ನಾಪೋಕ್ಲು, ಜ. ೨೧: ಪ್ರತ್ಯೇಕ ಗಾಂಜಾ ಸೇವನೆ ಮಾಡಿದ ಆರೋಪದಡಿ ಒಟ್ಟು ಮೂವರನ್ನು ನಾಪೋಕ್ಲು ಪೊಲೀಸರು ಬಂಧಿಸಿ ಕ್ರಮಕೈಗೊಂಡಿದ್ದಾರೆ. ಸಮೀಪದ ಬೇತು ಗ್ರಾಮದ ಕೂಡುರಸ್ತೆಯಲ್ಲಿ ಮತ್ತು ಎಮ್ಮೆಮಾಡು, ಕೂರುಳಿ ಸಂಪರ್ಕಿಸುವ ರಸ್ತೆಯಲ್ಲಿರುವ ಪ್ರಯಾಣಿಕರ ಬಸ್ ತಂಗು ದಾಣದ ಸಮೀಪ ಗಾಂಜಾ ಸೇವನೆ ಮಾಡು ತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಅಸ್ಸಾಂ ರಾಜ್ಯದ ಧಾರಾಂಗ್ ಜಿಲ್ಲೆಯವರಾದ ನೂರ್ ಮೊಹಮ್ಮದ್ (೨೫) ಸಾಧಿಕ್ ಆಲಿ (೩೫) ಸೈದುಲ್ ರಹಮಾನ್(೨೭) ಅವರುಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಸಂದರ್ಭ ಗಾಂಜಾ ಸೇವನೆ ದೃಢಪಟ್ಟಿದ್ದು, ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.