ಸುಂಟಿಕೊಪ್ಪ, ಫೆ. ೧: ಸಮಾಜದಲ್ಲಿ ಸಾಮರಸ್ಯ, ಸ್ವದೇಶಿ ಬಳಕೆ, ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಸಾಮರಸ್ಯದೊಂದಿಗೆ ಭಾರತವನ್ನು ವಿಶ್ವ ಗುರುವಾಗಿಸುವ ಉದ್ದೇಶ ಮತ್ತು ಗುರಿಯನ್ನು ಹಿಂದೂ ಸಂಗಮ ಕಾರ್ಯಕ್ರಮ ಹೊಂದಿದೆ ಎಂದು ರಾಷ್ಟಿçÃಯ ಸ್ವಯಂ ಸೇವಕ ಬೆಂಗಳೂರಿನ ಪ್ರಾಂತ ಸೇವಾ ಪ್ರಮುಖ್ ಗುರುರಾಜ್ ಕುಲಕರ್ಣಿ ಹೇಳಿದರು.
ಹಿಂದೂ ಸಂಗಮ ಆಯೋಜನಾ ಸಮಿತಿ ಕುಶಾಲನಗರ ತಾಲೂಕು ಮತ್ತು ಸುಂಟಿಕೊಪ್ಪ ಮಂಡಲದ ಹಿಂದೂ ಸಂಗಮ ಸಮಿತಿಯ ವತಿಯಿಂದ ಸುಂಟಿಕೊಪ್ಪದಲ್ಲಿ ಹಿಂದೂ ಸಂಗಮ ಶೋಭಾಯಾತ್ರೆ ಮತ್ತು ಸಭಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಸಾವಿರ ವರ್ಷಗಳ ಗುಲಾಮಗಿರಿಯಿಂದ ನಾವು ಹೊರ ಬಂದಿದ್ದು, ನಮ್ಮ ಧರ್ಮ, ಸಂಸ್ಕೃತಿ, ಆಚರಣೆ ಮತ್ತು ಪದ್ಧತಿ-ಪರಂಪರೆ ಉಳಿಸಬೇಕು ಎಂದರು.
ಅಜಿತ್ ಅಪ್ಪಚ್ಚು ಮಾತನಾಡಿ, ಪ್ರಸ್ತುತ ದಿನದಲ್ಲಿ ಧರ್ಮ ಜಾಗೃತಿ ನಮ್ಮ ಪದ್ಧತಿ ಪರಂಪರೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಅತ್ಯವಶ್ಯ. ಮಕ್ಕಳಲ್ಲಿ ಧರ್ಮ ಮತ್ತು ಸಂಸ್ಕೃತಿ ಬಗ್ಗೆ ಧರ್ಮ ಸಂಸ್ಕಾರ ನೀಡಬೇಕೆಂದು ಕರೆ ನೀಡಿದ ಅವರು, ಹೊರಗಿನ ಬೆದರಿಕೆಗಳಿಗಾಗಿ ನಾವು ಒಗ್ಗಟ್ಟಾಗದೆ ನಮ್ಮ ಧರ್ಮ ನಮ್ಮ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ನಾವು ಒಂದಾಗಿ ಕೆಲಸ ಮಾಡಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುಂಟಿಕೊಪ್ಪ ಮಂಡಲ ಹಿಂದೂ ಸಂಗಮ ಅಧ್ಯಕ್ಷ ಹೆಚ್.ಟಿ. ಬಸವರಾಜ್ ಮಾತನಾಡಿ, ಮಕ್ಕಳಿಗೆ ಮೊಬೈಲ್ ಬಳಕೆ ಕಡಿಮೆ ಮಾಡಿ ಸಂಸ್ಕಾರ ಕಲಿಸಬೇಕು. ಮಾತೆಯರು ಮತ್ತು ಮಹಿಳೆಯರು ಭಜನೆ ಮತ್ತು ಧರ್ಮ ಸಂಬAಧವಾದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸುಂಟಿಕೊಪ್ಪ ವಿವಿಧ ದೇವಾಲಯಗಳಲ್ಲಿ ದಶಕಗಳ ಕಾಲ ಯಾವುದೇ ಪ್ರತಿಫಲ ಆಪೇಕ್ಷೆ ಇಲ್ಲದೆ ಸೇವೆ ಸಲ್ಲಿಸಿದ ಹಿರಿಯರಾದ ಮಂಡುವAಡ ಬೋಜಮ್ಮ, ಜವರಮ್ಮ ಮತ್ತು ಲಕ್ಷಿö್ಮಯಮ್ಮ ಅವರುಗಳನ್ನು ಸನ್ಮಾನಿಸಲಾಯಿತು.ಮೊದಲಿಗೆ ಸ್ಟೆಪ್ಡಾಟ್ ಕಂ ತಂಡದಿAದ ಸ್ವಾಗತ ನೃತ್ಯ ನಡೆಯಿತು. ಸುಂಟಿಕೊಪ್ಪ ಮಹಿಳೆಯರು ಮತ್ತು ಮಕ್ಕಳು ವಂದೇ ಮಾತರಂ ಗೀತೆಯನ್ನು ಹಾಡಿದರು. ಸುಂಟಿಕೊಪ್ಪ ಹಿಂದೂ ಸಂಗಮ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಮ್ಗೌತಮ್ ಸ್ವಾಗತಿಸಿದರು. ಉಮೇಶ್ ಅವರು ದೇಶಭಕ್ತಿ ಗೀತೆ ಹಾಡಿದರು. ಯಂಕನ ತ್ರಿಶೂಲ ಮತ್ತು ಎಂ.ಎಸ್. ಸುನಿಲ್ ಕಾರ್ಯಕ್ರಮ ನಿರೂಪಿಸಿ, ಹಿಂದೂ ಸಂಗಮ ಸಮಿತಿಯ ಉಪಾಧ್ಯಕ್ಷ ಮನು ಅಚ್ಚಮಯ್ಯ ವಂದಿಸಿದರು.
ಇಲ್ಲಿನ ಶ್ರೀ ಕೋದಾಂಡ ರಾಮಚಂದ್ರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಭವ್ಯವಾದ ಶೋಭಾಯಾತ್ರೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿತು. ಪೂರ್ಣ ಕುಂಭ ಕಲಶದೊಂದಿಗೆ ಭಗಧ್ವಜ ಸಹಿತ ಭಜನ ತಂಡದ ನೃತ್ಯ ಕೇರಳದ ಚಂಡೆ ಭಾರತಾಂಬೆಯ ಭಾವಚಿತ್ರ ಅಲಂಕೃತ ತೆರೆದ ಜೀಪಿನಲ್ಲಿ ಇರಿಸಿ ಮೆರವಣಿಗೆಯು ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ.ಮುತ್ತಪ್ಪ ದೇವಸ್ಥಾನದ ಆವರಣದಲ್ಲಿ ಸಂಪನ್ನಗೊAಡಿತು.
ಮೆರವಣಿಗೆಯಲ್ಲಿ ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್, ಕಾಫಿ ಬೆಳೆಗಾರ ಬೋಸ್ ಮಂದಣ್ಣ, ಜಿ.ಪಂ. ಮಾಜಿ ಸದಸ್ಯ ಬಿ.ಬಿ. ಭಾರತೀಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.