ಮಡಿಕೇರಿ, ಡಿ. ೨೮: ಮಡಿಕೇರಿಯ ಕೊಡಗು ವಿದ್ಯಾಲಯ ಶಾಲೆಯಲ್ಲಿ ಕ್ರಿಸ್‌ಮಸ್ ಹಬ್ಬವನ್ನು ಆಚರಿಸಲಾಯಿತು. ಪ್ರಾರ್ಥನೆಯೊಂದಿಗೆ ಪ್ರಾಂಶುಪಾಲೆ ಸುಮಿತ್ರ ಕೆ.ಎಸ್., ಆಡಳಿತ ನಿರ್ವಹಣಾ ಅಧಿಕಾರಿ ರವಿ ಪಿ., ಕೋ-ಆರ್ಡಿನೇಟರ್ ಸುಮಂತ್ ಹಾಗೂ ಶಿಕ್ಷಕರು ಕ್ಯಾಂಡಲ್ ಹಚ್ಚುವ ಮೂಲಕ ಕ್ರಿಸ್‌ಮಸ್ ಸಂದೇಶವನ್ನು ಸಾರಿದರು.
ಮಕ್ಕಳಿಂದ ಸ್ವಾಗತ ನೃತ್ಯ ನಡೆಯಿತು. ಫ್ರೀ ಸ್ಟೈಲ್ ಡಾನ್ಸ್ ಅನ್ನು ಮಕ್ಕಳು ಕೊರಿಯೋಗ್ರಾಫರ್ ಅಭಿಷೇಕ್ ಮತ್ತು ಅವರ ತಂಡದ ಮಾರ್ಗದರ್ಶನದಲ್ಲಿ ಪ್ರದರ್ಶಿಸಿದರು.
ಈ ಸಂದರ್ಭ ವಿದ್ಯಾರ್ಥಿನಿ ಸುದೀಪ್ತ ಕ್ರಿಸ್‌ಮಸ್ ದಿನದ ಮಹತ್ವದ ಬಗ್ಗೆ ಮಾತನಾಡಿ, ಯೇಸು ಅವರ ಸಂದೇಶವನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಮಕ್ಕಳಿAದ ಯೇಸುವಿನ ಜನನದ ಕಥೆಯನ್ನು ಆಧರಿಸಿದ ನಾಟಕ ಪ್ರದರ್ಶನ ನಡೆಯಿತು. ಅಮೃತ, ಪವನ್ ಕಾರ್ಯಕ್ರಮ ನಿರ್ವಹಿಸಿದರು.