ವೀರಾಜಪೇಟೆ, ಜ. ೧ : ಇತಿಹಾಸ ಪ್ರಸಿದ್ಧ ವೀರಾಜಪೇಟೆಯ ಮಲೆತಿರಿಕೆ ಬೆಟ್ಟದ ಅಯ್ಯಪ್ಪ ದೇವಾಲಯದ ಉತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು.
ಉತ್ಸವದ ಧಾರ್ಮಿಕ ವಿಧಿವಿಧಾನಗಳು ಡಿ.೨೬ರಿಂದಲೇ ಆರಂಭಗೊAಡಿತ್ತಾದರೂ ಇಂದು ನಡೆದ ಧಾರ್ಮಿಕ ಕಾರ್ಯಕ್ರಮಗಳು ವಿಶೇಷ ಮೆರುಗನ್ನು ನೀಡಿದವು.
ಉತ್ಸವದ ಕೊನೆಯ ದಿನವಾದ ಗುರುವಾರ ಬೆಳಗ್ಗಿನಿಂದಲೇ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ದೇವಾಲಯದಲ್ಲಿ ಕೈಗೊಳ್ಳಲಾಯಿತು. ಮುಂಜಾನೆ ೫:೩೦ಕ್ಕೆ ದೇವಾಲಯದಲ್ಲಿ ಗಣಪತಿ ಹೋಮ, ಬಳಿಕ ದೇವಾಲಯದಲ್ಲಿ, ಲಕ್ಷಿö್ಮ ಪೂಜೆ, ಸರಸ್ವತಿ ಪೂಜೆ, ಲಕ್ಷಾರ್ಚನೆಯನ್ನು ನಡೆಸಲಾಯಿತು. ಅಯ್ಯಪ್ಪ ವ್ರತಧಾರಿಗಳು ಪುಷ್ಪಾರ್ಚನೆಯೊಂದಿಗೆ ಭಜನೆ ಮಾಡಿದರು. ದೇವಾಲಯದ ಜೀರ್ಣೋದ್ದಾರ ಕಾರ್ಯ ನಡೆಯುತ್ತಿರುವುದರಿಂದ ಈ ವರ್ಷ ಪೇಟೆಯ ಮುಖ್ಯಬೀದಿಗಳಲ್ಲಿ ಮೆರವಣಿಗೆ ನಡೆಯಲಿಲ್ಲ.