ಕಡಂಗ, ಜ. ೨೧: ಮರುಗೋಡು ಭಾರತಿ ಜೂನಿಯರ್ ಕಾಲೇಜಿನ ೨೦೦೬-೦೮ ನೇ ಸಾಲಿನ ಹಳೆ ವಿದ್ಯಾರ್ಥಿಗಳ ವತಿಯಿಂದ “ಸ್ನೇಹ ಸಮ್ಮಿಲನ ಮತ್ತು ಗುರುವಂದನಾ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಮಹೇಶ್ ಅವರು ವಹಿಸಿ ಮಾತನಾಡಿ, ಪ್ರಸ್ತುತ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದ್ದು ಕಾಲೇಜು ಅಭಿವೃದ್ಧಿ ಹೊಂದಲು ಹಳೆ ವಿದ್ಯಾರ್ಥಿಗಳಾದ ಸಹಕಾರ ಬಯಸಿದರು.

ನಿವೃತ್ತ ಪ್ರಾಂಶುಪಾಲರಾದ ಶಾಜಿ ಅವರು ಮಾತನಾಡಿ, ಇದು ಸುತ್ತ ಮುತ್ತಲಿನ ಊರುಗಳ ಸಾವಿರಾರು ವಿದ್ಯಾರ್ಥಿಗಳು ಕಲಿತ ಸಂಸ್ಥೆಯಾಗಿದ್ದು ಹಲವಾರು ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು. ಉಪನ್ಯಾಸಕರಾದ ಸುಜಯ್ ಅವರು ಮಾತನಾಡಿ, ಕಾಲೇಜು ಮುಚ್ಚುವ ವದಂತಿಗಳಿಗೆ ಕಿವಿ ಕೊಡಬೇಡಿ ಎಂದರು. ಇತಿಹಾಸ ಉಪನ್ಯಾಸಕರಾದ ಕೃಷ್ಣ ಅವರು ಮಾತನಾಡಿ, ಸಮಾನ ಮನಸ್ಕರಿಂದ ಮಾತ್ರ ಇಂತಹ ಕಾರ್ಯಕ್ರಮ ಸಾಧ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ವೇಳೆ ಹಳೆಯ ವಿದ್ಯಾರ್ಥಿಗಳ ಒಕ್ಕೂಟದಿಂದ ಉಪನ್ಯಾಸಕ ವೃಂದವನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ರಾಮರಾಜ್, ಪರ್ಲಕೋಟಿ ಸಚ್ಚಿದಾನಂದ, ದೈಹಿಕ ಶಿಕ್ಷಣ ಶಿಕ್ಷಕರಾದ ಶಿವಪ್ರಸಾದ್ ಸೇರಿ ಇನ್ನಿತರರ ಉಪಸ್ಥಿತರಿದ್ದರು