ಸುಂಟಿಕೊಪ್ಪ, ಜ. ೧೪: ಮಕ್ಕಳು ಇಷ್ಟಪಟ್ಟು ವಿದ್ಯೆಯನ್ನು ಕಲಿತು ಉತ್ತಮ ಪ್ರಜೆಗಳಾಗಿ ರೂಪುಗೊಂಡು ಶಾಲೆಗೆ ಮತ್ತು ಶಿಕ್ಷಕ ವೃಂದಕ್ಕೆ ಗೌರವ ಮತ್ತು ಹೆಮ್ಮತರುವಂತಹ ಕೆಲಸ ಮಾಡಬೇಕೆಂದು ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಕರೆ ನೀಡಿದ್ದಾರೆ.

ಸುಂಟಿಕೊಪ್ಪ ಸಂತ ಅಂತೋಣಿ ಶಾಲೆಯ ವಿದ್ಯಾರ್ಥಿಗಳಿಗೆ ದಾನಿಗಳ ನೆರವಿನಿಂದ ನೀಡಲಾದ ಸ್ವೆಟರ್ ವಿತರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಈ ಶೈಕ್ಷಣಿಕ ವರ್ಷದಲ್ಲಿ ೩೦ ಸಾವಿರ ಸ್ವೆಟರ್‌ಗಳ ವಿತರಣೆಯನ್ನು ಹಮ್ಮಿಕೊಂಡಿದ್ದು, ಮೊದಲ ಹಂತದಲ್ಲಿ ಸರಕಾರಿ ಶಾಲೆಗಳನ್ನು ಆಯ್ದುಕೊಂಡಿದ್ದೆವು ನಂತರ ಅನುದಾನಿತ ಮತ್ತು ಖಾಸಗಿ ಶಾಲೆಗಳಿಗೂ ವಿತರಣೆ ಮಾಡುವ ಯೋಜನೆಯನ್ನು ಹಾಕಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಬ್ಯಾಗ್‌ಗಳನ್ನು ಕೂಡ ವಿತರಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು. ಸರಕಾರಿ ಶಾಲೆಗಳಲ್ಲಿ ಕಲಿತು ಬದುಕು ಕಟ್ಟಿಕೊಂಡವರು ನಾವು ಕಲಿತ ಶಾಲೆಯನ್ನು ಮರೆಯಬಾರದೆಂದು ಹೇಳಿದ ಅವರು ಸಾಧ್ಯವಾದಷ್ಟು ಸಹಾಯ ಮಾಡಬೇಕೆಂದು ಕರೆ ನೀಡಿದರು. ಶನಿವಾರ ದಂದು ಅಪ್ಪಚ್ಚು ರಂಜನ್ ಅವರು ಕೊಡಗರಹಳ್ಳಿಯ ಶಾಂತಿನಿಕೇತನ ಶಾಲೆ ೭ನೇ ಹೊಸಕೋಟೆಯ ದೀಪ್ತಿ ಶಾಲೆಗಳಿಗೆ ಸ್ವೆಟರ್ ವಿತರಣೆ ಮಾಡಿದರು.

ಈ ಸಂದರ್ಭ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪಿ.ಆರ್. ಸುನಿಲ್‌ಕುಮಾರ್, ಕೊಡಗರಹಳ್ಳಿ ಗ್ರಾ.ಪಂ.ಅಧ್ಯಕ್ಷೆ ನಿರುತ ಬೆಳ್ಳಿಯಪ್ಪ, ೭ನೇ ಹೊಸಕೋಟೆ ಗ್ರಾ.ಪಂ. ಇ.ಬಿ. ಜೋಸೆಫ್, ಉಪಾಧ್ಯಕ್ಷರು ಮತ್ತು ಸದಸ್ಯರುಗಳು ಪಾಲ್ಗೊಂಡಿದ್ದರು. ಮಂಡಲ ಅಧ್ಯಕ್ಷ ಗೌತಮ್, ಯುವಮೋರ್ಚಾ ಅಧ್ಯಕ್ಷ ಚಂದ್ರಶೇಖರ್ ಹೆರೂರು, ಸುಂಟಿಕೊಪ್ಪ ನಗರಾಧ್ಯಕ್ಷ ಧನು ಕಾವೇರಪ್ಪ, ದಾಸಂಡ ರಮೇಶ್, ಸಹದೇವನ್, ಮುರುಗನ್ ಹೊಸಕೋಟೆ, ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಜೆಸಿಂತ ಜೋವಿಟಾ ವಾಸ್, ಕೊಡರಹಳ್ಳಿ ಶಾಂತಿನೀಕೇತನ ಶಾಲೆಯ ಮುಖ್ಯೋಪಾಧ್ಯಾಯಿನಿ ಕವಿತ, ದೀಪ್ತಿ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಟೆಸ್ಸಿ ಮ್ಯಾನುವೆಲ್ ಹಾಗೂ ಸಹ ಶಿಕ್ಷಕರು ಇದ್ದರು.