ಮಡಿಕೇರಿ, ಜ. ೨೧: ಕೊಡಗಿನಲ್ಲಿ ಯಾವುದೇ ಡಾಂಬರು ಕಾರ್ಖಾನೆ ಹಾಗೂ ಸಿಮೆಂಟ್ ಮಿಶ್ರಣ ಘಟಕ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಪರಿಸರ ಮತ್ತು ಆರೋಗ್ಯ ಫೌಂಡೇಶನ್ ಆಗ್ರಹಿಸಿದೆ.

ನಗರದ ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಫೌಂಡೇಶನ್ ಅಧ್ಯಕ್ಷ ಸಿ.ಪಿ. ಮುತ್ತಣ್ಣ, ದಕ್ಷಿಣ ಕೊಡಗಿನ ಈಚೂರು ಗ್ರಾಮದ ಮಾಲಿನ್ಯಕಾರಿ ಡಾಂಬರು ಮತ್ತು ಕಾಂಕ್ರೀಟ್ ಮಿಶ್ರಣ ಕಾರ್ಖಾನೆಗೆ ಸಂಬAಧಿಸಿದAತೆ ಸಾರ್ವಜನಿಕ ಪ್ರತಿಭಟನೆಯ ಬಳಿಕ ಇದೀಗ ಮೇ ೩೧ರ ಒಳಗೆ ಕಾರ್ಖಾನೆಗಳನ್ನು ಮುಚ್ಚಲು ಒಪ್ಪಿಗೆ ವ್ಯಕ್ತವಾಗಿದೆಯಾದರೂ ಅಲ್ಲಿಯವರೆಗೆ ಜನತೆ ಅತ್ಯಂತ ಜಾಗರೂಕರಾಗಿರುವಂತೆ ಕರೆ ನೀಡಿದರು.

ಗರ್ಭಿಣಿಯರು ಹಾಗೂ ಮಗುವಿಗೆ ಸ್ತನ್ಯಪಾನ ಮಾಡಿಸುವ ತಾಯಂದಿರು ಈಚೂರಿನಿಂದ ಬೇರೆಡೆಗೆ ತೆರಳಿ ಕಾರ್ಖಾನೆ ಮುಚ್ಚಿದ ಬಳಿಕ ಊರಿಗೆ ಹಿಂದಿರುಗುವAತೆ ಅವರು ಹೇಳಿಕೆ ನೀಡಿದ್ದು, ಜನ ಎಚ್ಚರ ವಹಿಸಬೇಕು ಎಂದಿದ್ದಾರೆ.

ಮುಂದಿನ ದಿನಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಯಾವುದೇ ಡಾಂಬರು ಕಾರ್ಖಾನೆ ಅಥವಾ ಸಿಮೆಂಟ್ ಮಿಶ್ರಣ ಘಟಕವನ್ನು ನಿರ್ಮಿಸಲು ಅವಕಾಶ ನೀಡಬಾರದು, ಈ ವಿಷಯದಲ್ಲಿ ಶಾಸಕರುಗಳು ಗಮನಹರಿಸಬೇಕು ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಫೌಂಡೇಶನ್ ನಿರ್ದೇಶಕರುಗಳಾದ ರಾಯ್ ಬೋಪಣ್ಣ, ಶಾಮ್ ಬೋಪಯ್ಯ ಉಪಸ್ಥಿತರಿದ್ದರು.