ಕೂಡಿಗೆ, ಜ. ೨೧: ಕೂಡಿಗೆ-ಹೆಬ್ಬಾಲೆ ರಸ್ತೆಯ ಅಪಘಾತ ವಲಯದ ಜಾಗಗಳಲ್ಲಿ ಮರುಡಾಂಬರೀಕರಣ ಹಾಗೂ ರಸ್ತೆ ಅಗಲೀಕರಣ ಕಾಮಗಾರಿ ರೂ.೩ ಕೋಟಿ ೮೦ ಲಕ್ಷ ವೆಚ್ಚದಲ್ಲಿ ಆರಂಭಗೊAಡಿದೆ. ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಕಳೆದ ತಿಂಗಳು ಈ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದರು. ಅದರನ್ವಯ ಲೋಕೋಪಯೋಗಿ ಇಲಾಖೆಯ ನಿಯಮಾನುಸಾರ ಕಾಮಗಾರಿಯ ಕ್ರಿಯಾ ಯೋಜನೆ ನಡೆದು ಈ ಮಾರ್ಗದ ಅಪಘಾತ ವಲಯಗಳ ಕಾಮಗಾರಿ ಹಾಗೂ ಅಗಲೀಕರಣ ನಡೆಯುತ್ತಿದೆ. ಲೋಕೋಪಯೋಗಿ ಇಲಾಖೆಯ ಸೋಮವಾರಪೇಟೆ ತಾಲೂಕು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕುಮಾರ್, ಕುಶಾಲನಗರ ತಾಲೂಕು ಇಂಜಿನಿಯರ್ ಅರ್ಬಾಜ್ ಸೇರಿದಂತೆ ಗುತ್ತಿಗೆದಾರ ಅಭಿಜಿತ್ ಹಾಜರಿದ್ದು ಕಾಮಗಾರಿಯ ಸ್ಥಳ ಪರಿಶೀಲನೆ ನಡೆಸಿದರು.