ಪೊನ್ನಂಪೇಟೆ, ಫೆ. ೧: ಗೋಣಿಕೊಪ್ಪಲು ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟçಪಿತ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮೌನಾಚರಣೆ ಮಾಡುವ ಮೂಲಕ ಹುತಾತ್ಮರ ದಿನ ಆಚರಿಸಲಾಯಿತು.
ಈ ಸಂದರ್ಭ ಪ್ರಾಂಶುಪಾಲ ಎಸ್.ಎಸ್. ಮಾದಯ್ಯ ಮಾತನಾಡಿ, ಹಿಂಸೆಯಿAದ ಸಾಧಿಸಲು ಅಸಾಧ್ಯವಾದದ್ದನ್ನು, ಅಹಿಂಸೆಯಿAದ ಸಾಧಿಸಬಹುದು ಎಂದು ಸ್ವಾತಂತ್ರ ಹೋರಾಟದ ಮುಖಾಂತರ ಜಗತ್ತಿಗೆ ಸಾರುವಲ್ಲಿ ಮಹಾತ್ಮ ಗಾಂಧೀಜಿ ಯಶಸ್ವಿಯಾಗಿದ್ದರು.
ಗಾಂಧೀಜಿಯ ಅಹಿಂಸಾ ನಡೆ ಪ್ರತಿ ರಾಷ್ಟçಕ್ಕೂ, ಪ್ರತಿ ವ್ಯಕ್ತಿಗೂ ಮಾದರಿಯಾಗಿದೆ. ಗಾಂಧೀಜಿ ಅವರ ಜೀವನ ಚರಿತ್ರೆಯನ್ನು ಓದುವ ಮೂಲಕ ವಿದ್ಯಾರ್ಥಿಗಳು ಅವರ ಆದರ್ಶಗಳನ್ನು ಬದುಕಿಗೆ ಅಳವಡಿಸಿಕೊಳ್ಳಬೇಕು.
ಗಾಂಧೀಜಿ ಸೇರಿದಂತೆ ನಮ್ಮ ದೇಶದ ಸ್ವಾತಂತ್ರö್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ಪ್ರತಿಯೊಬ್ಬರನ್ನೂ ಈ ದಿನ ನಾವು ಸ್ಮರಿಸಿಕೊಳ್ಳಬೇಕು ಎಂದರು.
ಈ ಸಂದರ್ಭ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕ ಹಾಗೂ ಎನ್‌ಸಿಸಿ ಅಧಿಕಾರಿ ಡಾ. ಲೆಫ್ಟಿನೆಂಟ್ ಎಂ. ಆರ್. ಆಕ್ರಂ, ಎನ್‌ಎಸ್‌ಎಸ್ ಅಧಿಕಾರಿ ಚೇತನ್ ಚಿಣ್ಣಪ್ಪ, ಹಿರಿಯ ಉಪನ್ಯಾಸಕ ಕ್ಯಾಪ್ಟನ್ ಬ್ರೆöÊಟಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕ ಎಂ.ಟಿ. ಸಂತೋಷ್, ಉಪನ್ಯಾಸಕರು, ಆಡಳಿತಾತ್ಮಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.
ಈ ಕ್ರಮ ಅನುಸರಿಸಿ...
ಕಳ್ಳರ ಹಾಗೂ ದರೋಡೆಕೋರರ ಹಾವಳಿ ಹೆಚ್ಚಾಗಿರುದರಿಂದ ಕೈಗೊಳ್ಳಬೇಕಾದ ಕೆಲವು ಸುರಕ್ಷಾ ಸಲಹೆಗಳು...
೧. ಮನೆಯ ಎದುರು ಬಾಗಿಲಿಗೆ ಸೆಂಟರ್ ಲಾಕ್ ಹಾಕಿ ಭದ್ರ ಪಡಿಸಿಕೊಳ್ಳುವುದು.
೨. ಮನೆಯ ಮುಂಭಾಗ ಹಾಗೂ ಹಿಂಬದಿ ಬಾಗಿಲಿಗೆ ಒಳಗಡೆಯಿಂದ ಕಬ್ಬಿಣದ ಅಡ್ಡ ಪಟ್ಟಿಯನ್ನು ಅಳವಡಿಸುವುದು.
೩. ಮನೆಯಿಂದ ಕಾರ್ಯಕ್ರಮ, ಜಾತ್ರೆಗಳಿಗೆ ಹೋಗುವಾಗ ಮನೆಯಲ್ಲಿ ಕನಿಷ್ಟಪಕ್ಷ ಒಬ್ಬರಾದರೂ ಮನೆಯಲ್ಲಿ ಉಳಿದುಕೊಳ್ಳುವುದು.
೪. ಗುಜರಿ ಹೆಕ್ಕುವವರು, ಹಾಸಿಗೆ ಮಾರಾಟ, ಬೆಡ್‌ಶೀಟ್ ಮಾರಾಟ, ಸ್ಟವ್ ರಿಪೇರಿ ಬಂದಲ್ಲಿ ಅವರ ಆಧಾರ್ ಕಾರ್ಡ್ನ ಫೋಟೋ ಹಾಗೂ ಅವರ ಫೋಟೊ ಮೊಬೈಲ್‌ನಲ್ಲಿ ತೆಗೆದಿಡುವುದು.
೫. ಗ್ಯಾಸ್ ಸಿಲಿಂಡರ್ ಬದಲಿಸುವ ಸಮಯ ಗ್ಯಾಸ್ ಸಿಲಿಂಡರ್‌ಗಳನ್ನು ರಸ್ತೆ ಬದಿಯಲ್ಲಿ ಇಟ್ಟು ಹೋಗಬಾರದು.
೬. ಹಗಲು-ರಾತ್ರಿ ಹೊತ್ತಿನಲ್ಲಿ ಸಂಶಯಾಸ್ಪದವಾಗಿ ಯಾವುದೇ ವಾಹನ ರಸ್ತೆಯಲ್ಲಿ ನಿಂತಿದ್ದರೆ ನೋಂದಣಿ ಸಂಖ್ಯೆ ಬರುವಂತೆ ಫೋಟೋ ತೆಗೆದಿಟ್ಟುಕೊಳ್ಳುವುದು.
೭. ರಸ್ತೆಗೆ ಕಾಣುವಂತೆ ಬಾಗಿಲಿಗೆ, ಗೇಟಿಗೆ ಬೀಗ ಹಾಕಬಾರದು.
೮. ಮನೆಯಲ್ಲಿ ಒಂಟಿಯಾಗಿರುವಾಗ ಮುಂಬಾಗಿಲು ಹಾಕಿಕೊಂಡು ಕೆಲಸ ಮಾಡುವುದು.
೯. ಮುಂಬಾಗಿಲು ಮತ್ತು ಹಿಂಬಾಗಿಲಿಗೆ ಸಮಾನ ಪ್ರಾಮುಖ್ಯತೆ ನೀಡುವುದು.
೧೧. ಮನೆಯ ಬಾಗಿಲು ತಟ್ಟಿದಾಗ, ಬೆಲ್ ಮಾಡಿದಾಗ ತಕ್ಷಣ ಬಾಗಿಲು ತೆರೆಯದೆ ಕಿಟಕಿಯಿಂದ ನೋಡಿ ಖಚಿತಪಡಿಸಿಕೊಂಡು ವ್ಯವಹರಿಸುವುದು.
೧೨. ಅಪರಿಚಿತರು ಮನೆ ಬಳಿ ಬಂದು ನೀರು, ವಿಳಾಸ ಇತ್ಯಾದಿ ಕೇಳಲು ಬಂದಾಗ ಅವರಲ್ಲಿ ಜಾಗೃತೆಯಿಂದ ವ್ಯವಹರಿಸುವುದು.
೧೩. ನೆರೆಹೊರೆಯವರೊಂದಿಗೆ ಸಂಬಾಷಣೆಯಲ್ಲಿ ತೊಡಗಲು ಅಥವಾ ಸಮಯ ಕಳೆಯಲು ತೆರಳುವಾಗ ಮನೆಗೆ ಮತ್ತು ಗೇಟಿಗೆ ಬೀಗ ಹಾಕುವುದನ್ನು ಮರೆಯಬೇಡಿ.
೧೪. ಮನೆಗಳಲ್ಲಿ ಅಪ್ರಾಪ್ತ ವಯಸ್ಸಿನವರನ್ನು, ವಯೋವೃದ್ಧರನ್ನು ಬಿಟ್ಟು ಹೋಗುವುದನ್ನು ತಪ್ಪಿಸಿ.
೧೫.ಅಂಚೆ ಕೊರಿಯರ್ ಪಾರ್ಸೆಲ್ ಉಡುಗೊರೆಗಳನ್ನು ಪಡೆದುಕೊಳ್ಳುವಾಗ ಖಚಿತಪಡಿಸಿಕೊಂಡು ವ್ಯವಹರಿಸಿಕೊಳ್ಳುವುದು.
೧೬. ಕಿಟಕಿಯ ಪಕ್ಕ ಬೆಲೆಬಾಳುವ ವಸ್ತುಗಳು ಮೊಬೈಲ್ ಫೋನ್ ಇಡುವುದು ತಪ್ಪಿಸಿ.
೧೭. ಬೆಲೆಬಾಳುವ ವಸ್ತುಗಳನ್ನು ಆದಷ್ಟು ಬ್ಯಾಂಕ್ ಲಾಕರ್‌ಗಳಲ್ಲಿ ಇಡುವುದು ಉತ್ತಮ.
೧೮. ಮನೆ ಬಾಗಿಲುಗಳಿಗೆ ಮ್ಯಾಜಿಕ್ ಅಲಾರ್ಮ್ ಸಿಸ್ಟಮ್‌ಗಳಂತಹ ಸುರಕ್ಷಾ ಸಾಮಗ್ರಿಗಳ ಬಗ್ಗೆ ಒತ್ತುಕೊಡಿ.
೧೯. ನೀವು ಮನೆಯಲ್ಲಿ ಮಲಗುವ ಸಮಯದಲ್ಲಿ ಬಾಗಿಲು, ಕಿಟಕಿ ಬೀಗ ಹಾಕಿ ಭದ್ರಪಡಿಸಿರುವುದನ್ನು ಪುನ; ಖಚಿತಪಡಿಸಿಕೊಳ್ಳುವುದು.
೨೦. ಮನೆಗೆ ಬೀಗ ಹಾಕಿ ಪರ ಊರಿಗೆ ಪ್ರಯಾಣ ಮಾಡುವ ಸಂದರ್ಭದಲ್ಲಿ ಅಕ್ಕಪಕ್ಕದವರಿಗೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದು.
೨೧. ಹೊಸದಾಗಿ ಬಾಡಿಗೆಗೆ ಬರುವ ವ್ಯಕ್ತಿಗಳ ಬಗ್ಗೆ, ಮನೆ ಕೆಲಸದವರ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ಭಾವಚಿತ್ರವನ್ನು, ಆಧಾರ್ ಕಾರ್ಡ್, ಅವರ ರಕ್ತ ಸಂಬAಧಿಗಳ ಮೊಬೈಲ್ ನಂಬರ್ ಪಡೆಯಲು ಮರೆಯಬೇಡಿ.
೨೨. ಅನುಮಾನಾಸ್ಪದ ವ್ಯಕ್ತಿ ವಸ್ತು ವಾಹನಗಳ ಬಗ್ಗೆ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ.
೨೩. ಚಿನ್ನದ ಒಡವೆಗಳನ್ನು ಪಾಲೀಶ್ ಮಾಡುತ್ತೇನೆಂದು ಚಿನ್ನದ ಒಡವೆ ಮಾರಾಟ ಮಾಡಲು ಮನೆಯ ಬಳಿ ಬರುವವರ ಬಗ್ಗೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ.
೨೪. ಜನರಿಲ್ಲದ ಪ್ರದೇಶದಲ್ಲಿ ಒಂಟಿಯಾಗಿ ಹೆಂಗಸರು ಓಡಾಡುವುದನ್ನು ಆದಷ್ಟು ತಪ್ಪಿಸುವುದು.
೨೫. ಒಂಟಿಯಾಗಿ ಓಡಾಡುವಾಗ ಅಪರಿಚಿತ ವ್ಯಕ್ತಿಗಳು ನಿಮ್ಮ ಬಳಿ ಬಂದು ವಿಳಾಸ ಕೇಳುವುದು, ಮಾತನಾಡಿಸುವುದು ಪ್ರಯತ್ನ ಮಾಡಿದಾಗ ಎಚ್ಚರದಿಂದ ವ್ಯವಹರಿಸುವುದು.
೨೬. ಬ್ಯಾಂಕ್, ಅಂಗಡಿ, ಪೋಸ್ಟ್ ಆಫೀಸ್ ಬಳಿ ಅಪರಿಚಿತರು ನಿಮ್ಮ ಹಣ ಕೆಳಗೆ ಬಿದ್ದಿದೆ ಎಂದು ತಿಳಿಸಿದಾಗ ಮೊದಲು ನಿಮ್ಮ ಬಳಿಯಿರುವ ಹಣ ಸುಭದ್ರವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
೨೭. ಮೋಹಕ್ಕೆ ಬಲಿಯಾಗಿ ಸುಲಿಗೆಗೆ ಒಳಗಾಗಬೇಡಿ, ಒಂಟಿಯಾಗಿ ಓಡಾಡುವಾಗ ಅಪರಿಚಿತ ವ್ಯಕ್ತಿಗಳು ನಿಮ್ಮ ಬಳಿ ನಿಧಾನವಾಗಿ ದ್ವಿಚಕ್ರ ವಾಹನ ಚಾಲನೆ ಮಾಡಿಕೊಂಡು ಬಂದಾಗ ಅವರ ಕೈಗೆಟುಕುವ ಅಂತರದಲ್ಲಿ ನಿಲ್ಲಬೇಡಿ.
೨೮. ಜನನಿಬಿಡ ಪ್ರದೇಶದಲ್ಲಿ, ಪಾರ್ಕ್, ಕತ್ತಲೆಯಲ್ಲಿ ಕುಳಿತುಕೊಳ್ಳುವ ಹವ್ಯಾಸ ತಪ್ಪಿಸಿ.
೨೯. ಅಪರಿಚಿತರು ನಂಬಿಸುವ ಅತೀಂದ್ರ ಶಕ್ತಿಗಳು, ಮಹಾನ್ ಪುರುಷರೆಂದು ಹೇಳಿದಾಗ ನಿಮ್ಮ ಮಾನಸಿಕ ಸಮತೋಲನವನ್ನು ಕಳೆದುಕೊಂಡು ಅವರ ನಿಯಂತ್ರಣಕ್ಕೆ ಒಳಗಾಗಿ ಮೋಸ ಹೋಗಬೇಡಿ.
೩೦. ನಿಮ್ಮ ಬಳಿ ಅನುಮಾನಾಸ್ಪದ ವ್ಯಕ್ತಿ ಬಂದರೆ ತಕ್ಷಣ ಜೋರಾಗಿ ಕೂಗಿಕೊಂಡು ಅಕ್ಕಪಕ್ಕದವರನ್ನು ಸೇರಿಸಿ.
೩೧. ವಾಯು ವಿಹಾರಕ್ಕೆ ಹೋಗುವ ಸಂದರ್ಭ ಚಿನ್ನದ ಸರಗಳನ್ನು ಬಟ್ಟೆಯಿಂದ ಮರೆಮಾಡಿಕೊಳ್ಳಿ.
೩೨. ಅನಾವಶ್ಯವಾಗಿ ಅಧಿಕ ಆಭರಣಗಳನ್ನು ಧರಿಸಿ ಪ್ರದರ್ಶಿಸಬೇಡಿ, ಕಳ್ಳರನ್ನು ಆಕರ್ಶಿಸಬೇಡಿ.
೩೩. ಆನ್‌ಲೈನ್ ವಂಚನೆ ಬಗ್ಗೆ ಎಚ್ಚರಿಕೆಯಿಂದ ಇರಿ.
೩೪. ಅಗತ್ಯ ಸಮಯದಲ್ಲಿ ೧೧೨ಗೆ ಕರೆ ಮಾಡಿ ನಿಮ್ಮ ವಿಳಾಸ, ಲ್ಯಾಂಡ್ ಮಾರ್ಕ್, ಪೊಲೀಸ್ ಠಾಣಾ ವ್ಯಾಪ್ತಿಯನ್ನು ಹೇಳಿ ಸಮಸ್ಯೆಯನ್ನು ತಿಳಿಸಿ.
- ಕೊಡಗು ಜಿಲ್ಲಾ ಪೊಲೀಸ್