ಸೋಮವಾರಪೇಟೆ, ಫೆ. ೧: ಇನ್ನರ್ ವೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ವತಿಯಿಂದ ಕೂಡಿಗೆ ಶ್ರೀ ಶಕ್ತಿಧಾಮ ವೃದ್ಧಾಶ್ರಮಕ್ಕೆ ಉಪಯುಕ್ತವಾದ ವೆಟ್ ಗ್ರೈಂಡರ್ ಅನ್ನು ಕೊಡುಗೆಯಾಗಿ ನೀಡಲಾಯಿತು.

ಕ್ಲಬ್ ಅಧ್ಯಕ್ಷೆ ತನ್ಮಯಿ ಪ್ರವೀಣ್ ಮಾತನಾಡಿ, ವೃದ್ಧಾಶ್ರಮದ ವಾಸಿಗಳಿಗೆ ದಿನನಿತ್ಯದ ಆಹಾರ ತಯಾರಿಕೆಗೆ ಸಹಕಾರಿಯಾಗುವ ಈ ಉಪಕರಣವನ್ನು ನೀಡಲಾಗಿದೆ ಎಂದರಲ್ಲದೆ, ಆಶ್ರಮ ವಾಸಿಗಳಿಗೆ ಶಾರೀರಿಕ ಹಾಗೂ ಮಾನಸಿಕ ಆರೋಗ್ಯದ ಮಹತ್ವ, ಸಮತೋಲನಯುತ ಆಹಾರ ಪದ್ಧತಿ, ವೈಯಕ್ತಿಕ ಸ್ವಚ್ಛತೆ, ಆರೋಗ್ಯಕರ ಜೀವನ ಶೈಲಿಯ ಬಗ್ಗೆ ತಿಳಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಕ್ಲಬ್‌ನ ಕಾರ್ಯದರ್ಶಿ ಸುವಿನಾ ಕೃಪಾಲ್, ಖಜಾಂಚಿ ಆಶಾ ಮೋಹನ್, ಸದಸ್ಯರಾದ ಲತಾ ನಾಗೇಶ್, ನಂದಿತಾ ವೀರೇಂದ್ರ, ಶೋಭಾ ರಘು, ಸೌಮ್ಯಾ ಸತೀಶ್ ಹಾಗೂ ಮೈಸೂರು ನಾರ್ತ್ ಕ್ಲಬ್‌ನ ಮಾಜಿ ಅಧ್ಯಕ್ಷೆ ನಂದಿನಿ ಪ್ರಭುದೇವ್ ಇದ್ದರು.