ಮಡಿಕೇರಿ, ಜ. ೧೮: ಸುದ್ದಿ-ಸಂದೇಶ ರವಾನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಪ್ರತಿದಿನವೂ ಕಾರ್ಯನಿರತವಾಗಿರುವ ಪತ್ರಕರ್ತರ ಅರೋಗ್ಯ ಹಾಗೂ ಮನರಂಜನೆಗೆ ಕ್ರೀಡೆ ತುಂಬಾ ಮುಖ್ಯವಾಗಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮತ್ತು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್ ಪೊನ್ನಣ್ಣ ಪತ್ರಕರ್ತರ ಸಂಕ್ರಾAತಿ ಸಂಭ್ರಮ ಕ್ರಿಕೆಟ್ ಪಂದ್ಯಾವಳಿಯನ್ನು ಮಡಿಕೇರಿಯ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಡುವ ಮೂಲಕ ಉದ್ಘಾಟಿಸಿ ಹೇಳಿದರು.

ಪತ್ರಕರ್ತರು ಸಮಾಜದ ಕೇಂದ್ರಬಿAದು. ಪತ್ರಕರ್ತರಿಂದಲೇ ದೇಶ-ವಿದೇಶದಲ್ಲಾಗುವ ವಿವಿಧ ಬದಲಾವಣೆಗಳು ವಿಷಯ-ವಿನಿಮಯ ತಿಳಿಯುತ್ತದೆ, ಪತ್ರಕರ್ತರು ಪತ್ರಕರ್ತರಿಗಿರುವ ಮೂಲಭೂತ ಹಕ್ಕುಗಳನ್ನು ಸರಿಯಾದ ಮಾರ್ಗದಲ್ಲಿ ಬಳಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. ಸುಸ್ಥಿತಿಯ ಸಮಾಜ ನಿರ್ಮಾಣಕ್ಕೆ ಪತ್ರಕರ್ತರ ಕೊಡುಗೆ ಅಪಾರವಾದುದು. ಅಂತೆಯೇ ಆರ್ಥಿಕ, ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ಕೂಡ ಪತ್ರಕರ್ತರದ್ದು ಮುಖ್ಯ ಪಾತ್ರ ಎಂದು ಪತ್ರಕರ್ತರನ್ನು ಉದ್ದೇಶಿಸಿ ಪೊನ್ನಣ್ಣ ನುಡಿದರು.

ಪತ್ರಕರ್ತರು ಸಮಾಜವನ್ನು ತಿದ್ದುವ ಮಹತ್ವದ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದು ಪತ್ರಕರ್ತರ ಕ್ಷೇಮದ ಬಗ್ಗೆ ಸಮಾಜದ ಜನತೆ ಕಾಳಜಿ ವಹಿಸಬೇಕು ಎಂದು ಪೊನ್ನಣ್ಣ ಕರೆ ನೀಡಿದರು. ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಮೆಹರೋಜ್ ಖಾನ್ ಮಾತನಾಡಿ, ಕೊಡಗು ಪತ್ರಕರ್ತರು ಉತ್ತಮವಾಗಿ ಕೆಲಸ ಮಾಡುತ್ತಿದ್ದು ಕೊಡಗಿನಲ್ಲಿ ೪ಐದನೇ ಪುಟಕ್ಕೆ

ಹಲವಾರು ಧರ್ಮಗಳು ಇದ್ದು ಇವುಗಳ ನಡುವೆ ಮನೆ ಮನೆಗಳಲ್ಲಿ ಕ್ರೀಡೆಗೆ ಪ್ರೋತ್ಸಾಹ ನೀಡಿ ಕ್ರೀಡೆ ಕೂಡ ಒಂದು ಧರ್ಮವಾಗಿ ಸಹಬಾಳ್ವೆಯ ಸಂಕೇತವಾಗಿರುವದು ನಮ್ಮ ಜಿಲ್ಲೆಯ ಸೊಬಗು ಎಂದು ಬಣ್ಣಿಸಿದರು.

ವಿಧಾನ ಪರಿಷತ್ ಸದಸ್ಯರ ಎಂ. ಪಿ. ಸುಜಾಕುಶಾಲಪ್ಪ ಮಾತನಾಡಿ ಜೀವದ ಹಂಗು ತೊರೆದು ಸಮಾಜದ ಒಳಿತಿಗಾಗಿ ಶ್ರಮಿಸುವವರು ಪತ್ರಕರ್ತರಾಗಿದ್ದು ಅವರ ಸಂಕಷ್ಟಕ್ಕೆ ಸ್ಪಂದಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಎಂದು ತಿಳಿಸಿದರು. ಕೆಲವು ಪತ್ರಕರ್ತರು “ಬ್ಲಾಕ್ ಮೇಲ್'' ಮಾಡುವ ಮೂಲಕ ಪತ್ರಿಕಾರಂಗಕ್ಕೆ ಅಪಮಾನ ಮಾಡುತ್ತಿರುವುದು ವಿಷಾದನೀಯ ಎಂದು ಹೇಳಿದರು.

ಹೈಕೋರ್ಟ್ ಹಿರಿಯ ವಕೀಲ ಹಾಗೂ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ಚಂದ್ರಮೌಳಿ ಮಾತನಾಡಿ, ಪತ್ರಕರ್ತರು ಸಮಾಜವನ್ನು ತಿದ್ದುವ ಕೆಲಸ ಮಾಡುತ್ತಿದ್ದು ತಿದ್ದುವ ಕೆಲಸ ಅತಿರೇಕ ಆಗಬಾರದು ಎಂದು ಸಲಹೆ ನೀಡಿದರು. ಉದ್ಯಮಿ ನಾಪಂಡ ಮುತ್ತಪ್ಪ ಮಾತನಾಡಿ, ಪತ್ರಕರ್ತರಿಗಾಗಿ ಸರ್ಕಾರ ವಿಶೇಷ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದರು. ಉದ್ಯಮಿಗಳಾದ ನಡಿಕೇರಿ ಪ್ರಸನ್ನ, ಕರ್ನಾಟಕ ಕ್ರಿಕೆಟ್ ಅಕಾಡೆಮಿ ಸಂಚಾಲಕ ಚೇನಂಡ ಪೃಥ್ವಿ ದೇವಯ್ಯ, ಹಾಜರಿದ್ದರು.

ಕೊಡಗು ಪತ್ರ ಕರ್ತರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ., ಪತ್ರಕರ್ತರ ಸಂಘದ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ಜಿ. ವಿ ರವಿಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಾರಿಕೆ ದಿನೇಶ್, ಡಿವೈಎಸ್‌ಪಿ ಸೂರಜ್, ಉಪವಿಭಾಗಾಧಿಕಾರಿ ನಿತಿನ್ ಚಕ್ಕಿ, ನಗರಸಭೆ ಅಧ್ಯಕ್ಷೆ ಕಲಾವತಿ, ಮೂಡಾ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಪ್ರಮುಖರಾದ ಮಹೇಶ್ ಜೈನಿ, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ಕಾಳಪ್ಪ, ಪ್ರಮುಖರಾದ ಯಡಿಕೇರಿ ಪ್ರಸನ್ನ,ಅಪ್ರು ರವೀಂದ್ರ, ತೆನ್ನಿರ ಮೈನಾ, ಸುರಯ್ಯ ಅಬ್ರಾರ್, ಇಸ್ಮಾಯಿಲ್, ಸೂರಜ್ ಹೊಸೂರು, ಮನು ಮುತ್ತಪ್ಪ, ಚುಮ್ಮಿ ದೇವಯ್ಯ, ಜಿಲ್ಲಾ ಯುವಜನ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕಿ ವಿಸ್ಮಯಿ ಚಕ್ರವರ್ತಿ, ಸೋಮವಾರಪೇಟೆ ತಹಶೀಲ್ದಾರ್ ಕೃಷ್ಣಮೂರ್ತಿ, ಮೈಸೂರಿನ ಉದ್ಯಮಿ ಮಹಮ್ಮದ್ ನಾಸಿರ್, ಕೊತ್ತೊಳಿರ ಕವನ್, ಪತ್ರಕರ್ತರ ಸಂಘದ ಕ್ಷೇಮಾಭಿವೃದ್ಧಿ ಸಮಿತಿ ಕಾರ್ಯದರ್ಶಿ ಅರುಣ್ ಕೂರ್ಗ್, ಪತ್ರಕರ್ತರ ಸಂಘದ ಪದಾಧಿಕಾರಿಗಳು, ಸದಸ್ಯರು , ಸಾರ್ವಜನಿಕರು ಉಪಸ್ಥಿತರಿದ್ದರು. ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ ಸ್ವಾಗತಿಸಿ, ವಿನೋದ್ ಮೂಡಗದ್ದೆ ಕಾರ್ಯಕ್ರಮ ನಿರೂಪಿಸಿದರು.