ಮಡಿಕೇರಿ, ಜ. ೧೪: ಮಕರ ಸಂಕ್ರಾAತಿ ಉತ್ಸವವನ್ನು ನಾಡಿನೆಲ್ಲೆಡೆ ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಆಚರಿಸಿದರು. ಮನೆ, ಅಂಗಡಿ ಮುಂಗಟ್ಟು ಹಾಗೂ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸುವದರೊಂದಿಗೆ ಎಳ್ಳು-ಬೆಲ್ಲ ಸವಿದರು. ವಿಶೇಷವಾಗಿ ಅಯ್ಯಪ್ಪ ದೇವಾಲಯಗಳಲ್ಲಿ ಹಬ್ಬದ ಪ್ರಯುಕ್ತ ವಿಶೇಷ ಪೂಜಾದಿ ಕಾರ್ಯಗಳು ನಡೆದು ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಮಡಿಕೇರಿಯ ಶ್ರೀ ಮುತ್ತಪ್ಪನ್ ಕ್ಷೇತ್ರದ ಆವರಣದಲ್ಲಿರುವ ಅಯ್ಯಪ್ಪ ದೇವಸ್ಥಾನದಲ್ಲಿ ೩೬ನೇ ವರ್ಷದ ಮಕರ ಸಂಕ್ರಾAತಿ ಮಹೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ನಿನ್ನೆ ಬೆಳಿಗ್ಗೆಯಿಂದ ಗಣಪತಿ ಹೋಮ, ಪಂಚಾಮೃತ ಅಭಿಷೇಕ, ತುಪ್ಪಾಭಿಷೇಕ ಸೇವೆಗಳು ನೆರವೇರಿದವು. ಇಂದು ಬೆಳಿಗ್ಗೆಯಿಂದ ನಿರ್ಮಾಲ್ಯ ವಿಸರ್ಜನೆ, ಉಷಾ ಪೂಜೆ, ಮುತ್ತಪ್ಪ ಹಾಗೂ ಸುಬ್ರಹ್ಮಣ್ಯ ದೇವರ ಪೂಜೆ, ಪಂಚಾಮೃತಭಿಷೇಕ, ತುಪ್ಪಾಭಿಷೇಕ, ಕ್ಷೀರಾಭಿಷೇಕ, ಭಸ್ಮಾಭಿಷೇಕ, ಎಳನೀರು ಅಭಿಷೇಕ, ಪುಷ್ಪಾರ್ಚನೆ, ತುಲಾಭಾರ ಸೇವೆ, ಶ್ರೀ ಕುಟ್ಟಿಚಾತನ್ ದೇವರ ವೆಳ್ಳಾಟಂ, ಶ್ರೀ ಮುತ್ತಪ್ಪ ದೇವರ ವೆಳ್ಳಾಟಂ, ಶ್ರೀ ಪೋದಿದೇವರ ವೆಳ್ಳಾಟಂ, ಶ್ರೀ ಅಯ್ಯಪ್ಪ ದೇವರ ಅಲಂಕಾರ ಪೂಜೆ, ಅಯ್ಯಪ್ಪ ದೇವರ ಉತ್ಸವ ಮೂರ್ತಿಯ ಕ್ಷೇತ್ರ ಪ್ರದಕ್ಷಿಣೆ ಬಳಿಕ ಮಧ್ಯಾಹ್ನ ಶ್ರೀ ಗುಳಿಗದೇವರ ವೆಳ್ಳಾಟಂ, ಮಹಾಮಂಗಳಾರತಿಯೊAದಿಗೆ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು. ಸಂಜೆ ಭಜನಾ ಕಾರ್ಯಕ್ರಮ, ಅಲಂಕಾರ ಪೂಜೆ, ಪಡಿ ಪೂಜೆ, ದೀಪ ಆರಾಧನೆ ಮತ್ತು ಪ್ರಸಾದ ವಿತರಣೆ ನಡೆಯಿತು.

ಶನೈಶ್ಚರ ದೇವಾಲಯ

ಕೂಡಿಗೆ: ಹೆಗ್ಗಡಹಳ್ಳಿ ಗ್ರಾಮದಲ್ಲಿರುವ ಶ್ರೀ ಶನೈಶ್ಚರ ದೇವಾಲಯದಲ್ಲಿ ಮಕರ ಸಂಕ್ರಾAತಿ ಅಂಗವಾಗಿ ಶ್ರೀ ಅಯ್ಯಪ್ಪ ಸ್ವಾಮಿಯ ಪೂಜೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ಬೆಳಿಗ್ಗೆ ೮ ಗಂಟೆಗೆ ಸ್ವಸ್ತಿ ಶ್ರೀ ಪುಣ್ಯಾಹವಾಚನ, ಗಣಯಾಗ, ಶಾಸ್ತಾರ ಹೋಮ, ಶಾಸ್ತಾರ ಪೂಜೆ, ಭಸ್ಮದ ಅಭಿಷೇಕ, ಪಂಚಾಮೃತ ಅಭಿಷೇಕ, ನವಕಪ್ರಧಾನ, ಪಡಿಪೂಜೆ, ಮಧ್ಯಾಹ್ನ ೧೨ ಗಂಟೆಗೆ ಮಹಾಮಂಗಳಾರತಿ ಬಳಿಕ ಅನ್ನಸಂರ್ತಪಣೆ ನಡೆಯಿತು. ಸಂಜೆ ಅಯ್ಯಪ್ಪ ಸ್ವಾಮಿ ಉತ್ಸವ ಮೂರ್ತಿಯ ಮೆರವಣಿಗೆಯೊಂದಿಗೆ ಹಾರಂಗಿ ನದಿಯಲ್ಲಿ ಜಳಕಾಭಿಷೇಕ ಮಾಡಿ ದೇವಸ್ಥಾನಕ್ಕೆ ಬಂದು ರಂಗಪೂಜೆ ನೆರವೇರಿಸಲಾಯಿತು.