ಮಡಿಕೇರಿ, ಫೆ. ೨: ಕಚೇರಿಗೆ ಹಾಜರಾಗದೆ ಅನಧಿಕೃತ ಗೈರು ಹಾಜರಾಗಿರುವ ಕಂದಾಯ ಇಲಾಖೆಯ ಕರಿಕೆ ಗ್ರಾಮದಲ್ಲಿ ಆಡಳತಾಧಿಕಾರಿ ಜಟಪ್ಪ ರಾಮಣ್ಣ ಕಟಬರ ಅವರನ್ನು ಜಿಲ್ಲಾಧಿಕಾರಿಗಳು ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಮಡಿಕೇರಿ ತಾಲೂಕು, ಭಾಗಮಂಡಲ ಹೋಬಳಿಯ ಕರಿಕೆ ಗ್ರಾಮದ ಗ್ರಾಮ ಆಡಳಿತಾಧಿಕಾರಿ ಜಟಪ್ಪ ರಾಮಣ್ಣ ಕಟಬರ ಅವರು ಕಳೆದ ತಾ. ೨-೬-೨೦೨೫ರಿಂದ ಇದುವರೆಗೆ(೨೪೫ ದಿವಸ) ಯಾವದೇ ಅನುಮತಿ ಪಡೆಯದೆ ನಿರಂತರವಾಗಿ ಗೈರು ಹಾಜಾರಾಗಿದ್ದಾರೆ. ಈ ಬಗ್ಗೆ ಉಪ ತಹಶೀಲ್ದಾರರು ಹಾಗೂ ಕಂದಾಯ ಪರಿವೀಕ್ಷಕರು ಕಾರಣ ಕೇಳಿ ನೋಟೀಸ್ ನೀಡಿದರೂ ಯಾವದೇ ಸಮಜಾಯಿಷಿಕೆ ನೀಡಿರುವದಿಲ್ಲ. ಅದೂ ಅಲ್ಲದೆ, ಪೂರ್ವಾನುಮತಿ ಪಡೆಯದೆ ಕೇಂದ್ರ ಸ್ಥಾನದಲ್ಲಿ ವಾಸವಿರದೆ ಸಾರ್ವಜನಿಕ ಹಾಗೂ ಕಚೇರಿ ಕೆಲಸದಲ್ಲಿ ಲೋಪವೆಸಗಿರುವದು ಕಂಡು ಬಂದಿರುತ್ತದೆ. ಇದರಿಂದಾಗಿ ಆಡಳಿತ ವ್ಯವಸ್ಥೆಗೆ ಧಕ್ಕೆಯಾಗುತ್ತಿರುವದರಿಂದ ನೌಕರರನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಕೋರಿ ತಹಶೀಲ್ದಾರರು ಜಿಲ್ಲಾಧಿಕಾರಿಗಳಿಗೆ ಪತ್ರದ ಮೂಲಕ ಕೋರಿದ್ದರು.
ಈ ಬಗ್ಗೆ ಪರಿಶೀಲನೆ ಮಾಡಿರುವ ಜಿಲ್ಲಾಧಿಕಾರಿಗಳು; ಆರೋಪಿತ ನೌಕರರು ದಿನಾಂಕ:೦೨.೦೬.೨೦೨೫ ರಿಂದ ಈ ತಹಲ್ ವರೆಗೂ ಕಛೇರಿ ಕರ್ತವ್ಯಕ್ಕೆ ಅನಧಿಕೃತ ಗೈರು ಹಾಜರಾಗಿರುತ್ತಾರೆ.ಈ ಸಂಬAಧ ಕಾರಣ ಕೇಳಿ ನೋಟೀಸ್ ನೀಡಿದರೂ ಯಾವುದೇ ಸಮಜಾಯಿಷಿಕೆಯನ್ನು ಸಲ್ಲಿಸಿರುವುದಿಲ್ಲ ಮತ್ತು ಕಛೇರಿಯ ಕರ್ತವ್ಯಕ್ಕೆ ಹಾಜರಾಗದೇ ಕೆ.ಸಿ.ಎಸ್ (ನಡತೆ) ನಿಯಮಗಳು-೨೦೨೧ರ ನಿಯಮ-೩(೧)(೧೧)(೧೧೧)ನ್ನು ಉಲ್ಲಂಘನೆ ಮಾಡಿರುತ್ತಾರೆ. ಪೂರ್ವಾನುಮತಿ ಪಡೆಯದೇ ಕೇಂದ್ರ ಸ್ಥಾನದಲ್ಲಿ ವಾಸವಿರದೇ ಸಾರ್ವಜನಿಕ ಹಾಗೂ ಕಛೇರಿ ಕೆಲಸವನ್ನು ಲೋಪವೆಸಗಿರುವುದು ಕಂಡುಬAದಿರುತ್ತದೆ. ಈ ಅಂಶಗಳನ್ನು ಪರಿಶೀಲಿಸಿ, ಆರೋಪಿತ ನೌಕರರನ್ನು ಸೇವೆಯಿಂದ ಅಮಾನತ್ತುಗೊಳಿಸುವುದು ಸೂಕ್ತವೆಂದು ಮನಗಂಡು ಜಟಪ್ಪ ರಾಮಣ್ಣ ಕಟಬರ ಇವರನ್ನು ಕರ್ನಾಟಕ ನಾಗರೀಕ ಸೇವಾ( ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು ೧೯೫೭ರ ನಿಯಮ ೧೦(೧)ರಂತೆ ದತ್ತವಾಗಿರುವ ಅಧಿಕಾರದನ್ವಯ ಇವರ ವಿರುದ್ಧ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಿದ್ದಾರೆ.
ಕೆ.ಸಿ.ಎಸ್ ನಿಯಮ-೯೮ ರನ್ವಯ ಈ ನೌಕರರು ಅಮಾನತ್ತಿನ ಅವಧಿಯಲ್ಲಿ ಜೀವನಾಧರ ಭತ್ಯೆ ಪಡೆಯಲು ಅರ್ಹರಾಗಿರುತ್ತಾರೆ. ನಿಲಂಬನೆಯ ಅವಧಿಯಲ್ಲಿ ಕಛೇರಿ ಮುಖ್ಯಸ್ಥರ ಪೂರ್ವಾನುಮತಿಯನ್ನು ಪಡೆಯದೇ ಕೇಂದ್ರ ಸ್ಥಾನ ಬಿಡತಕ್ಕದಲ್ಲವೆಂದು ತಿಳಿಸಿ, ಅವರ ಸ್ಥಾನವನ್ನು ಪೊನ್ನಂಪೇಟೆ ತಾಲೂಕು, ಶ್ರೀಮಂಗಲ ಹೋಬಳಿ, ಟಿ.ಶೆಟ್ಟಿಗೇರಿ ವೃತ್ತದಲ್ಲಿ ಖಾಲಿ ಇರುವ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಬದಲಾಯಿಸಿ ಆದೇಶಿಸಿದ್ದಾರೆ.