ಮಡಿಕೇರಿ, ಜ. ೨೧: ವಿಶ್ವಕವಿ ಜನಸಾಮಾನ್ಯರ ಕವಿ, ವೇಮನ ಅವರ ಸಂದೇಶಗಳನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡುವಂತಾಗಬೇಕು ಎಂದು ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿಂದಿ ಭಾಷಾ ಶಿಕ್ಷಕಿ ಎಂ.ಪಿ ರಶ್ಮಿ ಅವರು ವರ್ಣಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ನಡೆದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಆಂಧ್ರದ ತೆಲುಗು ಸಾಹಿತ್ಯ ಲೋಕದಲ್ಲಿ ಧ್ರುವತಾರೆಯಂತೆ ಮೆರೆದವರು ಮಹಾಯೋಗಿ ವೇಮನ ಎಂದು ತಿಳಿಸಿದರು. ಧ್ವಜವೆತ್ತಿ ಸಾರು ದೇವನೊಬ್ಬನೆಂದು, ನಿಜವಿಹುದು ಒಳಗೆ

ಮನುಜ ಕುಲದ ಉದ್ಧಾರ, ಜಾತಿ, ಮತ, ಪಂಥ, ಜನಾಂಗ ಪ್ರದೇಶ, ವ್ಯಕ್ತಿ ಪ್ರಚಾರದ ಹಂಗನ್ನು ತೊರೆದು ಮನುಜ ಕುಲದ ಉದ್ದಾರಕ್ಕಾಗಿ ವೇಮನ ಅವರು ಜೀವನ ಸವೆಸಿದ್ದಾರೆ ಎಂದು ನುಡಿದರು.

ಭಾರತೀಯ ದಾರ್ಶನಿಕ ಕವಿಗಳಲ್ಲಿ ಕನ್ನಡದಲ್ಲಿ ಸರ್ವಜ್ಞ, ತಮಿಳುನಲ್ಲಿ ತಿರುವಳ್ಳುವರ್, ಅಂತೆಯೇ ತೆಲುಗಿನಲ್ಲಿ ವಚನಕಾರರಾಗಿದ್ದಾರೆ. ವೇಮನ ಕೃತಿಗಳು ಇತಿಹಾಸದಲ್ಲಿ ದಾಖಲಾಗಿದ್ದು, ಸುಮಾರು ೫ ಸಾವಿರಕ್ಕೂ ಹೆಚ್ಚು ವಚನಗಳನ್ನು ಬರೆದಿದ್ದಾರೆ ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಮೋಹನ್ ಕುಮಾರ್, ಬ್ಲಾಸಂ ಶಾಲೆಯ ಶಿಕ್ಷಕಿ ಪ್ರಿಯಾಂಕ, ಮಣಜೂರು ಮಂಜುನಾಥ್ ಇತರರು ಇದ್ದರು.