ವೀರಾಜಪೇಟೆ: ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
ಧ್ವಜಾರೋಹಣವನ್ನು ಪದವಿ ಕಾಲೇಜಿನ ಪ್ರಾಂಶುಪಾಲರಾದ ಬೆನಡಿಕ್ಟ್ ಸಾಲ್ಡಾನ ನೆರವೇರಿಸಿ ವಿದ್ಯಾರ್ಥಿಗಳು ದೇಶಭಿಮಾನ ಬೆಳೆಸಿಕೊಳ್ಳಬೇಕೆಂದು ಕರೆನೀಡಿದರು. ಕಾರ್ಯಕ್ರಮದಲ್ಲಿ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ದಮಯಂತಿ ಎಂ.ಪಿ. ಪದವಿ ಹಾಗೂ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ವೃಂದದವರು, ಎನ್.ಸಿ.ಸಿ, ಎನ್.ಎಸ್.ಎಸ್. ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.ಪೊನ್ನಂಪೇಟೆ: ಪೊನ್ನಂಪೇಟೆ ತಾಲೂಕಿನ ಬಲ್ಯಮಂಡೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೇಯಂಡ ಜಯಂತಿ ಧ್ವಜಾರೋಹಣ ಮಾಡಿದರು.
ಈ ಸಂದರ್ಭ ಎಸ್ ಡಿ ಎಂ ಸಿ ಅಧ್ಯಕ್ಷೆ ಮಲ್ಲಿಗೆ, ಉಪಾಧ್ಯಕ್ಷೆ ಸರೋಜ, ಗ್ರಾಮ ಪಂಚಾಯಿತಿ ಸದಸ್ಯ ಕೊಟ್ಟಂಗಡ ಅಯ್ಯಪ್ಪ, ಆಶಾ ಕಾರ್ಯಕರ್ತೆ ಕಾಂಚನ, ಅಂಗನವಾಡಿ ಸಹಾಯಕಿ ಸೌಮ್ಯ, ಸಂಜೀವಿನಿ ಒಕ್ಕೂಟದ ಕಾರ್ಯಕರ್ತೆ ಚೈತ್ರ, ಗ್ರಾಮಸ್ಥರಾದ ಕೊಟ್ಟಂಗಡ ಅಚ್ಚಯ್ಯ, ಮುಖ್ಯ ಶಿಕ್ಷಕಿ ಕೆ.ಪಿ ಪವಿತ್ರ, ಪೋಷಕರಾದ ಜಯಲಕ್ಷ್ಮಿ, ಮುತ್ತಕ್ಕಿ, ಸುಮಿತ್ರ, ಮುತ್ತಿ, ಅಣ್ಣಪ್ಪ, ಅಂಗನವಾಡಿ ಶಿಕ್ಷಕಿಯರಾದ ಪದ್ಮ, ಸುನೋಜಮ್ಮ, ಹಸೀನಾ, ಶಿಕ್ಷಕರಾದ ತಿರುನೆಲ್ಲಿಮಾಡ ಜೀವನ್ ಹಾಜರಿದ್ದರು.
ಮಡಿಕೇರಿ: ಜಿಲ್ಲಾ ಕೇಂದ್ರ ಮಡಿಕೇರಿಯ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ ಕಾರ್ಯಾಲಯದ ಆವರಣದಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಸತೀಶ್ ಕುಮಾರ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.ಚೆಯ್ಯAಡಾಣೆ: ಎಡಪಾಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಎಸ್‌ಡಿಎಂಸಿ ಅಧ್ಯಕ್ಷ ಬಷೀರ್ ಪಿ.ಎ. ನೆರವೇರಿಸಿದರು. ನಂತರ ಬಷೀರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದಿನದ ಮಹತ್ವದ ಕುರಿತು ಶಿಕ್ಷಕ ಪ್ರತಾಪ್ ಎನ್.ಬಿ. ಮಾತನಾಡಿದರು. ವಿದ್ಯಾರ್ಥಿಗಳಿಂದ ಭಾಷಣ, ಹಾಡು ನೃತ್ಯಗಳು ನಡೆದವು.ಅತಿಥಿಗಳು ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ಈ ಸಂದರ್ಭ ಎಸ್‌ಡಿಎಂಸಿ ಉಪಾಧ್ಯಕ್ಷೆ ರೆಹಮತ್, ಎಸ್ ಡಿಎಂಸಿ ಸದಸ್ಯರು, ಪೋಷಕರು, ಗ್ರಾಮಸ್ಥರು ಮತ್ತಿತರರು ಹಾಜರಿದ್ದರು. ಶಿಕ್ಷಕಿ ಕನಕ ನಿರೂಪಿಸಿ, ಪ್ರಭಾರ ಮುಖ್ಯ ಶಿಕ್ಷಕಿ ಮರಿಯಂಬಿ ಸ್ವಾಗತಿಸಿ, ಶಿಕ್ಷಕಿ ಸೀತಮ್ಮ ವಂದಿಸಿದರು.ಚೆಯ್ಯAಡಾಣೆ: ಕೊಕೇರಿ ಗ್ರಾಮದ ಕಿಕ್ಕರೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಊರಿನ ಪ್ರಮುಖರಾದ ಹಸನ್ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷೆ ರಾಯಿಲ ವಹಿಸಿದರು. ದಿನದ ಮಹತ್ವದ ಕುರಿತು ಮುಖ್ಯ ಶಿಕ್ಷಕಿ ಸುಮಿತ್ರ ಮಾತನಾಡಿದರು.
ವಿದ್ಯಾರ್ಥಿಗಳಿಂದ ಭಾಷಣ,ಹಾಡು ನೃತ್ಯಗಳು ನಡೆದವು. ಅತಿಥಿಗಳು ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಈ ಸಂದರ್ಭ ಯೂಸುಫ್, ಸಮದ್, ಹಸನ್, ಎಸ್‌ಡಿಎಂಸಿ ಸದಸ್ಯರು, ಪೋಷಕರು, ಗ್ರಾಮಸ್ಥರು ಮತ್ತಿತರರು ಹಾಜರಿದ್ದರು. ಶಾಲೆಯ ಮುಖ್ಯ ಶಿಕ್ಷಕಿ ಸುಮಿತ್ರ ಸ್ವಾಗತಿಸಿ ವಂದಿಸಿದರು.
ಕೂಡಿಗೆ: ಕೂಡಿಗೆಯಲ್ಲಿರುವ ಸದ್ಗುರು ಅಪ್ಪಯ್ಯ ಪ್ರೌಢಶಾಲೆಯಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಮಾಜಿ ಸೈನಿಕ ಎಂ. ದಯಾನಂದ ಅವರು ಧ್ವಜಾರೋಹಣ ನೆರವೇರಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ವ್ಯವಸ್ಥಾಪಕ ಎಂ.ಬಿ .ಮೊಣ್ಣಪ್ಪ ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ದತ್ತಿ ನಿಧಿ ಬಹುಮಾನವನ್ನು ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಹಾಗೂ ರಾಗ ರಂಜಿನಿ ರೆಕಾರ್ಡಿಂಗ್ ಕಂಪನಿ ವತಿಯಿಂದ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಐ.ಡಿ. ಕಾರ್ಡ್ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯ ಕೆ.ಎನ್. ಮಂಜುನಾಥ್ ಹಾಗೂ ಹಳೆಯ ವಿದ್ಯಾರ್ಥಿ ಚರಣ್ ಎಂ.ಆರ್. ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಪುಷ್ಪ ಎನ್ ಸ್ವಾಗತಿಸಿ, ಶಿಕ್ಷಕ ಟಿ. ಎಸ್. ಕಾಂತರಾಜ್ ನಿರೂಪಿಸಿದರು. ಶಿಕ್ಷಕ ಎ.ಪಿ. ಸೋಮಯ್ಯ ವಂದಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಸಿಬ್ಬಂದಿಗಳಾದ ಎಂ.ಎಸ್. ಕುಸುಮ, ಗಣೇಶ್‌ಕುಮಾರ್, ಕೆ.ಜಿ. ರೂಪಕಲಾ. ಪಿ.ಪಿ. ಪ್ರತಾಪ್ ಎಸ್. ಹೇಮಮಾಲಿನಿ, ದೀಪಕ್ ಹಾಗೂ ರಘು ಹಾಜರಿದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ಪೊನ್ನಂಪೇಟೆ: ಪೊನ್ನಂಪೇಟೆ ತಾಲೂಕಿನ ಹುದಿಕೇರಿಯಲ್ಲಿ ಅಮರ್ ಜವಾನ್ ಯುದ್ಧ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ, ಧ್ವಜಾರೋಹಣ ನೆರವೇರಿಸುವ ಮೂಲಕ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಲೆಫ್ಟಿನೆಂಟ್ ಬೊಳ್ಳಿಮಾಡ ವಸಂತ್ ನಂಜಪ್ಪ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಪ್ರತಿಯೊಬ್ಬ ನಾಗರಿಕನು ಸಂವಿಧಾನಕ್ಕೆ ಗೌರವ ಸಲ್ಲಿಸಬೇಕು. ವಿದ್ಯಾರ್ಥಿಗಳು ಪ್ರಾಮಾಣಿಕತೆಯನ್ನು ಬೆಳೆಸಿಕೊಳ್ಳಬೇಕು ಎಂದರು. ಹುದಿಕೇರಿ ಮಾಜಿ ಸೈನಿಕ ಸಂಘದ ಅಧ್ಯಕ್ಷ ಬಲ್ಯಮೀದೇರಿರ ಪ್ರಕಾಶ್ ಮಾತನಾಡಿ, ಮಕ್ಕಳು ಶುಚಿತ್ವವನ್ನು ಕಾಪಾಡಿಕೊಳ್ಳಬೇಕು ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ಸರಿಯಾದ ನಿರ್ವಹಣೆ ಮಾಡಬೇಕು. ದೇಶಕ್ಕೆ ಉತ್ತಮ ಪ್ರಜೆಗಳಾಗಬೇಕೆಂದು ಕಿವಿಮಾತು ಹೇಳಿದರು.
ಹುದಿಕೇರಿ ಮಾಜಿ ಸೈನಿಕರ ಸಂಘದ ಗೌರವ ಸಲಹೆಗಾರ ಮಂಡೆಚAಡ ದಿನೇಶ್ ಚಿಟ್ಟಿಯಪ್ಪ ಮಾತನಾಡಿ, ಭಾರತ ದೇಶ ಸ್ವಾತಂತ್ರö್ಯ ಪಡೆಯುವಲ್ಲಿ ಶ್ರಮಿಸಿದ ಹಲವಾರು ವೀರ ಯೋಧರ ತ್ಯಾಗ ಬಲಿದಾನವನ್ನು ನಾವು ನೆನೆಸಿಕೊಳ್ಳಬೇಕಿದೆ ಎಂದರು.
ಈ ಸಂದರ್ಭ ಹುದಿಕೇರಿ ಶಾಲೆ ಬಳಿಯಿಂದ ೫ ನಾಡಿನ ಮಾಜಿ ಸೈನಿಕರು ಹಾಗೂ ಹುದಿಕೇರಿ ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಹುದಿಕೇರಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿ, ಅಮರ್ ಜವಾನ್ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು.
ಈ ಸಂದರ್ಭ ಹುದಿಕೇರಿ ಮಾಜಿ ಸೈನಿಕ ಸಂಘದ ಉಪಾಧ್ಯಕ್ಷ ಚೆಕ್ಕೇರ ಎಂ. ರಮೇಶ್, ಕಾರ್ಯದರ್ಶಿ ಬಿ. ಎಂ. ತಿಮ್ಮಯ್ಯ, ಸಂಘಟನಾ ಕಾರ್ಯದರ್ಶಿ ಕಿರಿಯಮಾಡ ಎ. ಮಿಲನ್ ಗಣಪತಿ, ಖಜಾಂಚಿ ಬೊಳ್ಳಜಿರ ಪಿ. ಕಿಶೋರ್, ಜಂಟಿ ಖಜಾಂಚಿ ಬೊಜ್ಜಂಗಡ ಸುನಿಲ್ ಕುಮಾರ್, ಜಂಟಿ ಕಾರ್ಯದರ್ಶಿ ಬೊಳ್ಳಿಮಾಡ ಪಿ. ಬಿನು ಕುಮಾರ್, ನಿರ್ದೇಶಕ ಮುಲ್ಲೆಂಗಡ ಜಯ ಉತ್ತಯ್ಯ, ಹುದಿಕೇರಿ ಪೊಲೀಸ್ ಠಾಣಾ ಎ. ಎಸ್. ಐ ಸುಕುಮಾರ್, ಹುದಿಕೇರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಹೆಚ್. ಎಂ ಜಯಮ್ಮ, ಸಹ ಶಿಕ್ಷಕರಾದ ಪಿ. ಕೆ. ಶೀಜಾ, ಮಿತಿಲೇಶ್, ಹಾಗೂ ಮಾಜಿ ಸೈನಿಕರು ಹಾಜರಿದ್ದರು.ಮಡಿಕೇರಿ: ಇಲ್ಲಿಗೆ ಸಮೀಪದ ಕಗ್ಗೋಡ್ಲುವಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮವನ್ನು ಕಗ್ಗೋಡ್ಲು ನಿವಾಸಿ ದಂಬೆಕೋಡಿ ಕವನ ಭೀಷ್ಮ ಅವರು ನೆರವೇರಿಸಿದರು.
ಸಭಾ ಕಾರ್ಯಕ್ರಮವು ಎಸ್.ಡಿ.ಎಂ.ಸಿ. ಸದಸ್ಯ ಹೊನ್ನುಕೋಟಿ ಕಮಲಾಕರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ನಿವೃತ್ತ ಶಿಕ್ಷಕ ಅಂಬ್ರಾಟಿ ಜಗನ್ನಾಥ್ ಹಾಗೂ ಕಗ್ಗೋಡ್ಲುವಿನ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಇಂದ್ರಕುಮಾರ್ ಭಾಗವಹಿಸಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಶಿಕ್ಷಕರ ಮಾರ್ಗದರ್ಶನದಲ್ಲಿ ಮೂಡಿಬಂದ ಭಾರತದ ಸಂವಿಧಾನ ಪೀಠಿಕೆಯ ವಿದ್ಯಾರ್ಥಿಗಳ ನೃತ್ಯವು ಎಲ್ಲರ ಗಮನ ಸೆಳೆಯಿತು.
ಶಾಲೆಯಲ್ಲಿ ಗಣಿತ ವಿಷಯದಲ್ಲಿ ವಿಶೇಷ ಪ್ರತಿಭೆ ಸಾವಿರದವರೆಗಿನ ಮಗ್ಗಿಯನ್ನು ಹೇಳಬಲ್ಲ ಕೆ.ಎಸ್. ಕಾರ್ತಿಕ್ ಅವರ ಪ್ರತಿಭೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಕವನ ಭೀಷ್ಮ ಅವರು ಗಣಿತದ ಪುಸ್ತಕಗಳ ಖರೀದಿಯೊಂದಿಗೆ ಹೆಚ್ಚಿನ ಜ್ಞಾನಗಳಿಸುವ ಸಲುವಾಗಿ ಖರೀದಿಸಿ ನೀಡಲು ಶಾಲೆಯ ಮುಖ್ಯ ಶಿಕ್ಷಕಿ ಎಂ.ಹೆಚ್. ಪದ್ಮಾವತಿ ಅವರಿಗೆ ರೂ. ೧ ಸಾವಿರವನ್ನು ನೀಡಿದರು. ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ. ಸದಸ್ಯರು, ಶಿಕ್ಷಕರು, ಪೋಷಕರು, ಈಶ್ವರಿ ಮಹಿಳಾ ಸಮಾಜದ ಸದಸ್ಯರು, ಕಾವೇರಿ ಯುವಕ ಸಂಘದ ಸದಸ್ಯರು ಹಾಜರಿದ್ದರು.ಮಡಿಕೇರಿ: ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ರೋಟರಿ ವುಡ್ಸ್ನ ಅಧ್ಯಕ್ಷ ಕಿರಣ್ ಕುಂದರ್ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರನ್ನು ನಾವೆಲ್ಲರೂ ಸ್ಮರಿಸಬೇಕೆಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ನಿರ್ಮಲ ಅವರು ನಮ್ಮ ಸಂವಿಧಾನದ ಮಹತ್ವವನ್ನು ತಿಳಿದುಕೊಳ್ಳುವಂತೆ ಹೇಳಿದರು. ಕಾರ್ಯಕ್ರಮವನ್ನು ಕಾಲೇಜಿನ ವಿದ್ಯಾರ್ಥಿ ನಾಯಕಿ ಪ್ರಿಯ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರುಗಳಾದ ರೇವತಿ ರಮೇಶ್, ಪ್ರೇಮ ನಿಂಗಪ್ಪ , ರಿಯಾಜ್ ಉದ್ದಿನ್ ಹಾಗೂ ರೋಟರಿ ವುಡ್ಸ್ನ ವಸಂತ, ಅಕ್ಷತಾ ಶೆಟ್ಟಿ, ಕಾಲೇಜಿನ ಬೋಧಕ ಮತ್ತು ಬೋಧಕೇತರ ವರ್ಗದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.ಮಡಿಕೇರಿ: ಮಡಿಕೇರಿ ಮಹದೇವಪೇಟೆಯ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಬಡಾವಣೆಯಲ್ಲಿ ಸ್ಥಳೀಯ ಸೌಹಾರ್ದ ಸಮಿತಿಯ ಆಶ್ರಯದಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
ಸೌಹಾರ್ದ ಸಮಿತಿ ಅಧ್ಯಕ್ಷ ಎಂ.ಎ. ಸಾಧು ಸಾದಿಕ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಅಮೀನ್ ಮೊಹಿಸಿನ್ ಧ್ವಜಾರೋಹಣ ಮಾಡಿದರು.
ಈ ಸಂದರ್ಭ ಅಮೀನ್ ಮೊಹಿಸಿನ್ ಮಾತನಾಡಿ, ಸಮಾಜದ ಎಲ್ಲಾ ಹಕ್ಕುಗಳು ಎಲ್ಲ ವರ್ಗದವರಿಗೂ ದೊರಕಬೇಕು ಎಂದು ಪ್ರತಿಪಾದಿಸಿದ ಮಹಾನ್ ಮಾನವತಾವಾದಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆದರ್ಶವನ್ನು ಸರ್ವರೂ ರೂಢಿಸಿಕೊಳ್ಳಬೇಕೆಂದರು.
ಅಧ್ಯಕ್ಷ ಸಾಧು ಸಾದಿಕ್ ಮಾತನಾಡಿ, ಸದ್ಯದಲ್ಲಿಯೇ ಬಡಾವಣೆಯಲ್ಲಿ ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗುವುದೆಂದು ಹೇಳಿದರು. ಸಮಿತಿ ಗೌರವ ಅಧ್ಯಕ್ಷ ಎಂ.ಎ. ನಜೀರ್ ಖುರೇಶಿ, ಉಪಾಧ್ಯಕ್ಷ ಟಿ.ಆರ್. ಜೀವನ್, ನಿವೃತ್ತ ಪೊಲೀಸ್ ಅಧಿಕಾರಿ ಸಿ.ಪಿ. ತಿಮ್ಮಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಮಿತಿ ಪ್ರಧಾನ ಕಾರ್ಯದರ್ಶಿ ಬೈ.ಶ್ರೀ. ಪ್ರಕಾಶ್ ಸ್ವಾಗತಿಸಿ, ದಿನದ ಮಹತ್ವದ ಕುರಿತಾಗಿ ಮಾತನಾಡಿದರು. ಉಪಾಧ್ಯಕ್ಷ ಎಂ.ಬಿ. ಕೌಸರ್ ವಂದಿಸಿದರು.
ಸಮಾರAಭದಲ್ಲಿ ಡಾ. ಚೇತನ್, ಡಾ. ಸುಫಿಯಾನ್, ಬಿ.ಎಂ. ಹರೀಶ್, ಪ್ರಿಯಾ ಗುರುಕಿರಣ್, ಸೀತಾ ಪ್ರಕಾಶ್, ನಾಜಿಯಾ, ಸಾಧು ಸಾದಿಕ್, ಸೀಮಾ ಜಿಯಾ, ಸಬಿನಾ, ಜಕ್ರಿಯ, ಖಲೀಲ್ ಭಾಷಾ ಮುಂತಾದವರು ಭಾಗವಹಿಸಿದ್ದರು.
ಸಮಿತಿ ಗೌರವ ಅಧ್ಯಕ್ಷ ಪಾಡೆಯಂಡ ಮಣಿ ಮೇದಪ್ಪ ಮಕ್ಕಳ ಕ್ರೀಡಾ ಚಟುವಟಿಕೆ ನಡೆಸಿಕೊಟ್ಟರು. ನೆರೆದಿದ್ದ ಬಡಾವಣೆಯ ಸರ್ವರಿಗೂ ಸಿಹಿಯನ್ನು ಹಂಚಲಾಯಿತು.ಕಡAಗ: ಕಡಂಗದ ವಿಜಯ ವಿದ್ಯಾಸಂಸ್ಥೆ ವತಿಯಿಂದ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಶಾಲಾ ಆವರಣದಿಂದ ಆರಂಭಗೊAಡ ಮೆರವಣಿಗೆ ಕಡಂಗ ಪಟ್ಟಣದಲ್ಲಿ ಸಾಗಿತು.
ಮೆರವಣಿಗೆ ನಂತರ ಶಾಲಾ ಮೈದಾನದಲ್ಲಿ ವಿದ್ಯಾರ್ಥಿಗಳಿಂದ ಪಥಸಂಚಲನ ನಡೆಯಿತು. ವಿದ್ಯಾರ್ಥಿಗಳು ಗಣರಾಜ್ಯೋತ್ಸವದ ಮಹತ್ವವನ್ನು ಸಾರುವ ಭಾಷಣ ಮಾಡಿದರು. ಬಳಿಕ ವಿಜಯ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಬಲ್ಯಂಡ ಪಿ. ಬಿದ್ದಪ್ಪ ಮಾತನಾಡಿ, ರಾಷ್ಟçದ ಅಭಿವೃದ್ಧಿಯಲ್ಲಿ ವಿದ್ಯಾರ್ಥಿಗಳ ಪಾತ್ರದ ಕುರಿತು ವಿವರಿಸಿದರು.
ಮುಖ್ಯೋಪಾಧ್ಯಾಯರಾದ ಪಟ್ರಪಂಡ ಗೀತಾ ಭೋಜಮ್ಮ ಮಾತನಾಡಿ, ವಿದ್ಯಾರ್ಥಿಗಳು ಜವಾಬ್ದಾರಿಯುತ ಹಾಗೂ ಶಿಸ್ತಿನ ನಾಗರಿಕರಾಗಿ ರೂಪುಗೊಳ್ಳಬೇಕೆಂದು ಕರೆ ನೀಡಿದರು. ಶಿಕ್ಷಕಿ ಮಾತಂಡ ವಿನ್ನಿ ಗಣಪತಿ ಮಾತನಾಡಿದರು. ವಿವಿಧ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.ಚೆಟ್ಟಳ್ಳಿ: ಚೆಟ್ಟಳ್ಳಿ ಪ್ರೌಢಶಾಲೆಯಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ನಿವೃತ್ತ ಯೋಧ ಪುತ್ತರಿರ ಕೆ.ದೇವಯ್ಯ ಧ್ವಜಾರೋಹಣ ಮಾಡಿದರು. ನಂತರ ಮಂಗಳ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಪುತ್ತರಿರ ದೇವಯ್ಯ ಮಾತನಾಡಿ ನಮ್ಮ ದೇಶದ ಸೇನಾವ್ಯವಸ್ಥೆ ಇಂದು ಸಾಕಷ್ಟು ಅಭಿವೃದ್ಧಿಯತ್ತ ಸಾಗಿದ್ದು, ಸೇನೆಯಲ್ಲಿ ಸೇವೆ ಸಲ್ಲಿಸಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಮತ್ತೋರ್ವ ಅತಿಥಿ ಸುಂಟಿಕೊಪ್ಪ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಎನ್.ಎಸ್. ಈಶಾ ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಸಂಯಮ ಹಾಗೂ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುವ ಮೂಲಕ ಸಾಧನೆ ಮಾಡಬೇಕೆಂದರು.
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಪೇರಿಯನ ಪಿ. ಜಯಾನಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಮುಂಬರುವ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಬೇಕೆಂದರು. ಕಾರ್ಯಕ್ರಮದಲ್ಲಿ ಸಂಚಾಲಕರಾದ ಮುಳ್ಳಂಡ ರತ್ತುಚಂಗಪ್ಪ, ಖಜಾಂಚಿ ಬಟ್ಟೀರ ರಕ್ಷುಕಾಳಪ್ಪ, ನಿರ್ದೇಶಕರುಗಳಾದ ಕೊಂಗೇಟಿರ ಹರೀಶ್ ಅಪ್ಪಣ್ಣ ಹಾಗೂ ಮುಳ್ಳಂಡ ಪುಷ್ಯ ರಂಜನ್ ಶಾಲಾ ಮುಖ್ಯೋಪದ್ಯಾಯಿನಿ ತಿಲಕ ಹಾಜರಿದ್ದರು.
ಶಾಲಾ ಸಂಸತ್ತಿನ ನಾಯಕ ಆಶಿಕ್ ಸಂವಿಧಾನದ ಪ್ರಸ್ತಾವನೆಯನ್ನು ಓದಿದರು. ಗಣರಾಜ್ಯೋತ್ಸವದ ಬಗ್ಗೆ ಭಾಷಣ ಹಾಗೂ ಭಕ್ತಿ ಗೀತೆಗಳ ಗಾಯನ ಏರ್ಪಡಿಸಲಾಗಿತ್ತು. ಕನ್ನಡ ಶಿಕ್ಷಕಿ ಯು. ಸುನಂದ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಜಿ.ಸಿ.ಸತ್ಯನಾರಾಯಣ ವಂದಿಸಿದರು. ಕಡಂಗ: ವೀರಾಜಪೇಟೆಯ ಡೊನೇರ‍್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಧ್ವಜಾರೋಹಣ ನೆರವೇರಿಸಿದರು.
ನಂತರ ಮಾತನಾಡಿದ ಇವರು, ದೇಶದ ಐಕ್ಯತೆ, ಸಮಗ್ರತೆ, ಸ್ವಾತಂತ್ರ‍್ಯ ಹಾಗೂ ಸಮಾನತೆ, ಸಹೋದರತೆಯನ್ನು ಸಾರುವ ಸಂವಿಧಾನವು ಸಮಸ್ತ ಭಾರತೀಯರ ಧರ್ಮಗ್ರಂಥವಿದ್ದAತೆ ಎಂದರು. ಅತಿಥಿಗಳಾಗಿ ವೀರಾಜಪೇಟೆ ಪುರಸಭೆಯ ಮಾಜಿ ಸದಸ್ಯರಾದ ಎಸ್.ಹೆಚ್. ಮತೀನ್, ಚಾರಿಟೇಬಲ್ ಟ್ರಸ್ಟ್ ಸ್ಥಾಪಕಾಧ್ಯಕ್ಷ, ಮಾಜಿ ಪುರಸಭೆ ಸದಸ್ಯರಾದ ಮಹಮ್ಮದ್ ರಾಫಿ, ಟ್ರಸ್ಟ್ ಅಧ್ಯಕ್ಷ ಆಲಿರ ಉಸ್ಮಾನ್, ಉಪಾಧ್ಯಕ್ಷ ಸಿ.ಕೆ.ರಿಯಾಜ್, ಕೆ.ಟಿ.ಅಲ್ತಾಫ್, ರಿಜ್ವಾನ್, ಸಾಜಿ, ಟ್ರಸ್ಟಿಗಳು ಉಪಸ್ಥಿತರಿದ್ದರು. ಮಕ್ಕಳಿಂದ ಪಥಸಂಚಲನ ಹಾಗೂ ಧ್ವಜ ವಂದನೆ ನಡೆಯಿತು. ಕೊಡವ ಅಕಾಡೆಮಿ ಅಧ್ಯಕ್ಷರನ್ನು ಸನ್ಮಾನಿಸಲಾಯಿತು. *ಗೋಣಿಕೊಪ್ಪ: ಗಣರಾಜ್ಯೋತ್ಸವವನ್ನು ಗೋಣಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿಆಚರಿಸಲಾಯಿತು. ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಜಗದೀಶ್ ಜೋಡುಬೀಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಧ್ವಜಾರೋಹಣ ನೆರವೇರಿಸಿದರು. ನಂತರ ಮಾತನಾಡಿದ ಪ್ರಮೋದ್‌ಗಣಪತಿ, ಭಾರತ ನಿರ್ಮಾಣಕ್ಕೆ ಹೋರಾಡಿದವರನ್ನು ನಾವೆಲ್ಲರೂ ಸ್ಮರಿಸಬೇಕೆಂದರು.
ಭಾರತ ಸ್ವಾತಂತ್ರö್ಯಗೊAಡ ನಂತರ ಅದರ ಅಸ್ತಿತ್ವಕ್ಕಾಗಿ ಸಂವಿಧಾನವನ್ನು ರಚಿಸಲಾಯಿತು ಎಂದರು. ಶಾಲೆಯ ಮುಖ್ಯ ಶಿಕ್ಷಕ ಎಚ್. ಕೆ ಕುಮಾರ್ ಮಾತನಾಡಿ, ನಾವೆಲ್ಲರೂ ನೈತಿಕತೆಯನ್ನು ಮೈಗೂಡಿಸಿಕೊಂಡು, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು ಭಾಷಣ ಮಾಡಿ ದೇಶಭಕ್ತಿ ಗೀತೆಗಳನ್ನು ಹಾಡಿದರು. ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಬಿ.ಎನ್ ಪ್ರಕಾಶ್, ಕೊಣಿಯಂಡ ಬೊಜಮ್ಮ, ಅಪ್ಜಲ್, ಸಫುರಬಾನು, ಶಾಲೆಯ ಮೇಲುಸ್ತುವಾರಿ ಸಮಿತಿಉಪಾಧ್ಯಕ್ಷೆ ದಿವ್ಯ,ಸದಸ್ಯರುಗಳಾದ ಗೌರಿ, ಅನಿತಾ, ಸೌಮ್ಯ, ಕಲಾ ಶಿಕ್ಷಕ ಸತೀಶ್ ಬಿ.ಆರ್, ದೈಹಿಕ ಶಿಕ್ಷಣ ಶಿಕ್ಷಕ ರಮಾನಂದ ಟಿ.ಡಿ, ಸಹಾಯಕ ಶಿಕ್ಷಕರುಗಳಾದ ಜೋಸ್ಲಿಯಾ ಎಂ.ಟಿ, ಜಯಶ್ರೀ ಎನ್ .ಕೆ, ಇಂದಿರಾ ಎಂ.ಸಿ,ಅನಿತಕುಮಾರಿ ಹೆಚ್.ಇ, ದಮಯಂತಿಎ.ಎಮ್, ಅರ್ಶಿಯಾ.ಬಿ, ಕ್ಲ್ಯೆಮಿಂಟನ್, ಸಹನ್ ಎಂ.ಬಿ, ಶಾರದ ಕೆ ಎಸ್, ನಾಗರಾಜು, ಸ್ನೇಹಾಕಾವೇರಮ್ಮ, ಸಿದ್ದರಾಜು,ಎನ್, ಮಂಜುಳ ವಿ, ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.