ಮಡಿಕೇರಿ, ಜ. ೨೧: ಸುದ್ದಿ ಬಿಡುಗಡೆ ಸಮೂಹ ಸಂಸ್ಥೆಗಳು ಮತ್ತು ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ-ಸAಪಾಜೆ, ಇವರ ಸಹಯೋಗದೊಂದಿಗೆ ಚೆಂಬು ಶ್ರೀ ಭಗವಾನ್ ಸಂಘದಿAದ ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್.ಸಿ ಬಳಿಕ ತಮ್ಮ ಮುಂದಿನ ಶಿಕ್ಷಣದ ಹಾದಿಯ ಬಗ್ಗೆ ‘Whಚಿಣ ಟಿexಣ? ಂಜಿಣeಡಿ SSಐಅ’ ಎನ್ನುವ ಒಂದು ದಿನದ ಮಾರ್ಗದರ್ಶಿ ಕಾರ್ಯಾಗಾರವನ್ನು ಸಂಪಾಜೆ ಪಯಸ್ವಿನಿ ಸೊಸೈಟಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಾಗಾರವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದ ಪ್ರಮುಖರಾದ ಕೆ.ಆರ್ ಗಂಗಾಧರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ವಿದ್ಯಾರ್ಥಿಗಳಲ್ಲಿ ತಾವು ಸಾಗಬೇಕಿರುವ ಹಾದಿಯ ಬಗ್ಗೆ ಸ್ಪಷ್ಟತೆ ಇದ್ದು, ಗುರಿ ಸಾಧಿಸಲು ಕಠಿಣ ಪರಿಶ್ರಮ ವಹಿಸಬೇಕೆಂದು ಕರೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಮುಖರಾದ ಹರೀಶ್ ಊರುಬೈಲು ಅವರು ಕಳೆದ ಹತ್ತು ವರ್ಷಗಳಿಂದ ಸಂಘವು ಯಾವುದೇ ದೇಣಿಗೆ ಸಂಗ್ರಹಿಸದೆ, ತನ್ನ ಸ್ವಂತ ವೆಚ್ಚದಲ್ಲೇ ಇಂತಹ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿದ್ದನ್ನು ಉಲ್ಲೇಖಿಸಿ, ಇಂದು ಶಾಲೆಗಳಲ್ಲಿ ಅಧ್ಯಾಪಕರು ಕೇವಲ ಸಿಲೆಬಸ್‌ನ ಸುತ್ತಲೂ ಗಿರಕಿ ಹೊಡೆಯುವುದನ್ನು ಬಿಟ್ಟು, ವಿದ್ಯಾರ್ಥಿಗಳು ಉತ್ತಮ ಬದುಕು ಕಟ್ಟಿಕೊಳ್ಳಲು ಇರುವ ಅವಕಾಶಗಳನ್ನು ತಿಳಿಸಿಕೊಡಬೇಕಿದೆ ಎಂದರು.

ವ್ಯಕ್ತಿತ್ವ ವಿಕಸನ ತರಬೇತುದಾರ ಸತೀಶ್ ಭಟ್ ಅವರು ಮಾತನಾಡಿ, ಪ್ರತಿಫಲಾಪೇಕ್ಷೆಯಿಲ್ಲದೆ, ಮಕ್ಕಳ ಭವಿಷ್ಯಕ್ಕಾಗಿ ಇಂತಹ ಸಮಾಜಮುಖಿ ಕಾರ್ಯಕ್ರಮವನ್ನು ನಡೆಸಿದ ಶ್ರೀ ಭಗವಾನ್ ಸಂಘದ ಪ್ರಯತ್ನವನ್ನು ಶ್ಲಾಘಿಸಿದರು.

ವೇದಿಕೆಯಲ್ಲಿ ಭಗವಾನ್ ಸಂಘದ ಅದ್ಯಕ್ಷ ಪ್ರಶಾಂತ್ ಊರುಬೈಲ್, ಸುದ್ದಿ ಸಂಸ್ಥೆಯ ಕೃಷ್ಣ ಬೆಟ್ಟ, ಕಾರ್ಯಕ್ರಮದ ರೂವಾರಿ ಪಯಸ್ವಿನಿ ಪ್ರಾ.ಕೃ.ಪ.ಸ.ಸಂಘದ ಅದ್ಯಕ್ಷ ಅನಂತ್ ಊರುಬೈಲು ಉಪಸ್ಥಿತರಿದ್ದರು.

ಬಳಿಕ ತರಬೇತುದಾರ ಸತೀಶ್ ಭಟ್ ಅವರಿಂದ ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್.ಸಿ ಬಳಿಕ ತಮ್ಮ ಆಸಕ್ತಿಗನುಗುಣವಾಗಿ ತಾವು ಆಯ್ಕೆ ಮಾಡಬೇಕಿರುವ ಕೋರ್ಸ್ಗಳ ಬಗ್ಗೆ ಮತ್ತು ತಮ್ಮ ಮುಂದಿರುವ ವಿಪುಲ ಅವಕಾಶಗಳ ಬಗ್ಗೆ ಸೂಕ್ತ ಮಾಹಿತಿ ನೀಡಿ, ವಿದ್ಯಾರ್ಥಿಗಳ ಮತ್ತು ಪೋಷಕರೊಂದಿಗೆ ಸಂವಾದ ನಡೆಸಿದರು.

ಸಂಘದ ಉಪಾಧ್ಯಕ್ಷ ಶರತ್ ಕಾಸ್ಪಾಡಿ ಅವರು ಸನ್ಮಾನ ಪತ್ರವನ್ನು ಓದಿದರು, ಯತೀಶ್ ಹನಿಯಡ್ಕ ವಂದನಾರ್ಪಣೆ ಮಾಡಿದರು.