ಪೊನ್ನಂಪೇಟೆ, ಜ. ೨೧: ಇತ್ತೀಚೆಗೆ ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಮಧ್ಯಪ್ರದೇಶ ರಾಜ್ಯದ ಗೂನಾದಲ್ಲಿ ನಡೆದ ೧೪ ವರ್ಷ ಒಳಗಿನವರ ರಾಷ್ಟçಮಟ್ಟದ ಬಾಕ್ಸಿಂಗ್ ಚಾಂಪಿಯನ್ ಶಿಪ್ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಕಂಚಿನ ಪದಕ ಗೆದ್ದ ಗೋಣಿಕೊಪ್ಪದ ಮಿನ್ನಂಡ ಲಿಖಿತ್ ಚಿಣ್ಣಪ್ಪ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅವಳಿ ಸಹೋದರ ಲೇಖಕ್ ಚಂಗಪ್ಪ ಅವರನ್ನು ಕೊಡಗು ಬಾಕ್ಸಿಂಗ್ ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭ ಕೊಡಗು ಬಾಕ್ಸಿಂಗ್ ಅಕಾಡೆಮಿಯ ಮುಖ್ಯಸ್ಥರಾದ ಕರ್ನಲ್ ಚೆಪ್ಪುಡಿರ ಮುತ್ತಣ್ಣ, ಬ್ರಿಗೇಡಿಯರ್ ಮಾಳೇಟಿರ ದೇವಯ್ಯ, ಕರ್ನಲ್ ಶಶಾಂಕ್ ರಂಜನ್, ಕರ್ನಲ್ ಬೇರ್ಥಮ್ ಡಿಸೋಜ, ಕರ್ನಲ್ ಮಹೇಶ್ ಮಹಾಜನ್, ತರಬೇತುದಾರ ದೇಯಂಡ ಮೇದಪ್ಪ, ಶರತ್ ನಾಯ್ಡು ಹಾಗೂ ತಂದೆ ಮಿನ್ನಂಡ ಜೋಯಪ್ಪ ಇದ್ದರು.