ಮಡಿಕೇರಿ, ಜ. ೧೧: ಜಮ್ಮಾಬಾಣೆ ವಿಷಯದಲ್ಲಿ ಉದ್ಭವಿಸಿರುವ ಸಮಸ್ಯೆಗಳ ಪರಿಹಾರಕ್ಕೆ ೧೯೮೭ರಲ್ಲಿ ಚೆಕ್ಕೇರ ಪೂವಯ್ಯ ಅವರು ಉಚ್ಚ ನ್ಯಾಯಾಲಯದಲ್ಲಿ ಹೂಡಿದ್ದ ರಿಟ್ ಅರ್ಜಿ ಪ್ರಕರಣವೇ ಅಡಿಪಾಯವಾಗಿದೆ. ಈ ವಿಷಯದಲ್ಲಿ ಮಾಜಿ ಶಾಸಕರುಗಳು ಮಾಡುತ್ತಿರುವ ರಾಜಕೀಯ ಪ್ರೇರಿತ ಅಪಪ್ರಚಾರ ಸರಿಯಲ್ಲ ಎಂದು ವೀರಾಜಪೇಟೆ ಶಾಸಕ, ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಹೇಳಿದರು.

ನಗರದ ಸುದರ್ಶನ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರ ಮಂಡಿಸಿರುವ ಜಮ್ಮಾ ತಿದ್ದುಪಡಿ ವಿಧೇಯಕವನ್ನು ವಿಪಕ್ಷ ನಾಯಕ ಆರ್. ಅಶೋಕ್, ಉಪನಾಯಕ ಅರವಿಂದ್ ಬೆಲ್ಲದ್, ಶಾಸಕ ಆರಗ ಜ್ಞಾನೇಂದ್ರ ಸೇರಿದಂತೆ ರಾಜ್ಯ ಬಿಜೆಪಿ ನಾಯಕರು ಸ್ವಾಗತಿಸಿದ್ದಾರೆ. ‘ನಾನು ಕಂದಾಯ ಸಚಿವನಾಗಿದ್ದ ಸಂದರ್ಭವೂ ಈ ಕುರಿತು ಪ್ರಯತ್ನಿಸಿದ್ದೆ’ ಎಂದು ಆರ್. ಅಶೋಕ್ ಸದನದಲ್ಲಿ ಹೇಳಿ ತಿದ್ದುಪಡಿ ವಿಧೇಯಕವನ್ನು ಬೆಂಬಲಿಸಿದ್ದಾರೆ. ಆದರೆ, ಕೊಡಗಿನ ಮಾಜಿ ಶಾಸಕರು ಮಾತ್ರ ತದ್ವಿರುದ್ಧ ಹೇಳಿಕೆ ನೀಡುತ್ತ ವಿರೋಧ ಮಾಡುತ್ತಿದ್ದಾರೆ. ಈ ವಿಷಯ ಮುಂದಿಟ್ಟು ಚುನಾವಣಾ ಅಖಾಡ ತಯಾರಿ ಮಾಡುವಂತೆ ಕಾಣುತ್ತಿದೆ. ಜನರನ್ನು ದಾರಿ ತಪ್ಪಿಸುವುದನ್ನು ಮೊದಲು ನಿಲ್ಲಿಸಬೇಕು. ಅವರುಗಳ ಹೇಳಿಕೆಯನ್ನು ಒಪ್ಪುವುದು ಸಾಧ್ಯವಿಲ್ಲ. ೨೦೧೨ರ ಬಿಜೆಪಿ ಸರಕಾರದ ತಿದ್ದುಪಡಿಯಿಂದಲೇ ಪರಿಹಾರ ಎಂದು ಹೇಳಿರುವುದು ಸುಳ್ಳು. ಅಂದು ಮಾಡಿದ ತಿದ್ದುಪಡಿ ಸರಿ ಇದೆ. ಆದರೆ, ಅದರಿಂದ ಜಮ್ಮಾ ಸಮಸ್ಯೆ ಶಾಶ್ವತ ಪರಿಹಾರವಾಗಿರಲಿಲ್ಲ. ಪ್ರಸ್ತುತ ಮಂಡಿಸಿದ ವಿಧೇಯಕ ಸರಿ ಇಲ್ಲ. ಇದರಿಂದ ಪ್ರಯೋಜನವಿಲ್ಲ ಎಂಬ ಆರೋಪವೂ ಸುಳ್ಳು ಎಂದು ಮಾಜಿ ಶಾಸಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಚೆಕ್ಕೇರ ಪೂವಯ್ಯ ಪ್ರಕರಣ ಉಲ್ಲೇಖ

ಈ ಹಿಂದೆ ಸರಕಾರದ ವಿರುದ್ಧ ಚೆಕ್ಕೇರ ಪೂವಯ್ಯ ಪ್ರಕರಣ ನಡೆಯದಿದ್ದಲ್ಲಿ ಒಂದು ಇಂಚು ಜಮ್ಮಾ ಜಾಗವು ಹಿಡುವಳಿದಾರರಿಗೆ ಉಳಿಯುತ್ತಿರಲಿಲ್ಲ ಎಂದು ಎ.ಎಸ್. ಪೊನ್ನಣ್ಣ ಸ್ಪಷ್ಟವಾಗಿ ನುಡಿದರು.

ಬೋಪಯ್ಯ ಅವರು ಕೂಡ ವಕೀಲರಾಗಿದ್ದವರು. ಉಚ್ಚ ನ್ಯಾಯಾಲಯದ ಪೂರ್ಣ ಪೀಠ ನೀಡಿರುವ ತೀರ್ಪನ್ನು ಜನರ ಮುಂದಿಡುವಾಗ ಸ್ಪಷ್ಟವಾಗಿ ಇಡಬೇಕು. ‘ಹಿಟ್ ಆ್ಯಂಡ್ ರನ್’ ಮಾಡಬಾರದು. ಚೆಕ್ಕೇರ ಪೂವಯ್ಯ ಹಾಗೂ ರಾಜ್ಯ ಸರಕಾರದ ಪ್ರಕರಣದಿಂದ ಯಾವುದೇ ಲಾಭವಿಲ್ಲ ಎಂಬAತೆ ಕೆ.ಜಿ. ಬೋಪಯ್ಯ ಹಾಗೂ ಅಪ್ಪಚ್ಚು ರಂಜನ್ ಮಾತನಾಡಿದ್ದಾರೆ. ಇದು ಸರಿಯಲ್ಲ. ೧೯೮೬ರ ಅಂದಿನ ಸರಕಾರ ತನ್ನ ಮೊದಲ ಸುತ್ತೋಲೆಯಲ್ಲಿ ‘ಜಮ್ಮಾ ಸರಕಾರಿ ಜಾಗವಾಗಿದೆ. ಸರಕಾರಿ ಉದ್ದೇಶ ಹೊರತುಪಡಿಸಿ ೪ಏಳನೇ ಪುಟಕ್ಕೆ

ಯಾವುದೇ ಚಟುವಟಿಕೆ ನಡೆಸಬಾರದು.’ ನಂತರದ ೨ನೇ ಸುತ್ತೋಲೆಯಲ್ಲಿ ‘ಈ ಜಾಗವನ್ನು ಪರಭಾರೆಯಾಗಲಿ, ವಿಂಗಡಣೆಯಾಗಲಿ ಮಾಡಬಾರದು ಅಲ್ಲದೆ ನೋಂದಣಿಯಾಗಬಾರದು’ ಎಂದು ಪೂರ್ಣ ನಿರ್ಬಂಧ ವಿಧಿಸಿತ್ತು. ಇದರಿಂದ ಮಾಲೀಕತ್ವ ಹಕ್ಕು ಇಲ್ಲದ ಪರಿಸ್ಥಿತಿ ತಲೆದೋರಿತ್ತು. ಇದನ್ನು ಪ್ರಶ್ನಿಸಿ ಚೆಕ್ಕೇರ ಪೂವಯ್ಯ ಅವರು ನ್ಯಾಯಾಲಯದ ಮೊರೆ ಹೋಗಿ ೧೯೮೭ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದರು. ಇದನ್ನು ವಾದಿಸಿದ್ದು, ಎ.ಕೆ. ಸುಬ್ಬಯ್ಯ ಅವರು ಎಂಬ ಕಾರಣಕ್ಕೆ, ಇದರಿಂದ ಅವರ ಮಗನಿಗೆ ಲಾಭವಾಗಬಹುದು ಎಂಬ ಮನಸ್ಥಿತಿಯಿಂದ ಈ ರೀತಿ ಹೇಳಿಕೆ ನೀಡುತ್ತಿರಬಹುದು ಎಂದು ಪೊನ್ನಣ್ಣ ವ್ಯಂಗ್ಯ ಮಾಡಿದರು.

ಪ್ರಕರಣ ಮೊದಲು ಎನ್.ವೈ. ಹನುಮಂತಪ್ಪÀ ಅವರ ಪೀಠದ ಎದುರು ವಿಚಾರಣೆ ನಡೆಯಿತು. ಇದು ಕಗ್ಗಂಟಾಗಿರುವ ಹಿನ್ನೆಲೆ ಡಿವಿಷನಲ್ ಪೀಠಕ್ಕೆ ಹಸ್ತಾಂತರಿಸಿದರು. ಅನಂತರ ಸಮಸ್ಯೆ ತ್ವರಿತವಾಗಿ ಬಗೆಹರಿಯುವ ನಿಟ್ಟಿನಲ್ಲಿ ಹೆಚ್ಚುವರಿ ಪೀಠಕ್ಕೆ ನ್ಯಾಯಾಧೀಶರು ನೀಡಿದರು. ಅನಂತರ ಮಾಲೀಕತ್ವ ಹಕ್ಕಿಲ್ಲ ಎಂಬ ಸುತ್ತೋಲೆಯನ್ನು ರದ್ದು ಮಾಡಿದರು. ೧೮೯೯ ಕೂರ್ಗ್ ರೆವಿನ್ಯೂ ಕಾಯಿದೆ ಮುನ್ನ, ನಂತರ, ೧೯೬೪ರ ನಂತರ, ಸುತ್ತೋಲೆಯ ನಂತರದ ಬೆಳವಣಿಗೆಗಳನ್ನು ಸೂಕ್ಷö್ಮವಾಗಿ ಪರಿಶೀಲಿಸಿ ಆದೇಶವನ್ನು ನ್ಯಾಯಾಧೀಶರು ನೀಡಿದ್ದರು. ಅದರಲ್ಲಿ ಕಂದಾಯ ನೀಡದೆ ಜಮ್ಮಾ ಬಾಣೆ ಸ್ವಾಧೀನದಲ್ಲಿದ್ದರೆ ಅದನ್ನು ವ್ಯವಸಾಯಕ್ಕೆ ಮಾತ್ರ ಬಳಸಬೇಕು. ಕಂದಾಯ ಪಾವತಿಸಿದ್ದಲ್ಲಿ ಪೂರ್ಣ ಸ್ವಾಧೀನ ಹಕ್ಕು ಕರ್ನಾಟಕ ಭೂ ಕಂದಾಯ ಕಾಯಿದೆಯಡಿ ದೊರೆಯುತ್ತದೆ ಎಂದು ತೀರ್ಪು ನೀಡಿ ಸುತ್ತೋಲೆಯನ್ನು ರದ್ದುಪಡಿಸಿದರು. ಆದೇಶದ ಅನ್ವಯ ಕಂದಾಯ ನಿಗದಿ ಮಾಡವುದು ಸ್ಪಷ್ಟವಾಗಿದೆ. ಈ ಪ್ರಕರಣದಿಂದ ಏನು ಆಗಿಲ್ಲ ಎನ್ನುವುದು ಹಾಸ್ಯಾಸ್ಪದ. ನ್ಯಾಯವಾದಿಯೊಬ್ಬರು ಈ ತೀರ್ಪು ಅರ್ಥ ಮಾಡಿಕೊಳ್ಳದಿರುವುದು ನಂಬಲು ಅಸಾಧ್ಯ, ಮೊನ್ನೆ ತನಕ ಈ ಕುರಿತು ಒಳ್ಳೆಯ ಮಾತನಾಡಿದ್ದಾರೆ ಎಂದು ಕುಟುಕಿದರು.

ಇದರೊಂದಿಗೆ ೧೯೯೬ರ ಸರಕಾರದ ಸುತ್ತೋಲೆಯಲ್ಲಿ ಚೆಕ್ಕೇರ ಪೂವಯ್ಯ ಪ್ರಕರಣವನ್ನು ಉಲ್ಲೇಖಿಸಿ ಸಾಗುವಳಿ ಮಾಡಿ ಕಂದಾಯ ನಿಗದಿ ಆದ ಜಮ್ಮಾ ಬಾಣೆ ಜಾಗವನ್ನು ಪರಭಾರೆಯಡಿ ಪಡೆದ ವ್ಯಕ್ತಿ ಕರ್ನಾಟಕ ಭೂ ಕಂದಾಯ ಕಾಯಿದೆಯಡಿ ಅರ್ಜಿ ಸಲ್ಲಿಸಿ ಹಕ್ಕನ್ನು ಬದಲಾವಣೆ ರಿಜಿಸ್ಟಾರ್‌ನಲ್ಲಿ ದಾಖಲಿಸಲು ಹಕ್ಕು ಉಳ್ಳವರು ಆಗಿರುತ್ತಾರೆ. ಕಂದಾಯಕ್ಕೆ ಒಳಪಡದಿದ್ದಲ್ಲಿ ಕಂದಾಯಕ್ಕೆ ತರಲು ಸೂಚಿಸಲಾಗಿದೆ ಎಂದು ತಿಳಿಸಿತ್ತು ಎಂದು ವಿವರಿಸಿದರು.

೨೦೦೬ ನಂತರದ ಬೆಳವಣಿಗೆ

೩೧.೧೦.೨೦೦೬ರಲ್ಲಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಸಮ್ಮಿಶ್ರ ಸರಕಾರದ ಕಂದಾಯ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿ, ಜಮ್ಮಾ ಜಾಗದ ಭೂಪರಿವರ್ತನೆ ಹಕ್ಕನ್ನು ನಿಷೇಧಿಸಿದ್ದರು. ೨೦೦೭ರಲ್ಲಿ ಸಮ್ಮಿಶ್ರ ಸರಕಾರ ಬದಲಾಗಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದಾಗ ಹಿಂದಿನ ಸುತ್ತೋಲೆಯನ್ನು ಸರಕಾರ ಹಿಂಪಡೆಯಿತು. ಅಂದು ಅರುಣ್ ಮಾಚಯ್ಯ ಎಂಎಲ್‌ಸಿಯಾಗಿದ್ದರು. ಅವರ ಒತ್ತಡವೂ ಸುತ್ತೋಲೆ ಹಿಂಪಡೆಯಲು ಕಾರಣಗಳಲ್ಲಿ ಒಂದು ಎಂದು ಪೊನ್ನಣ್ಣ ಹೇಳಿದರು.

೨೦೧೦ರಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ, ವಿಶೇಷ ಹಕ್ಕಿನ ಜಾಗವನ್ನು ಉಲ್ಲೇಖಿಸಿ ಜಮ್ಮಾಬಾಣೆಯಂತಹ ಜಾಗವನ್ನು ಸಾರ್ವಜನಿಕ ಉದ್ದೇಶಕ್ಕೆ ಹೊರತುಪಡಿಸಿ ಬೇರೆ ಯಾವುದೇ ಉದ್ದೇಶಕ್ಕೆ ಬಳಸುವಂತಿಲ್ಲ ಎಂದು ಸುತ್ತೋಲೆ ಹೊರಡಿಸಿದ್ದರು. ಅನಂತರ ಅಂದಿನ ಜಿಲ್ಲಾಧಿಕಾರಿ ೧೪.೭.೨೦೧೦ರಲ್ಲಿ ಸರಕಾರಕ್ಕೆ ಪತ್ರ ಬರೆದು ಸರಕಾರ ಹೊರಡಿಸಿರುವ ಸುತ್ತೋಲೆಗೆ ಜಿಲ್ಲೆಯಲ್ಲಿ ವಿರೋಧ ಬಂದಿದ್ದು, ಕಾನೂನು, ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹಿಂಪಡೆಯಬೇಕೆAದು ಕೋರಿದ್ದರು. ಅದರ ಆಧಾರದ ಮೇಲೆ ತಾತ್ಕಾಲಿಕವಾಗಿ ಸುತ್ತೋಲೆಯನ್ನು ಸ್ಥಗಿತಗೊಳಿಸಿ ಆದೇಶಿಸಲಾಯಿತು.

೨೦೧೨ರಲ್ಲಿ ಬಳಕೆದಾರ ಎಂಬ ಪದಕ್ಕೆ ಸರಕಾರ ವಿವರಣೆ ನೀಡಿ, ಕೊಡಗು ಜಿಲ್ಲೆಯ ಭೂ ಮಾಲೀಕರು ಹಾಗೂ ಜಮ್ಮಾ ಹಿಡುವಳಿದಾರರು ಎಂದು ವಿಧೇಯಕದಲ್ಲಿ ತಿದ್ದುಪಡಿ ತರಲಾಯಿತು. ಇದಕ್ಕೆ ಮೂಲ ಕಾರಣ ಚೆಕ್ಕೇರ ಪೂವಯ್ಯ ಪ್ರಕರಣ ಎಂದ ಅವರು, ನ್ಯಾಯಾಂಗ ತೀರ್ಪನ್ನು ಶಾಸಕಾಂಗಕ್ಕೆ ತಂದು ಕಾನೂನಾಗಿ ಜಾರಿಗೆ ತರುವುದು ಪ್ರಜಾಪ್ರಭುತ್ವದ ನಡೆಯಾಗಿದೆ. ಇದೀಗ ೨೦೧೨ರ ತಿದ್ದುಪಡಿಯಿಂದ ಶಾಶ್ವತ ಪರಿಹಾರವಾಯಿತು ಎಂಬ ವಿತಂಡ ವಾದ ಮಾಡಲಾಗುತ್ತಿದೆ. ಅಂದು ಮಾಡಿದ ತಿದ್ದುಪಡಿಯನ್ನು ವಿರೋಧಿಸುವುದಿಲ್ಲ. ಸ್ವಾಗತಾರ್ಹ. ಅದು ಪರಿಹಾರಕ್ಕೆ ಹೆಜ್ಜೆಯಾಗಿದೆ. ನಂತರದ ಬೆಳವಣಿಗೆಯಲ್ಲಿ ಈ ಪರಿಸ್ಥಿತಿ ಸೃಷ್ಟಿಯಾಗಲು ಕಾರಣವೇನು ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ ಎಂದು ಹೇಳಿದರು.

೨೨,೯೪೧ ಎಕರೆಗೆ ಕಂದಾಯ ನಿಗದಿಯಾಗಿಲ್ಲ

ಇದುವರೆಗೂ ೨೨,೯೪೧ ಎಕರೆ ಜಾಗಕ್ಕೆ ಕಂದಾಯ ನಿಗದಿಯಾಗಿಲ್ಲ. ಆ ಕೆಲಸ ಮೊದಲು ಆಗಬೇಕು ಎಂದು ಪೊನ್ನಣ್ಣ ಹೇಳಿದರು.

೨೦೦೦ನೇ ಇಸವಿಯಲ್ಲಿ ಆರ್‌ಟಿಸಿಯನ್ನು ಗಣಕೀಕರಣ ಮಾಡಲು ಆರಂಭವಾಯಿತು. ಜಮಾಬಂದಿಯಲ್ಲಿ ಇರುವ ಕಲಂ ೩ರಲ್ಲಿ ಪಟ್ಟೇದಾರನ ಹೆಸರು ಸೇರಿಸಲು ಅವಕಾಶವಿದೆ. ಇದು ಆರ್‌ಟಿಸಿಯಲ್ಲಿ ಇರಲಿಲ್ಲ. ಎಲ್ಲಾ ವಾದ-ವಿವಾದ ಆದರೂ ಜಮಾಬಂದಿಯನ್ನು ಜಮ್ಮಾ ಹಿಡುವಳಿದಾರರು ಪಾಲಿಸುತ್ತಿದ್ದರು. ಜಮಾಬಂದಿ ಕಲಂನಲ್ಲಿರುವ ಪಟ್ಟೇದಾರ ಹೆಸರನ್ನು ಆರ್‌ಟಿಸಿಗೆ ಅಳವಡಿಸಲು ಸೂಚಿಸಲಾಯಿತು. ಆದರೆ, ಕಲಂ ೩ರಲ್ಲಿ ಆರ್‌ಟಿಸಿಯಲ್ಲಿ ಅವಕಾಶವಿರಲಿಲ್ಲ. ಅದನ್ನು ಮಾಲೀಕರ ಹೆಸರಿರುವ ಕಲಂ ೯ರಲ್ಲಿ ಪಟ್ಟೇದಾರರ ಹೆಸರು ಹಾಕಿದರು. ಪರಿಣಾಮ ಸಮಸ್ಯೆ ಮತ್ತಷ್ಟು ಬಿಗಡಾಯಿಸಿತು ಎಂದು ವಿವರಿಸಿದರು.

ಸುವರ್ಣ ಸೌಧದಲ್ಲಿ ರಾಷ್ಟçಪತಿ ಅಂಗೀಕಾರ ನೀಡಿಲ್ಲ

೨೦೧೨ರಲ್ಲಿ ಮಾಡಿದ ತಿದ್ದುಪಡಿ ವಿಚಾರದಲ್ಲಿ ರಾಷ್ಟçಪತಿ ನೀಡಿದ ಅಂಗೀಕಾರ ಕಾನೂನಿನ ಪ್ರಕ್ರಿಯೆಯಡಿ ಹೊರತು ಅಂದಿನ ಕೊಡಗಿನ ಶಾಸಕರ ಮಾತಿನಿಂದ ಅಲ್ಲ ಎಂದು ಪೊನ್ನಣ್ಣ ಆರೋಪಿಸಿದರು.

ಜಮ್ಮಾ ವಿಚಾರದಲ್ಲಿ ತಿದ್ದುಪಡಿ ತಂದಾಗ ಅಂದಿನ ರಾಜ್ಯಪಾಲರು ವಿಧೇಯಕಕ್ಕೆ ಒಪ್ಪಿಗೆ ನೀಡಲಿಲ್ಲ. ಈ ಮಸೂದೆ ರಾಷ್ಟçಪತಿ ಬಳಿ ಹೋಯಿತು. ಕಾನೂನಿನಡಿ ನೇರವಾಗಿ ರಾಷ್ಟçಪತಿಗೆ ಮಸೂದೆ ಕಳುಹಿಸಲು ಆಗುವುದಿಲ್ಲ. ಗೃಹ ಸಚಿವಾಲಯಕ್ಕೆ ಹೋಗಿ ನಂತರ ರಾಷ್ಟçಪತಿಗೆ ಹೋಗಿ ಕಾನೂನು ಸಚಿವರಿಗೆ, ಅವಶ್ಯಕತೆ ಇದ್ದರೆ ಅಟಾರ್ನಿ ಜನರಲ್ ಬಳಿ ಕಡತ ಹೋಗಿ ಅವರುಗಳ ಸಲಹೆ ಪಡೆಯಬೇಕಾಗುತ್ತದೆ. ಆದರೆ, ಮಾಜಿ ಶಾಸಕರುಗಳು ರಾಷ್ಟçಪತಿ ಪ್ರಣವ್ ಮುಖರ್ಜಿ ಸುವರ್ಣ ಸೌಧ ಉದ್ಘಾಟನೆಗೆ ಬಂದ ಸಂದರ್ಭ ಅವರು ಕೊಡಗಿನಲ್ಲಿ ಏನಾದರು ಸಮಸ್ಯೆ ಇದೆಯೇ ಎಂದು ಕೇಳಿದರು, ಜಮ್ಮಾ ಸಮಸ್ಯೆ ಇದೆ ಎಂದಾಗ ತಕ್ಷಣ ಅನುಮೋದನೆಗೆ ಕ್ರಮವಹಿಸಿದ್ದರು ಎಂದು ಹೇಳಿದ್ದಾರೆ. ಇದು ಸಾಧ್ಯವಿದೆಯ? ಎಂಬ ಅನುಮಾನದಲ್ಲಿ ಅಂದಿನ ಪ್ರವಾಸ ಕಾರ್ಯಕ್ರಮವನ್ನು ತೆಗೆದು ಪರಿಶೀಲಿಸಿದಾಗ. ಅಂದು ಪ್ರಣಬ್ ಮುಖರ್ಜಿ ಅವರು ವಿಮಾನ ನಿಲ್ದಾಣಕ್ಕೆ ಬಂದು, ಸುವರ್ಣ ಸೌಧಕ್ಕೆ ಆಗಮಿಸಿ ಉದ್ಘಾಟಿಸಿ, ಬಳಿಕ ಮಾತನಾಡಿ, ಚಂದ್ರಶೇಖರ್ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಪ್ರದಾನ ಮಾಡಿ, ಮತ್ತೊಂದು ಕಾರ್ಯಕ್ರಮಕ್ಕೆ ತೆರಳಿ ಈ ಮಧ್ಯೆ ಅಲ್ಲಿನ ಅತಿಥಿ ಗೃಹಕ್ಕೆ ತೆರಳುತ್ತಾರೆ. ಅಲ್ಲಿಂದ ಸಂಜೆ ಹಿಂತಿರುಗುತ್ತಾರೆ. ಈ ಮಧ್ಯೆ ಹಿಂದಿನ ಶಾಸಕರನ್ನು ಕರೆಸಿ ಮಾತನಾಡಲು ಹೇಗೆ ಸಾಧ್ಯ. ಕಾನೂನಿನ ವ್ಯವಸ್ಥೆ ಇದೆಯೇ? ಎಂದು ಪ್ರಶ್ನಿಸಿದರು.

ರಾಷ್ಟçಪತಿ ಬಂದಿದ್ದು, ೨೦೧೨ರಲ್ಲಿ. ಅನುಮೋದನೆ ಸಿಕ್ಕಿದ್ದು ೨೦೧೩ರಲ್ಲಿ. ಇದು ಸುವರ್ಣ ಸೌಧದಲ್ಲಿ ಆಗಿದ್ದಲ್ಲ. ರಾಷ್ಟçಪತಿ ಭವನದಲ್ಲಿ ಎಂದು ಹೇಳಿದರು.

ಒಂದೂವರೆ ವರ್ಷಗಳ ಪ್ರಯತ್ನ

ಜಮ್ಮಾ ವಿಚಾರ ಜಾತಿ, ಜನಾಂಗದ ಸಮಸ್ಯೆಯಲ್ಲ. ಕೊಡಗಿನ ಸಮಸ್ಯೆ. ಪಟ್ಟೇದಾರ ಹೆಸರನ್ನು ತೆಗೆಯುವುದು, ಮಾಲೀಕರ ಹೆಸರು ತರುವ ನಿಟ್ಟಿನಲ್ಲಿ ಕಂದಾಯ ಸಚಿವರೊಂದಿಗೆ ಒಂದೂವರೆ ವರ್ಷದಿಂದ ಪ್ರಯತ್ನ ನಡೆಸಲಾಯಿತು. ಸಿಂಗಲ್ ಆರ್‌ಟಿಸಿ ವ್ಯವಸ್ಥೆ ಬರಬೇಕಾಗಿದೆ. ವಿಧೇಯಕ್ಕೂ ಮುನ್ನ ಸುತ್ತೋಲೆ ಹೊರಡಿಸಬೇಕಾದ ಚರ್ಚೆಯೂ ಆಗಿತ್ತು. ಆದರೆ, ಇದು ಸಾಧ್ಯವಾಗಲಿಲ್ಲ. ಬಳಿಕ ಮುಂಗಾರು ಅಧಿವೇಶನದಲ್ಲಿ ವಿವಿಧ ಸೆಕ್ಷನ್‌ಗಳಿಗೆ ತಿದ್ದುಪಡಿ ತರುವ ಪ್ರಯತ್ನವೂ ಯಶಸ್ವಿಯಾಗಿಲ್ಲ. ಬಳಿಕ ಎಲ್ಲಾ ಚರ್ಚೆಯ ನೂತನ ನೂತನ ವಿಧೇಯಕವನ್ನು ಮಂಡಿಸಿ ಅಂಗೀಕಾರವಾಗಿ ಇದೀಗ ಸಮಸ್ಯೆ ಬಗೆಹರಿಸಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ವಿವರಿಸಿದರು.

ಅದಾಲತ್ ಮೂಲಕ ಪರಿಹಾರ

ನೂತನ ವಿಧೇಯಕ ಮೂಲಕ ಅಧಿಕಾರವನ್ನು ತಹಶೀಲ್ದಾರ್‌ಗೆ ನೀಡಿದ್ದೇವೆ. ಜಮಾಬಂದಿ ಕಲಂ ೩ ರಿಂದ ೯ಕ್ಕೆ ಹೋಗಿರುವ ಪಟ್ಟೇದಾರ ಹೆಸರನ್ನು ತೆಗೆಯುವ ಅಧಿಕಾರವನ್ನು ನೀಡಲಾಗಿದೆ. ಪಟ್ಟೇದಾರರ ಹೆಸರಿರುವ ಪರಿಣಾಮ ಅವರ ವಂಶಸ್ಥರಿರುವ ಹೆಸರನ್ನು ತೆಗೆಯಬೇಕಾಗಿದೆ. ಅದಾಲತ್ ನಡೆಸಿ ಜನರ ಮುಂದೆ ಹೋಗಿ ಪರಿಹಾರದ ಕೆಲಸ ಮಾಡುತ್ತೇವೆ ಎಂದರೆ ಪರಿಹಾರ ಬೇಡ ಎನ್ನುವರು ಮಾತನಾಡುತ್ತಾರೆ ಎಂದು ಅತೃಪ್ತಿ ವ್ಯಕ್ತಪಡಿಸಿದರು.

೨೦೨೪ರಲ್ಲಿನ್ಯಾಯಮೂರ್ತಿ ಸೂರಜ್ ಅವರ ತೀರ್ಪನ್ನು ಉಲ್ಲೇಖಿಸಿ ಮಾಜಿ ಶಾಸಕರು ಮಾತನಾಡಿದ್ದಾರೆ. ಆ ತೀರ್ಪನ್ನು ನ್ಯಾಯಾಧೀಶರು ಬರೆದಿರುವುದು. ಸರಕಾರವಲ್ಲ. ನ್ಯಾಯಾಲಯಕ್ಕೆ ಯಾರು ಬೇಕಾದರೂ ಹೋಗಬಹುದು. ಪಟ್ಟೇದಾರ, ಪೌತಿ ಖಾತೆ ಸಮಸ್ಯೆಯಾಗಲು ಕಾನೂನಿನಡಿ ಇದೀಗ ತಿದ್ದುಪಡಿ ತರಲಾಗಿದೆ ಎಂದರು.

ದಾಖಲೆ ನೀಡಿ

ಒಂದೆ ಒಂದು ಮ್ಯೂಟೇಷನ್, ಪೌತಿ ಖಾತೆ, ಪಟ್ಟೇದಾರ ಸಮಸ್ಯೆ ಬಗೆಹರಿಸಿದ್ದಲ್ಲಿ ದಾಖಲೆ ನೀಡಲಿ ನಾವು ಒಪ್ಪಿಕೊಳ್ಳುತ್ತೇವೆ. ಜಮ್ಮಾ ಭೂಮಿಗೆ ಇದ್ದ ನಿರ್ಬಂಧ ರದ್ದಾಗಿ ಹಕ್ಕು ದೊರೆಯಲು ಚೆಕ್ಕೇರ ಪೂವಯ್ಯ ಅವರ ಪ್ರಕರಣ ಕಾರಣ ಎಂದು ಪೊನ್ನಣ್ಣ ಒತ್ತಿ ಹೇಳಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ಚಂದ್ರಮೌಳಿ ಮಾತನಾಡಿ, ರಾಜಕೀಯ ಇಚ್ಛಾಶಕ್ತಿಯಿಂದ ಜಮ್ಮಾ ಸಮಸ್ಯೆಗೆ ಪರಿಹಾರ ದೊರೆತಿದೆ. ಇದರಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ರೋಗಗ್ರಸ್ತ ವ್ಯವಸ್ಥೆಗೆ ಆರೋಗ್ಯ ಲೇಪನವನ್ನು ಶಾಸಕರು ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ ಅವರು, ಅದಾಲತ್‌ನಿಂದ ನ್ಯಾಯ ದೊರೆಯುವ ವಿಶ್ವಾಸವಿದೆ ಎಂದರು. ಗೋಷ್ಠಿಯಲ್ಲಿ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಉಪಾಧ್ಯಕ್ಷ ಲೋಕೇಶ್, ಅಬ್ದುಲ್ ರೆಹಮಾನ್ ಹಾಜರಿದ್ದರು.