ಸೋಮವಾರಪೇಟೆ, ಫೆ. ೧: ಇಲ್ಲಿನ ಓ.ಎಲ್.ವಿ. ಕಾನ್ವೆಂಟ್ ಶಾಲೆಯ ಆಶ್ರಯದಲ್ಲಿ ಸಿ.ಎಸ್.ಎಸ್.ಟಿ. ಸಂಸ್ಥೆಯ ೭೦ನೇ ವಾರ್ಷಿಕೋತ್ಸವ ಹಾಗೂ ಕಾರ್ಮೆಲ್ ಸಭೆಯ ಸಂಸ್ಥಾಪಕಿ ಮದರ್ ಥೆರೇಸಾ ಅವರ ೧೬೮ನೇ ಜನ್ಮದಿನವನ್ನು ಶಾಲಾ ಸಭಾಂಗಣದಲ್ಲಿ ಆಚರಿಸಲಾಯಿತು.

ಈ ಸಂದರ್ಭ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಅರುಣ ಜ್ಯೋತಿ ಮಾತನಾಡಿ, ಸೇವಾ ಮನೋಭಾವಕ್ಕಾಗಿ ಮತ್ತು ಜೀವನದ ಉತ್ತಮ ಮೌಲ್ಯಗಳ ಕುರಿತು ಸಮಾಜಕ್ಕೆ ಮಾನವೀಯ ಸಂದೇಶ ನೀಡಿದ ಮದರ್ ಥೆರೇಸಾ ಅವರ ಆದರ್ಶ ನಮ್ಮ ಬದುಕಿಗೆ ದಾರಿದೀಪವಾಗಬೇಕೆಂದರು.

ಶಾಲಾ ವ್ಯವಸ್ಥಾಪಕರಾದ ಸಿಸ್ಟರ್ ದಯಾ ಮತ್ತು ಭಾತ್ಮೀದಾರರಾದ ಸಿಸ್ಟರ್ ನಿರ್ಮಲ ಅವರುಗಳು ಸಿಎಸ್‌ಎಸ್‌ಟಿ ಸಂಸ್ಥೆಯ ಹಿನ್ನೆಲೆ, ಥೆರೇಸಾ ಅವರ ಜೀವನ ಆದರ್ಶಗಳ ಬಗ್ಗೆ ತಿಳಿಸಿದರು. ಶಾಲಾ ವಿದ್ಯಾರ್ಥಿಗಳಿಂದ ಸಾಮೂಹಿಕ ಪ್ರಾರ್ಥನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಶಿಕ್ಷಕರುಗಳಾದ ಆಸೆಸ್ ಡಿಸೋಜ, ಜೋಸೆಫ್ ಲೀನಾ, ಮಂಜುಳಾ ಕಾರ್ಯಕ್ರಮ ನಿರ್ವಹಿಸಿದರು.