಬೇಕು, ಮಕ್ಕಳನ್ನು ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಲು ಪ್ರೋತ್ಸಾಹವನ್ನು ನೀಡಬೇಕು. ಹೀಗೆ ಮಾಡುವುದರಿಂದ ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ವಿದ್ಯಾರ್ಥಿ ಪರಿಪೂರ್ಣ ಆಗಬೇಕಾದರೆ ಪೋಷಕರು ಶಿಕ್ಷಕರು ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳು ಒಂದಾಗಿ ಕೆಲಸ ಮಾಡಬೇಕಾಗಿದೆ ಎಂದರು.

ಪೊನ್ನಂಪೇಟೆ ಕ್ರೀಡಾ ನಿಲಯದ ಮುಖ್ಯ ತರಬೇತುದಾರರಾದ ಕುಪ್ಪಂಡ ಸುಬ್ಬಯ್ಯನವರನ್ನು ಸನ್ಮಾನ ಮಾಡಲಾಯಿತು. ವೇದಿಕೆಯಲ್ಲಿ ಅಪ್ಪಚಕವಿ ವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಪೊನ್ನಿಮಾಡ ಸುರೇಶ್, ಉಪಾಧ್ಯಕ್ಷೆ ಮೂಕಳೇರ ಕಾವ್ಯ ಕಾವೇರಮ್ಮ, ಕಾರ್ಯದರ್ಶಿ ಕೊಣಿಯಂಡ ಸಂಜು ಸೋಮಯ್ಯ ಮುಖ್ಯ ಶಿಕ್ಷಕಿ ಮಲಚಿರ ತನುಜಾ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಿಕ್ಷಣ ಮತ್ತು ಕ್ರೀಡೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.ಐಗೂರು: ೭೭ನೇ ಗಣರಾಜ್ಯೋತ್ಸವ ಗರಗಂದೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಎಸ್‌ಡಿಎಂಸಿ ಅಧ್ಯಕ್ಷೆ ಇಂದಿರಾ ಧ್ವಜಾರೋಹಣ ನೆರವೇರಿಸಿದರು. ಎಸ್‌ಬಿಐ ಬ್ಯಾಂಕ್‌ನ ಪ್ರಾದೇಶಿಕ ವ್ಯವಸ್ಥಾಪಕ ಐಗೂರಿನ ವಿ.ಕೆ. ಶ್ರೀಜಿತ್ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದಲ್ಲಿ ಶಿಕ್ಷಕಿ ಶಶಿರೇಖಾ ವರದಿ ವಾಚಿಸಿದರು. ದಿನದ ಮಹತ್ವ ಕುರಿತು ಸಹ ಶಿಕ್ಷಕಿ ಉಮಾದೇವಿ ಮಾತನಾಡಿದರು. ಪ್ರಾರಂಭದಲ್ಲಿ ಮುಖ್ಯ ಶಿಕ್ಷಕಿ ಪಾರ್ವತಿ ಎಚ್.ಕೆ .ಸ್ವಾಗತಿಸಿ, ಶಿಕ್ಷಕ ವಿನು ವಂದಿಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭೋಜಮ್ಮ, ಉಪಾಧ್ಯಕ್ಷ ಮುಸ್ತಫ, ಸದಸ್ಯ ಸಲೀಂ ಹೊಸತೋಟ, ಗ್ರಾಮಸ್ಥರಾದ ಓಬಯ್ಯ, ಕುಟ್ಟಪ್ಪ, ಮುಸ್ತಫ ಮತ್ತು ಅಧ್ಯಾಪಕ ವೃಂದದವರು ಭಾಗವಹಿಸಿದ್ದರು. ಸಿದ್ದಾಪುರ ಫೆ. ೨: ದೇಶದ ಸಂಸ್ಕೃತಿ, ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವೃತರಾಗಬೇಕು ಎಂದು ಆರ್.ಎಸ್.ಎಸ್ ಸಂಘಟನೆಯ ದಕ್ಷಿಣ ಕನ್ನಡ ವಿಭಾಗ ಸೇವಾ ಪ್ರಮುಖರಾದ ಕೋಣಜೆಯ ಅಶೋಕ್ ಪೂಣಚ್ಚ ಕರೆ ನೀಡಿದರು. ನೆಲ್ಯಹುದಿಕೇರಿಯ ಶ್ರೀ ಮುತ್ತಪ್ಪ ದೇವಾಲಯದ ಸಭಾಂಗಣದಲ್ಲಿ ಹಿಂದೂ ಸಂಗಮ ಸಮಿತಿ ವತಿಯಿಂದ ನಡೆದ ‘ಹಿಂದೂ ಸಂಗಮ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಆಹಾರ ಸೇರಿದಂತೆ ಜೀವನ ಶೈಲಿ ಬದಲಾಗಿದೆ. ಯುವ ಜನತೆ ನಮ್ಮ ಸಂಸ್ಕೃತಿಯನ್ನು ಮರೆಯುತ್ತಿದ್ದು, ಯುವ ಜನತೆಗೆ ನಮ್ಮ ಸಂಸ್ಕೃತಿ, ಆಚಾರ ವಿಚಾರಗಳ ಬಗ್ಗೆ ಅರಿವು ಮೂಡಿಸಬೇಕು. ಸ್ವದೇಶಿ ಚಿಂತನೆ ಬೆಳೆಸಿಕೊಂಡು, ಸ್ವದೇಶಿ ವಸ್ತುಗಳನ್ನು ಬಳಸಬೇಕು. ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕೆಂದರು. ಆರ್.ಎಸ್.ಎಸ್ ಸಂಘಟನೆಯ ನೂರನೇ ವರ್ಷಾಚರಣೆಯ ಅಂಗವಾಗಿ ದೇಶಾದ್ಯಂತ ಕಾರ್ಯಕ್ರಮ ನಡೆಯುತ್ತಿದೆ ಎಂದರು.

ಕೊಡಗು ಎಸ್.ಎನ್.ಡಿ.ಪಿ ಯೂನಿಯನ್ ಅಧ್ಯಕ್ಷರಾದ ವಿ.ಕೆ ಲೊಕೇಶ್ ಮಾತನಾಡಿ, ಸದೃಢ ಸಮಾಜದ ನಿರ್ಮಾಣಕ್ಕಾಗಿ ಗ್ರಾಮಗಳಲ್ಲಿ ಹಿಂದೂ ಸಂಗಮ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಬ್ರಿಟಿಷರು, ಮೊಗಲರು ನೂರಾರು ವರ್ಷ ದೇಶವನ್ನು ಆಳ್ವಿಕೆ ನಡೆಸಿದರೂ, ನಮ್ಮ ಹಿರಿಯರು ಹಾಕಿದ ಅಡಿಪಾಯದಿಂದ ಇಂದಿಗೂ ಹಿಂದೂ ಧರ್ಮ ಗಟ್ಟಿಯಾಗಿದೆ. ನಾವೆಲ್ಲರೂ ಕುಟುಂಬಸ್ಥರ ರೀತಿಯಲ್ಲಿ ಒಗ್ಗಟ್ಟಿನಿಂದ ಬದುಕಬೇಕು, ಯುವ ಪೀಳಿಗೆಗೆ ಆಚಾರ ವಿಚಾರವನ್ನು ತಿಳಿಸಬೇಕು ಎಂದರು.

ಈ ಸಂದರ್ಭ ನೆಲ್ಯಹುದಿಕೇರಿ ಗ್ರಾ.ಪಂ ಅಧ್ಯಕ್ಷೆ ಧನಲಕ್ಷಿö್ಮ, ಉಪಾಧ್ಯಕ್ಷೆ ಪ್ರಮಿಳ, ಕೊಡವ ಒಕ್ಕೂಟದ ಅಧ್ಯಕ್ಷರಾದ ಪಾಲಚಂಡ ಅಚ್ಚಯ್ಯ, ಗೌಡ ಸಮಾಜದ ಅಧ್ಯಕ್ಷರಾದ ಹಳಗದ್ದೆ ಮಾದಪ್ಪ, ಸವಿತ ಸಮಾಜದ ಜಿಲ್ಲಾ ಅಧ್ಯಕ್ಷರಾದ ದೊರೇಶ್, ಗ್ರಾ.ಪಂ ಸದಸ್ಯೆ ದಮಯಂತಿ ಹಾಜರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷರಾದ ಟಿ.ಬಿ ತಿಮ್ಮಯ್ಯ ವಹಿಸಿದ್ದರು. ಕಾರ್ಯಕಮ್ರಕ್ಕೂ ಮುಂಚೆ ನೆಲ್ಯಹುದಿಕೇರಿ ಕಾವೇರಿ ಸೇತುವೆಯಿಂದ ಚೆಂಡೆ ಹಾಗೂ ಭಜನೆ ನೃತ್ಯದೊಂದಿಗೆ ಮುತ್ತಪ್ಪ ದೇವಾಲಯದವರೆಗೆ ಆಕರ್ಷಕ ಮೆರವಣಿಗೆ ನಡೆಸಲಾಯಿತು.

ಶರಣು ಪ್ರಕಾಶ್ ಸ್ವಾಗತಿಸಿ, ಪದ್ಮನಾಭ ವಂದಿಸಿ, ಶ್ರೀನಿವಾಸ್ ಪ್ರಾರ್ಥಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಚೆಯ್ಯಂಡಾಣೆ: ಇಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ನಿವೃತ್ತ ಸೈನಿಕರಾದ ನೆಲ್ಲಮಕ್ಕಡ ಮುದ್ದಯ್ಯ ನೆರವೇರಿಸಿ ನಂತರ ಮಾತನಾಡಿ, ಪ್ರಾಥಮಿಕ ಶಾಲಾ ಹಂತದಲ್ಲೇ ವಿದ್ಯಾಭ್ಯಾಸ, ಶಿಸ್ತು ನಿಯಮಗಳನ್ನು ಮೈಗೂಡಿಸಿಕೊಂಡು ಉನ್ನತ ಹುದ್ದೇ ಅಲಂಕರಿಸಿ ದೇಶಕ್ಕೆ ಕೀರ್ತಿ ತರಬೇಕು. ಗುರು,ಹಿರಿಯರನ್ನು ಗೌರವಿಸಬೇಕು ಎಂದು ಕರೆ ನೀಡಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಉಪಾಧ್ಯಕ್ಷೆ ಲಲಿತಾ ವಹಿಸಿದ್ದರು. ದಿನದ ಮಹತ್ವದ ಕುರಿತು ಶಿಕ್ಷಕಿ ಸತ್ಯಮ್ಮ ಪ್ರಾಸ್ತವಿಕವಾಗಿ ಮಾತನಾಡಿದರು.

ಕಾರ್ಯಕ್ರಮವನ್ನು ನರಿಯಂದಡ ಗ್ರಾ.ಪಂ. ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ ಉದ್ಘಾಟಿಸಿದರು. ಮುಖ್ಯ ದಾನಿಗಳು ಹಾಗೂ ನಿವೃತ ಸೈನಿಕರಾದ ಚೇನಂಡ ಬೋಪಯ್ಯ ಮಾತನಾಡಿ, ಬಾಂಧವ್ಯ ಮರೆಯಾಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ಸರಕಾರಿ ಶಾಲೆಗಳು ಮುಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಚೆಯ್ಯಂಡಾಣೆ ಕ್ಲಸ್ಟರ್ ಸಿಆರ್‌ಪಿ ಪವಿತ್ರ, ಶಾಲೆಯ ಮುಖ್ಯ ಶಿಕ್ಷಕಿ ವಿಮಲಾ ದಿನದ ಮಹತ್ವದ ಕುರಿತು ಮಾತನಾಡಿದರು. ವಿದ್ಯಾರ್ಥಿಗಳಿಂದ ಭಾಷಣ, ಹಾಡು, ರಾಷ್ಟçಗೀತೆ, ಸಂಸ್ಕೃತಿಕ ಕಾರ್ಯಕ್ರಮ ಜರುಗಿತು.

ಈ ಸಂದರ್ಭ ನಿವೃತ ಸೈನಿಕರಾದ ಚೆಯ್ಯಂಡ ಲವ ಅಪ್ಪಚ್ಚು, ಬೆಳ್ಳಿಯಪ್ಪ, ನಿವೃತ ಶಿಕ್ಷಕಿ ಗಂಗ ಮುದ್ದಯ್ಯ, ಗ್ರಾ.ಪಂ.ಸದಸ್ಯೆ ಬಿ.ಎಸ್.ಪುಷ್ಪ, ಪತ್ರಕರ್ತ ಅಶ್ರಫ್, ಶಿಕ್ಷಕಿಯರಾದ ಜಯಪ್ರದ, ಜಯಮಾಲ, ಎಸ್‌ಡಿಎಂಸಿ ಸದಸ್ಯರು,ಪೋಷಕರು, ವಿದ್ಯಾರ್ಥಿಗಳು, ಮತ್ತಿತರರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ವಿಮಲಾ ಸ್ವಾಗತಿಸಿ, ಶಿಕ್ಷಕಿ ಜಯಪ್ರದ ನಿರೂಪಿಸಿ, ಜಯಮಾಲ ವಂದಿಸಿದರು.ಶನಿವಾರಸAತೆ, ಫೆ. ೨: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೊಡ್ಲಿಪೇಟೆ ಹೋಬಳಿಯ ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಣಿಗನಹಳ್ಳಿ ಗ್ರಾಮದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ನೂತನ ಬಾಲತ್ರಿಪುರ ಸುಂದರಿ-ಮಹಾ ಕಾಳಮ್ಮ-ಭಗಲಮುಖಿ ಅಮ್ಮನವರ ದೇವಸ್ಥಾನಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದಿಂದ ರೂ.೫೦ ಸಾವಿರ ಮಂಜೂರಾಗಿದೆ. ದೇವಸ್ಥಾನಕ್ಕೆ ಮಂಜೂರಾದ ಹಣವನ್ನು ತಾಲೂಕಿನ ಯೋಜನಾಧಿಕಾರಿ ಹನುಮಂತಪ್ಪ ಅಂಗಡಿಯವರು ದೇವಸ್ಥಾನ ಸಮಿತಿಯವರಿಗೆ ವಿತರಣೆ ಮಾಡಿ, ಕ್ಷೇತ್ರದ ವತಿಯಿಂದ ನಡೆಯುವ ಸಮಾಜಮುಖಿ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭ ಶ್ರೀಕ್ಷೇತ್ರ ಧರ್ಮಸ್ಥಳ ಸಂಘದ ವಲಯ ಮೇಲ್ವಿಚಾರಕ ಹರೀಶ್ ಕುಮಾರ್, ಬೆಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಮಲಮ್ಮ, ದೇವಸ್ಥಾನ ಆಡಳಿತ ಮಂಡಳಿಯ ಸದಸ್ಯರಾದ ಶಿವಕುಮಾರ್, ಮೇಘನಾ, ವಿರೂಪಾಕ್ಷ, ಕಿರಿಕೊಡ್ಲಿಮಠದ ಶಾಲಾ ಶಿಕ್ಷಕ ಚಂದ್ರಶೇಖರ್, ಕೂಡ್ಲೂರು ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಶಾರದಮ್ಮ, ಸಂಘದ ಸದಸ್ಯರು, ಗ್ರಾಮ ಮುಖಂಡರು ಹಾಜರಿದ್ದರು.

ಮಡಿಕೇರಿ, ಫೆ. ೨: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಮೇಕೇರಿ ಗ್ರಾಮ ಪಂಚಾಯ್ತಿ ಬಿಳಿಗೇರಿ ವಾರ್ಡ್ನಲ್ಲಿ ಕಳೆದ ಹತ್ತು ವರ್ಷ ಗಳಿಂದ ಪಕ್ಷೇತರ ಸದಸ್ಯರಾಗಿರುವ ಎ. ಅಬ್ದುಲ್ ಖಾದರ್ ಅವರು, ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಎಂ.ಎA. ಶರೀಫ್ ಅವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು. ಸುಂಟಿಕೊಪ್ಪ ಸಮೀಪದ ಖಾಸಗಿ ರೆಸಾರ್ಟ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಎA. ಶÀರೀಫ್, ಕೊಡಗು ಜಿಲ್ಲಾ ಜೆಡಿಎಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಜಾಶಿರ್ ಮೂರ್ನಾಡು, ಸುಂಟಿಕೊಪ್ಪ ಗ್ರಾಮ ಪಂಚಾಯ್ತಿ ಸದಸ್ಯ ಜಿನಾಸುದ್ದೀನ್, ಮಡಿಕೇರಿ ತಾಲೂಕು ಜೆಡಿಎಸ್ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಅಶ್ರಫ್, ಕುಶಾಲನಗರ ತಾಲೂಕು ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಶಿಯಾಬುದ್ದೀನ್ ವಿ.ಪಿ.ಎಸ್., ವೀರಾಜಪೇಟೆ ತಾಲೂಕು ಯುವ ಘಟಕದ ಅಧ್ಯಕ್ಷ ಸೈಫುದ್ದೀನ್ ಚಾಮಿಯಾಲ ಹಾಜರಿದ್ದರು. ನಾಪೋಕ್ಲು, ಫೆ. ೨: ಇಲ್ಲಿಗೆ ಸಮೀಪದ ಕಕ್ಕಬ್ಬೆ ಕೇಂದ್ರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮುಖ್ಯಶಿಕ್ಷಕಿ ಚಂಡೀರ ಲೀಲಾವತಿ ಉತ್ತಪ್ಪ ಅವರನ್ನು ಬೀಳ್ಕೊಡಲಾಯಿತು. ಚಂಡೀರ ಲೀಲಾವತಿ ಉತ್ತಪ್ಪ ೩೪ ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಶಾಲಾ ಆಡಳಿತ ಮಂಡಳಿ ವತಿಯಿಂದ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಚಂಡೀರ ಲೀಲಾವತಿ ಉತ್ತಪ್ಪ ಅವರನ್ನು ಆಡಳಿತ ಮಂಡಳಿ ಅಧ್ಯಕ್ಷ ಕೇಟೋಳಿರ ಕುಟ್ಟಪ್ಪ ಶಾಲೆ ಪರವಾಗಿ ಸನ್ಮಾನಿಸಿದರು. ಶಾಲಾ ಆಡಳಿತ ಮಂಡಳಿ ನಿರ್ದೇಶಕರು, ಶಿಕ್ಷಕ ವೃಂದ. ಉಪಸ್ಥಿತರಿದ್ದರು.