ಮುಳ್ಳೂರು, ಡಿ. ೨೬: ಸಮೀಪದ ಹುಲುಕೋಡು ಗ್ರಾಮದ ಶ್ರೀ ಕುಮಾರಲಿಂಗೇಶ್ವರ ದೇವಸ್ಥಾನದ ೪೮ನೇ ದಿನದ ಮಂಡಲ ಪೂಜಾ ಕಾರ್ಯಕ್ರಮ ತಾ. ೨೭ ರಂದು (ಇಂದು) ಮತ್ತು ೨೮ ರಂದು (ನಾಳೆ) ನಡೆಯಲಿದೆ ಎಂದು ದೇವಸ್ಥಾನ ಸಮಿತಿ ಕಾರ್ಯದರ್ಶಿ ಎಚ್.ಎಂ. ವಿವೇಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾ. ೨೭ ರಂದು ಶ್ರೀ ಸ್ವಾಮಿಯವರ ಮಹಾಮಂಡಲ ಆರಾಧನಾ ಪ್ರಯುಕ್ತ ಶ್ರೀ ಸ್ವಾಮಿಗೆ ಗಂಗೆಪೂಜೆ, ಗಣಪತಿ ಪೂಜೆ, ಪುಣ್ಯಾಹ ರುದ್ರಾಭಿಷೇಕ, ಮಹಾ ಲಿಗೋತ ಭದ್ರ ಮಹಾ ದೀಪಾರಾಧನೆ, ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನಡೆಯುತ್ತದೆ ತಾ. ೨೮ ರಂದು ಬೆಳಿಗ್ಗೆ ೭ ಗಂಟೆಗೆ ಗಣಪತಿ ಪ್ರಾರ್ಥನೆ, ಮುತೈದೆಯರಿಂದ ಗಂಗಾಪೂಜೆ ನಂತರ ಮಹಾಸ್ವಾಮಿ ಫಲಪಂಚಾಮೃತ ಅಭಿಷೇಕ ಮತ್ತು ಅಲಂಕಾರ ಶ್ರೀ ಸ್ವಾಮಿಯವರ ಮಹಾ ಮಂಡಲ ಪೂಜೆ ಪ್ರಯುಕ್ತ ಶ್ರೀ ಸ್ವಾಮಿಗೆ ಮಹಾ ಶಾಂತಿಹೋಮ, ರುದ್ರಸ್ವಾಹಾಕಾರ, ಮಹಾಪೂರ್ಣಾಹುತಿ, ಅಷ್ಟೋತ್ತರ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ.