ಮಡಿಕೇರಿ, ಫೆ. ೧: ನಾಪೋಕ್ಲು ಪಬ್ಲಿಕ್ ಸ್ಕೂಲ್ ಜಾಗಕ್ಕೆ ಸಂಬAಧಿಸಿದAತೆ ಕೆಲವು ಬಿಜಿಪಿ ಮುಖಂಡರು ಮತ್ತು ಕೆಲವರು ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರ ತೇಜೋವಧೆಗೆ ಯತ್ನಿಸುತ್ತಿದ್ದಾರೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಹೇಳಿದ್ದಾರೆ.
ನಾಪೋಕ್ಲು ಗ್ರಾಮದ ಸರ್ವೆ ನಂ ೧೮/೨ ರಲ್ಲಿ ೦.೬೨ ಎಕರೆ ಜಾಗ ಮೊಹಿದ್ದೀನ್ ಅಧ್ಯಕ್ಷರು, ಜುಮ್ಮಾ ಮಸೀದಿ, ಮುಸ್ಲಿಂ ಖಬರ್ ಸ್ಥಾನ,ವಕ್ಫ್ ಬೋರ್ಡ್ ಹೆಸರಿನಲ್ಲಿ ಇದ್ದು ಸದರಿ ಜಾಗದಲ್ಲಿ ಶಾದಿಮಹಲ್ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದ್ದು ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ನವರು ಭೂಮಿ ಪೂಜೆ ಮಾಡಿರುತ್ತಾರೆ.ನಂತರದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ,ನಾಪೋಕ್ಲು ವಿನ ಪ್ರಾಂಶುಪಾಲರು ಜಿಲ್ಲಾಧಿಕಾರಿಗಳು, ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಶಾಸಕರಿಗೆ ಪತ್ರ ಬರೆದು ಸದರಿ ಜಾಗವು ಕರ್ನಾಟಕ ಪಬ್ಲಕ್ ಸ್ಕೂಲ್ ಹೆಸರಿನಲ್ಲಿರುವ ಸರ್ವೆ ನಂ.೧೮/೩ರ ೧೩.೬೧ ರ ವ್ಯಾಪ್ತಿಗೆ ಒಳಪಟ್ಟಿದೆ ಎಂದು ಹಳೆಯ ವಿಧ್ಯಾರ್ಥಿಗಳು ಹಾಗೂ ಪತ್ರಕರ್ತರು ಫೋನ್ ಮೂಲಕ ತಿಳಿಸಿರುತ್ತಾರೆ. ಹಾಗಾಗಿ ಇದರ ಬಗ್ಗೆ ಪರಿಶೀಲಿಸಿ ಇತ್ಯರ್ಥಪಡಿಸಿ ಕೊಡಿ ಎಂದು ಪತ್ರ ಬರೆದಿರುತ್ತಾರೆ.
ಕಂದಾಯ ಅಧಿಕಾರಿಗಳು ಸರ್ವೆ ಇಲಾಖೆಯೊಂದಿಗೆ ಸರ್ವೆ ನಡೆಸಿ ಗಡಿ ಗುರುತಿಸಿ ಯಾವ ಜಾಗ ಯಾವ ಸರ್ವೆ ನಂನಲ್ಲಿ ಇದೆ ಎಂದು ವರದಿ ನೀಡಬೇಕು. ಮೇಲ್ನೋಟಕ್ಕೆ ಕಟ್ಟಡ ನಿರ್ಮಾಣ ಸ್ಥಳ ಸರ್ವೆ ನಂ. ೧೮/೨ ವ್ಯಾಪ್ತಿಯಲ್ಲಿ ಕಂಡು ಬರುತ್ತದೆ ಎಂದು ಅಧಿಕಾರಿಗಳು ಮಾಹಿತಿ ಒದಗಿಸಿದ್ದಾರೆ.ಅಧಿಕೃತ ವಾಗಿ ಸರ್ವೆ ನಡೆಸಿದಾಗ ಮಾತ್ರ ಸ್ಪಷ್ಟತೆ ಸಿಗುತ್ತದೆ.ಈ ವಾರದಲ್ಲಿ ಸರ್ವೆ ಕಾರ್ಯ ಮುಗಿಯಲಿದ್ದು ಎಲ್ಲವೂ ಇತ್ಯರ್ಥ ಗೊಳ್ಳಲಿದೆ.ಶಾಲೆಯ ವ್ಯಾಪ್ತಿಗೆ ಒಳಪಟ್ಟಿದ್ದರೆ ಅಲ್ಲಿ ಕಾಮಗಾರಿ ಸ್ಥಗಿತಗೊಳ್ಳುತ್ತದೆ ಎಂದರು.
ನಾಪೋಕ್ಲು: ಸಾಮಾಜಿಕ ಜಾಲತಾಣದಲ್ಲಿ ಶಾಸಕ ಅಜ್ಜಿಕುಟ್ಟಿರ. ಎಸ್ ಪೊನ್ನಣ್ಣ ಅವರ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡಿ ಜನರ ದಾರಿ ತಪ್ಪಿಸುತ್ತಿರುವುದು ವಿಪರ್ಯಾಸ. ಇದನ್ನು ನಾಪೋಕ್ಲು ವಲಯ ಕಾಂಗ್ರೆಸ್ ಖಂಡಿಸುತ್ತದೆ ಎಂದು ನಾಪೋಕ್ಲು ವಲಯ ಕಾಂಗ್ರೆಸ್ ಅಧ್ಯಕ್ಷ ಮಾಚೇಟಿರ ಕುಸು ಕುಶಾಲಪ್ಪ ಹೇಳಿದ್ದಾರೆ.
ಬೇತು ಗ್ರಾಮದ ದವಸ ಭಂಡಾರದಲ್ಲಿ ನಾಪೋಕ್ಲು ವಲಯ ಕಾಂಗ್ರೆಸಿನಿAದ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಒಂದು ಸರ್ಕಾರದ ಅಧೀನದಲ್ಲಿ ನಡೆಯುವಂತಹ ಕಾಮಗಾರಿಗಳ ಸ್ಥಳವನ್ನು ಹಲವು ಬಾರಿ ಪರಿಶೀಲಿಸಿ, ಸರ್ವೆಯನ್ನು ಮಾಡಿ ದಾಖಲಾತಿಗಳನ್ನು ಪರಿಶೀಲಿಸಿ ಆದ ನಂತರ ಮಾತ್ರ ಜಾಗ ಹೆಸರಲ್ಲಿದೆಯೋ ಅಂದರೆ ಮಾತ್ರ ಸರಕಾರದಿಂದ ಅನುದಾನ ಬಿಡುಗಡೆಗೊಳ್ಳಲು ಸಾಧ್ಯ, ಇದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತಹ ವಿಷಯ, ಈಗ ಶಾಸಕರ ಮೇಲೆ ಮಾಡಿದಂತಹ ಆಪಾದನೆ ಸತ್ಯಕ್ಕೆ ದೂರವಾದದ್ದು, ಏಕೆಂದರೆ ನೂತನ ಶಾದಿ ಮಹಲ್ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಿದಂತಹ ಜಾಗ ನಾಪೋಕ್ಲು ಜಮಾಅತಿಗೆ ಸಂಬAಧಪಟ್ಟAತಹ ಜಾಗ. ಸುಮಾರು ೫೦ ವರ್ಷಗಳ ಹಿಂದೆ ಅವರುಗಳ ಹೆಸರಿಗೆ ಖಾತೆ ವರ್ಗಾವಣೆ ಮಾಡಲಾಗಿದೆ. ಇದೆ ಸರ್ಕಾರದ ಅನುದಾನದಲ್ಲಿ ನಿರ್ಮಾಣವಾದ ಅಂತಹ ತಡೆಗೋಡೆಗಳಿವೆ. ಸುಮಾರು ೨೦ ವರ್ಷದಿಂದ ಇದ್ದಂತಹ ಶಾಸಕರ ಮುಂದಾಳತ್ವದಲ್ಲಿಯೂ ಅನುದಾನ ಬಿಡುಗಡೆಯಾಗಿದೆ. ಇದೀಗ ಶಾಸಕರ ವಿರುದ್ಧ ಆಪಾದನೆ ಮಾಡುವುದು ಎಷ್ಟು ಸರಿ.
೨೦ ವರ್ಷದಿಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಗೆ ಕೆ.ಜಿ. ಬೋಪಯ್ಯ ಅವರೇ ಆಡಳಿತ ಮಂಡಳಿ ಅಧ್ಯಕ್ಷರಾಗಿದ್ದರು, ಪತ್ರಿಕಾಗೋಷ್ಠಿ ಮಾಡಿ ಆರೋಪ ಮಾಡಿದವರು ಅದೇ ಸಂದರ್ಭದಲ್ಲಿ ಉಪಾಧ್ಯಕ್ಷರಾಗಿ ಹತ್ತು ವರ್ಷಗಳ ಕಾಲ ಅದೇ ಕಾಲೇಜಿನ ಆಡಳಿತ ಮಂಡಳಿಯಲ್ಲಿ ಸೇವೆಯನ್ನು ಸಲ್ಲಿಸಿರುತ್ತಾರೆ. ಆ ಸಂದರ್ಭ ಇವರ ಗಮನಕ್ಕೆ ಬಂದಿಲ್ಲವೇ ಎಂದು ಪ್ರಶ್ನಿಸಿದರು.
ಶಾಸಕರು ಕೂಡ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಯವರಿಗೆ ತನಿಖೆಯನ್ನು ಮಾಡಲು ಆದೇಶ ನೀಡಿದ್ದಾರೆ ಎಂದರು.
ಕುಲ್ಲೇಟಿರ ಅರುಣ್ ಬೇಬಾ ಮಾತನಾಡಿ ನಾಪೋಕ್ಲು ಪದವಿಪೂರ್ವ ಕಾಲೇಜಿಗೆ ನಮ್ಮ ಊರಿನ ಹಿರಿಯರು ಜಾಗವನ್ನು ದಾನ ಮಾಡಿ ವಿದ್ಯಾರ್ಥಿಗಳ ಏಳಿಗೆಗೆ ಶ್ರಮಿಸಿದ್ದಾರೆ. ನಾವು ಕೂಡ ಶಾಲೆಯ ಹಳೆ ವಿದ್ಯಾರ್ಥಿಗಳೇ. ಈ ಹಿಂದಿನ ಶಾಸಕರು ಜಾಗ ಒತ್ತುವರಿ ಸಮಸ್ಯೆ ಕುರಿತು ಪರಿಹಾರ ನೀಡದೆ ಇದೀಗ ಹಾಲಿ ಶಾಸಕರ ಮೇಲೆ ಆಪಾದನೆ ಹೊರಿಸುವುದು ಸೂಕ್ತವಲ್ಲ ಎಂದರು. ಮಾಜಿ ಸಚಿವ ದಿವಂಗತ ಎಂ.ಎA. ನಾಣಯ್ಯ ಅವರು ಸ್ಥಳ ಅತಿಕ್ರಮಣ ಬಗ್ಗೆ ಮಾಹಿತಿ ನೀಡಿದಾಗ ನಾವು ಕೂಡ ಪ್ರತಿಭಟನೆ ನಡೆಸಿದ್ದೇವೆ. ಆಗ ಯಾರು ಸ್ಪಂದಿಸಲಿಲ್ಲ. ಇದೀಗ ವೃಥಾ ಆರೋಪ ಮಾಡಲಾಗುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್, ಕಾಳೆಯಂಡ ಸಾಬಾ ತಿಮ್ಮಯ್ಯ ಚೋಕಿರ ರೋಶನ್, ಬೊಳ್ಯಪಂಡ ಸುನಿತ, ಎ.ಎಂ. ಮಿಟ್ಟು ಸೋಮಯ್ಯ , ಪಾತಂಡ ಜಗದೀಶ್, ಚೋಕಿರ ಸುಧಿ ಅಪ್ಪಯ್ಯ, ಅಪ್ಪೇರಿಯಂಡ ವಿಷನ್ ಸೋಮಯ್ಯ ಇದ್ದರು.