ಮಡಿಕೇರಿ, ಡಿ. ೩೧ : ಇಲ್ಲಿನ ಮಹದೇವಪೇಟೆಯಲ್ಲಿರುವ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ದೇವಾಲಯದಲ್ಲಿರುವ ಲಕ್ಷಿö್ಮ ವೆಂಕಟೇಶ್ವರ ವಿಗ್ರಹಕ್ಕೆ ವಿಶೇಷ ಅಲಂಕಾರದೊAದಿಗೆ ಪೂಜೆ ಸಲ್ಲಿಸಲಾಯಿತು. ಭಕ್ತರು ಹಾಲು, ಎಳನೀರು ಅಭಿಷೇಕ ಕಾರ್ಯಗಳನ್ನು ನೆರವೇರಿಸಿದರು. ದೇವಾಲಯದಲ್ಲಿ ಒಂಭತ್ತು ಸ್ವರ್ಗದ ಬಾಗಿಲುಗಳನ್ನು ನಿರ್ಮಿಸಲಾಗಿತ್ತು. ಈ ಬಾಗಿಲುಗಳ ಮೂಲಕ ಭಕ್ತರು ಸಾಗಿ ತಮ್ಮ ಇಷ್ಟಾರ್ಥ ಸೇವೆಯನ್ನು ನೆರವೇರಿಸಿದರು. ಚಂದ್ರಶೇಖರ ಭಟ್ ಹಾಗೂ ತಂಡದವರು ಪೂಜಾ ಕಾರ್ಯಗಳನ್ನು ನೆರವೇರಿಸಿದರು.