ವಿಶೇಷ ವರದಿ : ಎಂ.ಎನ್. ಚಂದ್ರಮೋಹನ್

ಕುಶಾಲನಗರ, ಜ. ೯: ಕುಶಾಲನಗರದಿಂದ ರಾಷ್ಟಿçÃಯ ಹೆದ್ದಾರಿ -೨೭೫ರ ಮೈಸೂರು ಭಾಗಕ್ಕೆ ವಿಸ್ತರಣೆ ಮತ್ತು ಸುಧಾರಣೆ ಕಾಮಗಾರಿ ಬಿರುಸಿನಿಂದ ನಡೆಯುತ್ತಿದೆ.

ಒಟ್ಟು ೯೭.೩೩೫ ಕಿ ಮೀ ದೂರದ ರಸ್ತೆ ಕಾಮಗಾರಿ ಕುಶಾಲನಗರ ಬೈಪಾಸ್‌ನಲ್ಲಿ ಪ್ರಾರಂಭವಾಗಿ ಶ್ರೀರಂಗಪಟ್ಟಣ ಸಮೀಪ ಪಶ್ಚಿಮ ವಾಹಿನಿಯಲ್ಲಿ ಕೊನೆಗೊಂಡು ಮೈಸೂರು ಬೆಂಗಳೂರು ದಶಪಥ ರಸ್ತೆಗೆ ಸಂಪರ್ಕ ಕಲ್ಪಿಸಲಿದೆ. ಕಾಮಗಾರಿ ಯೋಜನೆಯ ಪ್ಯಾಕೇಜ್- ೨ರ ಜಿಲ್ಲೆಯ ವ್ಯಾಪ್ತಿಯ ಗುಡ್ಡೆಹೊಸೂರು ಸಮೀಪದ ತೆಪ್ಪದ ಕಂಡಿ-ಬಸವನಹಳ್ಳಿ ರಸ್ತೆ ಕಾಮಗಾರಿ ಕಳೆದ ಮೂರು ವಾರಗಳಿಂದ ಆರಂಭಗೊAಡಿದ್ದು, ಮರಗಿಡಗಳ ತೆರವು ಕಾರ್ಯ, ವಿದ್ಯುತ್ ಸಂಪರ್ಕ ಕಂಬಗಳ ಅಳವಡಿಕೆ ಸೇರಿದಂತೆ ನೀರು ಸರಬರಾಜು ಮತ್ತಿತರ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಾಮಗಾರಿ ನಡೆದಿದೆ.

ತೆಪ್ಪದಕಂಡಿ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ತೂಗು ಸೇತುವೆ ಸಮೀಪದಲ್ಲಿ ಬೃಹತ್ ಸೇತುವೆ ನಿರ್ಮಾಣ ಕಾರ್ಯ ನಡೆಯಲಿದೆ. ಗುಡ್ಡೆಹೊಸೂರು ದುಬಾರೆ ಮೂಲಕ ಸಿದ್ದಾಪುರ ಕಡೆಗೆ ತೆರಳುವ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಸುಮಾರು ೫೦೦ ಮೀಟರ್ ಉದ್ದದ ಫ್ಲೆöÊ ಓವರ್ ಸೇತುವೆ ನಿರ್ಮಾಣಗೊಂಡಿದೆ. ಕೆಳಭಾಗದಲ್ಲಿ ರಾಜ್ಯ ಹೆದ್ದಾರಿ ಹಾದುಹೋದರೆ ಮೇಲ್ಭಾಗದಲ್ಲಿ ಮೈಸೂರು-ಕುಶಾಲನಗರ (ಬಸವನಹಳ್ಳಿ) ಫ್ಲೆöÊ ಓವರ್ ರಸ್ತೆ ಸಾಗಲಿದೆ.

ಒಟ್ಟು ೨.೩ ಕಿಲೋಮೀಟರ್ ಉದ್ದದ ರಸ್ತೆ ಕಾಮಗಾರಿ ಬಸವನಹಳ್ಳಿ ಗ್ರಾಮದ ಮೂಲಕ ಮಡಿಕೇರಿ ರಸ್ತೆಯ ಆನೆಕಾಡು ಬಳಿ ಸಂಪರ್ಕಗೊಳ್ಳಲಿದೆ. ಬಸವನಹಳ್ಳಿ ಗ್ರಾಮದ ೫೦ ಕುಟುಂಬಗಳು ೨೫ ಕಟ್ಟಡಗಳು ಸೇರಿದಂತೆ ಆಸ್ತಿ ಆಸ್ತಿ ಮನೆಯನ್ನು ಕಳೆದುಕೊಂಡಿದ್ದು ಸರ್ಕಾರದಿಂದ ಅಗತ್ಯ ಪರಿಹಾರ ಪಡೆದುಕೊಂಡಿದ್ದಾರೆ. ಪಿರಿಯಾಪಟ್ಟಣ ತಾಲೂಕು ಮತ್ತು ಈ ವ್ಯಾಪ್ತಿಯಲ್ಲಿ ವನ್ಯಜೀವಿ ಅರಣ್ಯ ವಿಭಾಗದ ತಕರಾರು ವ್ಯಾಜ್ಯ ತೆರವುಗೊಂಡಿದ್ದು ಇದೀಗ ಕಾಮಗಾರಿ ಆರಂಭಗೊAಡಿರುವುದು ಕಂಡುಬAದಿದೆ. ಶ್ರೀರಂಗಪಟ್ಟಣ-ಕುಶಾಲನಗರ (ಬಸವನಹಳ್ಳಿ) ತನಕ ಪ್ರಸ್ತಾವಿತ ೪೫ ನಗರ, ೬೦ ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿ ಕಾಮಗಾರಿ ಈಗಾಗಲೇ ಆರಂಭಗೊAಡಿದ್ದು ಕೇವಲ ರಸ್ತೆ ಕಾಮಗಾರಿ ಯೋಜನೆ ಸುಮಾರು ೨೫೦೨.೦೪ ಕೋಟಿ ರೂಗಳ ವೆಚ್ಚದಲ್ಲಿ ರಸ್ತೆ ಯೋಜನೆ ನಿರ್ಮಾಣಗೊಳ್ಳಲಿದೆ. ಕೊಡಗು, ಮೈಸೂರು, ಮಂಡ್ಯ ಜಿಲ್ಲೆಗಳ ಭೂ ಪ್ರದೇಶಗಳನ್ನು ಒಳಗೊಂಡ ಈ ಚತುಷ್ಪಥ ಯೋಜನೆ ಹೆಚ್ಚಿನ ವ್ಯಾಪ್ತಿಯಲ್ಲಿ ಬಯಲು ಪ್ರದೇಶ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ನಡೆಯಲಿದೆ.

ಸುಮಾರು ೫೮೧ ಹೆಕ್ಟೇರ್ ಭೂಮಿಯನ್ನು ಬಳಸಿಕೊಂಡು ಈ ರಸ್ತೆ ನಿರ್ಮಾಣವಾಗುತ್ತಿದ್ದು ಸುಮಾರು ೪೬.೮೫ ಹೆಕ್ಟೇರ್ ಅರಣ್ಯ ಪ್ರದೇಶಗಳನ್ನು ರಸ್ತೆ ನಿರ್ಮಾಣಕ್ಕೆ ಉಪಯೋಗಿಸಲಾಗುತ್ತದೆ. ಅರಣ್ಯ ಇಲಾಖೆಯಿಂದ ಮತ್ತು ಸಂಬAಧಿಸಿದ ಇಲಾಖೆಗಳಿಂದ ಯೋಜನೆಗೆ ಈಗ ಎಲ್ಲೆಡೆ ಗ್ರೀನ್ ಸಿಗ್ನಲ್ ಲಭಿಸಿದೆ.

ಕೊಡಗು ಜಿಲ್ಲೆಯ ೨.೩ ಹೆಕ್ಟೇರ್ ಭೂಮಿಯನ್ನು ಬಳಸಿಕೊಳ್ಳಲಾಗುತ್ತಿದ್ದು ೧೩.೭೪ ಹೆಕ್ಟೇರ್ ವ್ಯಾಪ್ತಿಯ ಅರಣ್ಯ ಪ್ರದೇಶ ಒಳಗೊಂಡಿದೆ.

ಸುಮಾರು ೬೨ ಹಳ್ಳಿಗಳು ಈ ಚತುಷ್ಪಥ ರಸ್ತೆಯ ಪ್ರಭಾವಕ್ಕೆ ಒಳಗಾಗಿದ್ದು ಅದರಲ್ಲಿ ಕೊಡಗು ಜಿಲ್ಲೆಯಲ್ಲಿ ಗುಡ್ಡೆಹೊಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸವನಹಳ್ಳಿ ಗ್ರಾಮ ಸೇರಿಕೊಂಡಿದೆ. ಇಡೀ ಯೋಜನಾ ವ್ಯಾಪ್ತಿಯಲ್ಲಿ ೩೨೬ ಕುಟುಂಬಗಳು ಹೆದ್ದಾರಿ ಕಾಮಗಾರಿಯ ಪ್ರಭಾವಕ್ಕೆ ಒಳಪಟ್ಟಿದ್ದು ಕೊಡಗು ಜಿಲ್ಲೆಯ ವ್ಯಾಪ್ತಿಯ ಒಟ್ಟು ೫೦ ಮನೆಗಳು ಮಾತ್ರ ಇದರಲ್ಲಿ ಒಳಗೊಂಡಿದೆ.

೩೮೦ ಕಟ್ಟಡಗಳು ಆಸ್ತಿಪಾಸ್ತಿಗಳು ಹಾನಿಗೆ ಒಳಗಾಗಲಿದೆ. ಅದರಲ್ಲಿ ಕೊಡಗು ಜಿಲ್ಲೆಯ ಬಸವನಹಳ್ಳಿ ಗ್ರಾಮದ ೨೫ ಕಟ್ಟಡಗಳು ಸೇರಿಕೊಂಡಿವೆ. ಮನೆ ಆಸ್ತಿ ಕಳೆದುಕೊಳ್ಳುವ ಎಲ್ಲಾ ಮಾಲೀಕರಿಗೂ ದುಪ್ಪಟ್ಟು ಪ್ರಮಾಣದ ನಗದು ಪರಿಹಾರ ಈಗಾಗಲೇ ಕಲ್ಪಿಸಲಾಗಿದೆ ಎಂದು ಹೆದ್ದಾರಿ ಯೋಜನೆಯ ಅಧಿಕಾರಿಗಳು ತಿಳಿಸಿದ್ದಾರೆ. ಚತುಷ್ಪಥ ಹೆದ್ದಾರಿ ಯೋಜನೆಯಲ್ಲಿ ಒಟ್ಟಾರೆ ಎರಡು ಮೇಲ್ ಸೇತುವೆಗಳು ನಿರ್ಮಾಣಗೊಳ್ಳಲಿದ್ದು ಹುಣಸೂರು ಪಿರಿಯಾಪಟ್ಟಣ ಹೆದ್ದಾರಿ ನಡುವೆ ನಿರ್ಮಾಣದ ಹಂತದಲ್ಲಿದೆ. ಅಗತ್ಯ ಇರುವ ಸ್ಥಳಗಳಲ್ಲಿ ೪೪ ಚಿಕ್ಕ ಸೇತುವೆಗಳು ನಿರ್ಮಾಣಗೊಳ್ಳುತ್ತಿವೆ. ಕಾಮಗಾರಿಯಲ್ಲಿ ಒಟ್ಟು ೨೨ ವಾಹನ ಸುರಂಗ ಕಾಮಗಾರಿ ನಡೆಯುತ್ತಿದ್ದು ಜಿಲ್ಲೆಯ ವ್ಯಾಪ್ತಿಯಲ್ಲಿ ಎರಡು ವಾಹನ ಸುರಂಗಗಳು ನಿರ್ಮಾಣಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರೊಂದಿಗೆ ೪ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ) ೨೧ ಲಘುವಾಹನ ಸುರಂಗ ಕಾಮಗಾರಿ ನಡೆಯಲಿದೆ.

ರಸ್ತೆ ನಿರ್ಮಾಣ, ಪರಿಹಾರ, ಸೇತುವೆಗಳು ಹಾಗೂ ಇತರ ಕಾಮಗಾರಿಗಳು ಸೇರಿ ಒಟ್ಟು ಯೋಜನಾ ವೆಚ್ಚ ೪೧೨೮.೯೨ ಕೋಟಿ ರೂಗಳಾಗಿದ್ದು ಕೊಡಗು ಜಿಲ್ಲೆಯ ವ್ಯಾಪ್ತಿಯಲ್ಲಿ ೯೨ ಕೋಟಿ ರೂ ವೆಚ್ಚವಾಗಲಿದೆ.

ರಸ್ತೆ ಸುರಕ್ಷತೆ ಹಿನ್ನೆಲೆಯಲ್ಲಿ ದೀರ್ಘಾವಧಿಯ ಹವಾಮಾನ ದತ್ತಾಂಶವನ್ನು ಆಧರಿಸಿ ೩೦ ವರ್ಷಗಳ ಅವಧಿಯಲ್ಲಿ ಕೊಡಗು ಕೇಂದ್ರದಲ್ಲಿ ದಾಖಲಾದ ಸರಾಸರಿ ಮಳೆಯನ್ನು ಕೂಡ ಈ ಯೋಜನೆ ರೂಪಿಸುವ ಸಂದರ್ಭ ಪರಿಗಣಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೂಲ ಪರಿಸರಕ್ಕೆ ಧಕ್ಕೆ ಆಗದಂತೆ ಭೂಕಂಪನ ವಲಯ ಬಗ್ಗೆ ಗಮನಹರಿಸಲಾಗಿದೆ ಗಾಳಿ, ಶಬ್ದ, ಮಣ್ಣು ಮೇಲ್ಮೈ ಮತ್ತು ಅಂತರ್ಜಲಕ್ಕಾಗಿ ಒಂದು ಋತುವಿನ ಬೇಸ್ ಲೈನ್ ಅಧ್ಯಯನ ಕೂಡ ನಡೆಸಲಾಗಿದೆ ಎಂದು ಯೋಜನೆಯ ತಂತ್ರಜ್ಞರು ಮಾಹಿತಿ ನೀಡಿದ್ದಾರೆ.

ಹೆದ್ದಾರಿ ಕಾಮಗಾರಿ ಸಂದರ್ಭ ಅಂದಾಜು ೧೮ ಸಾವಿರ ಸಂಖ್ಯೆಯ ಮರಗಳನ್ನು ಕಡಿಯುವ ನಿರೀಕ್ಷೆ ಹೊಂದಲಾಗಿದ್ದು, ಈಗಾಗಲೇ ಬಹುತೇಕ ಮರಗಳನ್ನು ತೆರವುಗೊಳಿಸಲಾಗಿದೆ.

ಯೋಜನೆಯಿಂದ ತೊಂದರೆಗೆ ಒಳಗಾಗುವ ಸಾಂಸ್ಕೃತಿಕ ಧಾರ್ಮಿಕ ಸಮುದಾಯದ ಆಸ್ತಿಗಳು ಶಿಕ್ಷಣ ಸಂಸ್ಥೆಗಳು ಮತ್ತು ಸರಕಾರಿ ಆಸ್ಪತ್ರೆಗಳನ್ನು ಕೂಡ ಗುರುತಿಸಲಾಗಿದ್ದು ಅವುಗಳನ್ನು ತೆರವುಗೊಳಿಸಿ ಬದಲಿ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಪಿರಿಯಾಪಟ್ಟಣ ಕಡೆಯಿಂದ ಬರುವ ಚತುಷ್ಪಥ ರಸ್ತೆ ಬೈಲುಕುಪ್ಪೆ ಮೂಲಕ ಹಾದು ನಂತರ ರಾಣಿ ಗೇಟ್ ಮೂಲಕ ಕೊಡಗು ಜಿಲ್ಲೆಯ ತೆಪ್ಪದ ಕಂಡಿ ಬಳಿ ಜಿಲ್ಲೆಗೆ ಸಂಪರ್ಕ ಕಲ್ಪಿಸಲಿದೆ. ಈ ಸಂದರ್ಭ ಟಿಬೆಟಿಯನ್ ನಿರಾಶ್ರಿತ ಶಿಬಿರದ ಸುಮಾರು ೧೦೪ ಮನೆಗಳನ್ನು ತೆರವುಗೊಳಿಸಲು ನಿರ್ಧರಿಸಲಾಗಿದೆ ಮತ್ತು ಅವರಿಗೆ ಬದಲಿ ವ್ಯವಸ್ಥೆ ಕಲ್ಪಿಸಲು ಕಾರ್ಯ ಯೋಜನೆ ರೂಪಿಸಲಾಗಿದೆ. ಯೋಜನೆಗೆ ಅಂದಾಜು ೫೯೫.೩೨ ಹೆಕ್ಟೇರ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಯೋಜನೆಯಿಂದ ಬಾಧಿತ ಜನರಿಗೆ ಅಥವಾ ಕುಟುಂಬಗಳಿಗೆ ನಿಯಮಾನುಸಾರ ಪರಿಹಾರ ಒದಗಿಸಲಾಗಿದೆ.

ಪಿರಿಯಾಪಟ್ಟಣದಿಂದ ಹೆದ್ದಾರಿ ರಸ್ತೆ ಸಾಗುವ ವ್ಯಾಪ್ತಿಯಲ್ಲಿ ಕಾವೇರಿ ನೀರು ಸರಬರಾಜು ಮಾಡುವ ಮುಖ್ಯ ಪೈಪ್‌ಲೈನ್‌ಗಳನ್ನು ಬದಲಾಯಿಸಲಾಗುತ್ತಿದ್ದು ನೀರು ಶುದ್ದೀಕರಣ ಘಟಕ ವ್ಯಾಪ್ತಿಯಲ್ಲಿ ಕೂಡ ಕೆಲವು ಕಟ್ಟಡಗಳನ್ನು ತೆರವುಗೊಳಿಸಲಾಗಿದೆ. ಯೋಜನೆಯು ಬಹುತೇಕ ಹಸಿರು ಕ್ಷೇತ್ರದ ಹೆದ್ದಾರಿಯಾಗಿದೆ. ಯೋಜನೆಯ ವೆಚ್ಚದಲ್ಲಿ ಪರಿಸರ ಪರಿಹಾರೋಪಾಯಗಳು ಮತ್ತು ಮೇಲ್ವಿಚಾರಣೆಯ ವೆಚ್ಚವಾಗಿ ೨೨.೨೮೪ ಕೋಟಿ ರೂಗಳ ಮೀಸಲು ಇರಿಸಲಾಗಿದೆ. ಕಾಮಗಾರಿ ನಡೆಯುವ ಸಂದರ್ಭ ಯಾವುದೇ ವಾಯು ಮಾಲಿನ್ಯ ಶಬ್ದ ಮಾಲಿನ್ಯ ಮಣ್ಣಿನ ಸವೆತ ಕಲ್ಲು ಗಣಿಗಾರಿಕೆ ತೈಲ ಸೋರಿಕೆ ಸಮಸ್ಯೆಗಳು ಉಂಟಾಗದAತೆ ಎಚ್ಚರವಹಿಸಲಾಗುತ್ತಿದೆ.

ಕಾಮಗಾರಿ ಸಂದರ್ಭ ಯಾವುದೇ ರೀತಿಯ ಜಲ ಕಲುಷಿತತೆ ಜಲಮೂಲಗಳ ನಷ್ಟ ಆಗದಂತೆ ಕೂಡ ಗಮನಹರಿಸಲಾಗುತ್ತಿದೆ ಎಂದು ಅಧಿಕಾರಿಗಳು ಶಕ್ತಿಗೆ ಮಾಹಿತಿ ನೀಡಿದ್ದಾರೆ. ಕಾರ್ಮಿಕರಿಗೆ ಯೋಜನಾ ಬದ್ಧವಾಗಿ ನಿರ್ಮಾಣ ಶಿಬಿರ ಆಯೋಜಿಸಲಾಗಿದೆ ಶೌಚಾಲಯ ಸೇರಿದಂತೆ ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ೨೦೨೭ರ ಆರಂಭದಲ್ಲಿ ಕಾಮಗಾರಿ ಸಂಪೂರ್ಣ ಮುಗಿದು ಲೋಕಾರ್ಪಣೆಗೊಳಲಿದೆ ಎಂದು ಹೆದ್ದಾರಿ ಯೋಜನಾಧಿಕಾರಿಗಳು ಶಕ್ತಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆಯ ಅನುಸಾರ ಪರಿಹಾರ ಅರಣ್ಯೀಕರಣ ಮರಗಳನ್ನು ಕಡಿಯುವುದರಿಂದ ಆಗುವ ನಷ್ಟವನ್ನು ಸರಿದೂಗಿಸಲು ಕಾರಿಡಾರ್ ಉದ್ದಕ್ಕೂ ಅವೆನ್ಯೂ ಪ್ಲಾಂಟೇಶನ್ ಬೆಳೆಸುವುದು ಪಥ ವಿಭಜಕದಲ್ಲಿ ಅಲಂಕಾರಿಕ ಔಷಧಿಗಳು ಮತ್ತು ಪೊದೆಗಳ ನೆಡುವ ಕಾರ್ಯಕ್ರಮ ನಡೆಯಲಿದೆ. ಸಸ್ಯವರ್ಗದ ನಷ್ಟವನ್ನು ಪುನ ಸ್ಥಾಪಿಸಲು ಮತ್ತು ಇನ್ನಷ್ಟು ಉತ್ಕೃಷ್ಟಗೊಳಿಸಲು ಅರಣ್ಯ ಪ್ಲಾಂಟೇಶನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೆದ್ದಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಅರಣ್ಯ ಮತ್ತು ಸೂಕ್ಷö್ಮ ಪ್ರದೇಶಗಳ ಬಳಿ ರಾತ್ರಿ ವೇಳೆ ನಿರ್ಮಾಣ ಚಟುವಟಿಕೆಗಳನ್ನು ಸ್ಥಗಿತಗೊಳಿಸುವುದು, ಅರಣ್ಯ ಇಲಾಖೆಯ ಮಾರ್ಗಸೂಚಿಗಳು ಮತ್ತು ನಿರ್ದೇಶನಗಳನ್ನು ಕಾಮಗಾರಿ ಸಂದÀರ್ಭ ಅನುಸರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದು ಯಾವುದೇ ರೀತಿಯಲ್ಲಿ ಕಾಡು ಪ್ರಾಣಿಗಳಿಗೆ ಕಿರಿಕಿರಿ ಉಂಟಾಗದAತೆ ರಸ್ತೆ ಕಾಮಗಾರಿ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ. ರಸ್ತೆ ನಿರ್ಮಾಣ ಸಂದರ್ಭ ವಾಹನಗಳಿಗೆ ಸಮರ್ಪಕ ಮಾರ್ಗದರ್ಶನಗಳ ತಡೆಗಳ ಸ್ಥಾಪನೆ ಸರಿಯಾದ ಬೆಳಕಿನ ವ್ಯವಸ್ಥೆ ಕಲ್ಪಿಸಲಾಗುವುದು, ಆಸ್ತಿಗಳಿಗೆ ತಾತ್ಕಾಲಿಕ ಪ್ರವೇಶಕ್ಕೆ ರಸ್ತೆ ಉದ್ದಕ್ಕೂ ಸಂಪರ್ಕ ರಸ್ತೆಗಳನ್ನು ಒದಗಿಸುವುದು ಸೇರಿದಂತೆ ಕೂಡ ರಸ್ತೆಗಳು ತಿರುವುಗಳಲ್ಲಿ ಅಪಾಯದ ಗುರುತುಗಳನ್ನು ಹಾಕಲಾಗುತ್ತಿದೆ. ಈ ಪ್ರಸ್ತಾವಿತ ಹೆದ್ದಾರಿ ರಸ್ತೆ ಹುಣಸೂರು ಪಿರಿಯಾಪಟ್ಟಣ ಕುಶಾಲನಗರ ಪಟ್ಟಣಗಳ ಹೊರವಲಯದಿಂದ ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ ಪಟ್ಟಣಗಳ ವಾಹನ ಸಂಚಾರದ ಒತ್ತಡಗಳು ಬಹುತೇಕ ಕಡಿಮೆಯಾಗಲಿದೆ. ಈ ಸುಧಾರಿತ ಚತುಷ್ಪಥ ರಸ್ತೆ ಅಭಿವೃದ್ಧಿಯಿಂದ ವಾಹನಗಳ ವೇಗ ಗಂಟೆಗೆ ೧೦೦ ಕಿಲೋಮೀಟರ್ ಸಾಗುವ ಮೂಲಕ ಮೈಸೂರು ಕುಶಾಲನಗರದ ಸಂಚಾರ ಅವಧಿ ಅರ್ಧದಷ್ಟು ಕಡಿಮೆಯಾಗಲಿದೆ. ಹುಣಸೂರು ಪಿರಿಯಾಪಟ್ಟಣ ಮತ್ತು ಬೈಲುಕೊಪ್ಪ ವ್ಯಾಪ್ತಿಯ ಗ್ರಾಮಗಳಲ್ಲಿ ಈಗಾಗಲೇ ಜೆಸಿಬಿ, ಹಿಟಾಚಿ ಮತ್ತು ಟಿಪ್ಪರ್ ಯಂತ್ರಗಳು ಸೇರಿದಂತೆ ಲಾರಿಗಳ ಘರ್ಜನೆಗಳು ಕೇಳಿ ಬರುತ್ತಿದ್ದು, ಕಾಮಗಾರಿ ಬಿರುಸಿನಿಂದ ನಡೆಯುತ್ತಿದೆ. ಮೂರು ಹಂತಗಳಲ್ಲಿ ನಡೆಯುತ್ತಿರುವ ಈ ಕಾಮಗಾರಿ ೨೦೨೭ರ ಆರಂಭದಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇರುವುದಾಗಿ ಕೊಡಗು ಮೈಸೂರು ಲೋಕಸಭಾ ಸದಸ್ಯರಾದ ಯದುವೀರ್ ಒಡೆಯರ್ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಈ ಯೋಜನೆಯ ಸ್ಥಳೀಯ ಹಾಗೂ ಪ್ರಾದೇಶಿಕ ಆರ್ಥಿಕತೆಗಳಿಗೆ ಹೆಚ್ಚಿನ ಪ್ರಯೋಜನಗಳನ್ನು ಹೊಂದಲು ಅವಕಾಶ ನೀಡಲಿದೆ. ಮೈಸೂರಿನಿಂದ ಮಡಿಕೇರಿ ಕಡೆಗೆ ವೇಗವಾದ ಸಂಪರ್ಕ ಒದಗಿಸುವುದರೊಂದಿಗೆ ಯೋಜನಾ ಪ್ರದೇಶದಲ್ಲಿ ಸುಧಾರಿತ ರಸ್ತೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಕೃಷಿ ವಾಣಿಜ್ಯ ಶಿಕ್ಷಣ ಆರೋಗ್ಯ ಸಮಾಜ ಕಲ್ಯಾಣ ಮತ್ತು ಸಾರ್ವಜನಿಕ ಸುರಕ್ಷತೆ ಅಂತಹ ಪ್ರದೇಶದ ಆರ್ಥಿಕತೆಯನ್ನು ಸುಧಾರಿಸಲು ಈ ಯೋಜನೆ ಸಹಕಾರಿಯಾಗುತ್ತದೆ ಎಂದು ರಾಷ್ಟಿçÃಯ ಹೆದ್ದಾರಿ ಅಧಿಕಾರಿಗಳು ತಿಳಿಸಿದ್ದಾರೆ. ಮೈಸೂರಿನಿಂದ ಕುಶಾಲನಗರಕ್ಕೆ ಸಾಗುವ ಮಾರ್ಗಕ್ಕೆ ಹೋಲಿಸಿದರೆ ಪ್ರಯಾಣದ ಸಮಯವನ್ನು ಅರ್ಧದಷ್ಟು ಕಡಿಮೆ ಮಾಡಲಿದೆ ಈ ರಸ್ತೆ ಗುಣ ಮಟ್ಟದಿಂದಾಗಿ ವಾಹನ ನಿರ್ವಹಣಾ ವೆಚ್ಚ ಕೂಡ ಕಡಿಮೆಯಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.