ಮಡಿಕೇರಿ, ಡಿ. ೩೧: ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಈತನಕ ಶೇ. ೮೦ ರಷ್ಟು ಭತ್ತದ ಕಟಾವು ಪೂರ್ಣಗೊಂಡಿದೆ.
ಭತ್ತದ ಕೃಷಿಗೆ ಹತ್ತು ಹಲವಾರು ಸಮಸ್ಯೆಗಳಿದ್ದರೂ ಜಿಲ್ಲೆಯ ಸಾಂಪ್ರದಾಯಿಕ ಕೃಷಿಯನ್ನು ಹಲವಾರು ರೈತರು ಮುಂದುವರಿಸಿಕೊAಡು ಬರುತ್ತಿದ್ದಾರೆ. ಈ ಬಾರಿ ಸುಮಾರು ೨೩ ಸಾವಿರ ಹೆಕ್ಟೇರ್ನಲ್ಲಿ ಭತ್ತ ಬೆಳೆಯುವ ಗುರಿಹೊಂದಲಾಗಿತ್ತು. ಇದರಲ್ಲಿ ೧೮,೫೦೦ ಹೆಕ್ಟೇರ್ನಲ್ಲಿ ಗುರಿ ಸಾಧನೆಯಾಗಿದೆ ಎಂದು ಕೃಷಿ ಇಲಾಖೆಯು ಮಾಹಿತಿ ತಿಳಿಸಿದೆ.
ಕೆಲವಾರು ಸಮಸ್ಯೆಗಳ ಕಾರಣ ವರ್ಷಂಪ್ರತಿ ಭತ್ತದ ಕೃಷಿಯತ್ತ ರೈತರ ನಿರುತ್ಸಾಹ ಕಂಡು ಬರುತ್ತಿದೆ. ಇದರ ನಡುವೆಯೂ ಒಂದಷ್ಟು ರೈತರು ತಮ್ಮ ಸಾಂಪ್ರದಾಯಿಕ ಬೆಳೆಯನ್ನು ಬೆಳೆಯುತ್ತಿರುವುದು ಶ್ಲಾಘನೀಯ. ಪ್ರಸ್ತುತ ಹಲವು ಸಂಘ-ಸAಸ್ಥೆಗಳು, ರೈತರು ಪಾಳು ಬಿದ್ದಿದ್ದ ಗದ್ದೆಗಳ ಪುನಶ್ಚೇತನಕ್ಕೆ ಮುಂದಾಗುತ್ತಿರುವ ಬೆಳವಣಿಗೆಗಳೂ ಜಿಲ್ಲೆಯಲ್ಲಿ ಕಂಡುಬರುತ್ತಿದೆ.
ಈ ಬಾರಿ ಸ್ಥಳೀಯವಾಗಿ ಬೆಳೆಯುವ ಭತ್ತದ ತಳಿಗಳೊಂದಿಗೆ ಅತಿರಾ, ತುಂಗಾದAತಹ ಬಿತ್ತನೆ ಬೀಜಗಳನ್ನು ರೈತರಿಗೆ ಪೂರೈಸಲಾಗಿತ್ತು. ಭತ್ತದ ಫಸಲು ಕಟಾವಿಗೆ ಬರುವ ಸಂದರ್ಭದಲ್ಲಿ ವಾತಾವರಣದಲ್ಲಿನ ಬದಲಾವಣೆಯಿಂದಾಗಿ ರೈತರು ಆತಂಕ ಎದುರಿಸುವಂತಾಗಿತ್ತಾದರೂ ಬಳಿಕ ಇದು ತಿಳಿಯಾಗಿ ನಿಟ್ಟುಸಿರು ಬಿಡುವಂತಾಗಿತ್ತು.
ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ ಮಾದರಿಯ ತಳಿಗಳನ್ನು ರೈತರು ತಮ್ಮ ಜಾಗದ ಅನುಕೂಲಕ್ಕೆ ಸರಿಯಾಗಿ ಬೆಳೆದಿದ್ದರು. ಇದೀಗ ಶೇ. ೮೦ ರಷ್ಟು ಕಟಾವು ಪೂರ್ಣಗೊಂಡಿದೆ. ಇನ್ನುಳಿದ ಭಾಗದಲ್ಲಿ ಕೆಲಸ - ಕಾರ್ಯಗಳು ಭರದಿಂದ ಸಾಗುತ್ತಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಚಂದ್ರಶೇಖರ್ ಅವರು ತಿಳಿಸಿದ್ದಾರೆ.