ಮಡಿಕೇರಿ, ಡಿ. ೨೬: ಸ್ವಾತಂತ್ರö್ಯ ಹೋರಾಟಗಾರ ದಿ.ಪೂಜಾರಿರ ರಾಮಪ್ಪ ಟ್ರಸ್ಟ್, ಮೇಕೇರಿ ಹಾಗೂ ಅರ್ವತೊಕ್ಲು ಗ್ರಾಮಸ್ಥರ ಸಹಯೋಗದೊಂದಿಗೆ ಮೇಕೇರಿ-ಅರ್ವತೊಕ್ಲು ಸಂಪರ್ಕ ರಸ್ತೆಗೆ ಪೂಜಾರಿರ ರಾಮಪ್ಪ ರಸ್ತೆ ನಾಮಕರಣ ಸಮಾರಂಭ ತಾ.೨೮ರಂದು ನಡೆಯಲಿದೆ.

ಅಂದು ಬೆಳಿಗ್ಗೆ ೯ ಗಂಟೆಗೆ ಮೇಕೇರಿ ಶಾಲಾ ಮೈದಾನದಲ್ಲಿ ನಡೆಯಲಿರುವ ಸಮಾರಂಭವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ವೀರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಉದ್ಘಾಟಿಸುವರು. ಮೇಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪೂಜಾರಿರ ರಕ್ಷಿತ್ ಉತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಧಾನಸಭಾ ಮಾಜಿ ಅಧ್ಯಕ್ಷ ಕೆ.ಜಿ. ಬೋಪಯ್ಯ, ಪೂಜಾರಿರ ಕುಟುಂಬದ ಪಟ್ಟೆದಾರ ಪೂಜಾರಿರ ಪೂವಯ್ಯ, ಸರ್ವೋದಯ ಸಮಿತಿ ಅಧ್ಯಕ್ಷ ಅಂಬೆಕಲ್ಲು ಕುಶಾಲಪ್ಪ ಸೇರಿದಂತೆ ಇತರರು ಉಪಸ್ಥಿತರಿರುವರು.