ಚೆಟ್ಟಳ್ಳಿ, ಫೆ. ೧: ಕುಶಾಲನಗರ ಮೀನುಕೊಲ್ಲಿ ಅರಣ್ಯ ವಲಯದಲ್ಲಿ ಕಾಲೇಜ್ ಆಫ್ ಫಾರೆಸ್ಟಿç, ಪೊನ್ನಂಪೇಟೆ ಸಂಸ್ಥೆಯ ೬೦ ವಿದ್ಯಾರ್ಥಿಗಳಿಗೆ ಅರಣ್ಯ ಅಗ್ನಿ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಮೀನುಕೊಲ್ಲಿ ವಿಭಾಗದ ಡಿಆರ್‌ಎಫ್‌ಓ ಸಚಿನ್ ನಿಂಬಾಳ್ಕರ್ ಅವರು ಅರಣ್ಯ ಅಗ್ನಿ ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಅಗ್ನಿ ಜಾಗೃತಿ, ಫೈರ್‌ಲೈನ್ (ಬೆಂಕಿರೇಖೆ) ನಿರ್ಮಾಣ, ಇಪಿಟಿ ಸಿಪಿಟಿ, ಸೋಲಾರ್ ಬೇಲಿ, ರೈಲ್ವೇ ಬ್ಯಾರಿಕೇಡ್, ವಾಚ್ ಟವರ್‌ಗಳ ಉಪಯೋಗ ಹಾಗೂ ಅರಣ್ಯ ಅತಿಕ್ರಮಣ ಸಮಸ್ಯೆಗಳ ಕುರಿತು ವಿವರವಾಗಿ ತಿಳಿಸಲಾಯಿತು.
ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ದೀಪ್ತಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ವೇಳೆ ಮೀನುಕೊಳ್ಳಿ ಅರಣ್ಯ ಸಿಬ್ಬಂದಿಗಳಾದ ಅಪ್ಪಸ್ವಾಮಿ, ಜಗದೀಶ್, ಸತೀಶ್ ಹಾಗೂ ಚಾಲಕ ವಾಸುದೇವ್ ಉಪಸ್ಥಿತರಿದ್ದರು.