ವೀರಾಜಪೇಟೆ, ಡಿ. ೨೬: ಕೇರಳದ ಬೈತೂರು ದೇವರ ವಾರ್ಷಿಕೋತ್ಸವಕ್ಕೆ ಕೊಡಗಿನ ಭಕ್ತರನ್ನು ಆಹ್ವಾನಿಸಲು ಬೈತೂರು ದೇವಾಲಯದಿಂದ ಕೋಮರತಚ್ಚನ್ ತಾ. ೩೦ ರಿಂದ ಜ. ೯ರವರೆಗೆ ಕೊಡಗಿನ ವಿವಿಧ ಕಡೆಗಳಲ್ಲಿ ಭೇಟಿ ನೀಡಿಲಿದ್ದಾರೆ ಎಂದು ತಕ್ಕರಾದ ಪುಗ್ಗೆರ ಪೊನ್ನಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾ. ೩೦ ರಂದು ಕೋಮರತಚ್ಚನ್ ಹೆಗ್ಗಳ ಭಗವತಿ ಅಯ್ಯಪ್ಪ ದೇವಾಲಕ್ಕೆ ಆಗಮಿಸಿ ಅಲ್ಲಿ ವಾಸ್ತವ್ಯ ಹೂಡಲಿದಾರೆ. ತಾ. ೩೧ರಂದು ಭಕ್ತರಿಗೆ ಆಶೀರ್ವಾದ ನೀಡಿ ಬಳಿಕ ಪುಗ್ಗೆರ ನಂದಾ ಗಣಪತಿ ಅವರ ಮನೆಗೆ ತೆರಳಿ ಸಂಜೆ ಕುಕ್ಲೂರು ಮಾಳೇಟಿರ ಐನ್‌ಮನೆ, ಚೆಂಬೆಬೆಳ್ಳೂರು ಕೊಳುವಂಡ ಐನ್‌ಮನೆಗೆ ತೆರಳಿ ಸಂಜೆ ಈಶ್ವರ ದೇವಾಲಯದಲ್ಲಿ ವಾಸ್ತವ್ಯ. ಜನವರಿ ೧ ರಂದು ಪೂರ್ವಾಹ್ನ ದೇವಣಗೇರಿ ಮುಕ್ಕಾಟಿರ ಐನ್‌ಮನೆಗೆ ಭೇಟಿ ನೀಡಿ ದೇವಣಗೇರಿ ಈಶ್ವರÀ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಹಾಲುಗಂದ ಗ್ರಾಮದಲ್ಲಿ ವಾಸ್ತವ್ಯ. ಜನವರಿ ೨ ರಂದು ಹಾಲುಗುಂದ ಗ್ರಾಮದ ಭಗವತಿ ದೇವಾಲಯದಲ್ಲಿ ಪೂಜೆ ನಂತರ ಮೈತಾಡಿ ಚಪ್ಪಂಡ ಐನ್ ಮನೆಯಲ್ಲಿ ವಾಸ್ತವ್ಯ.

ಜನವರಿ ೩ ರಂದು ಪೂರ್ವಾಹ್ನ ಮೈತಾಡಿ ಅಯ್ಯಪ್ಪ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಐಚೇಟ್ಟಿರ ಐನ್‌ಮನೆಗೆ ಭೇಟಿ ನೀಡಿ ಮೈತಾಡಿ ಬೇರೆರ ಐನ್‌ಮನೆಗೆ ತೆರಳಿ ನಂತರ ಕುಂಜಿಲಗೇರಿ ಗ್ರಾಮದ ಮುಕ್ಕಾಟಿರ ಐನ್‌ಮನೆಯಲ್ಲಿ ವಾಸ್ತವ್ಯ.

ಜನವರಿ ೪ ರಂದು ಮಾತಂಡ ಐನ್‌ಮನೆ, ಬಲ್ಲಚಂಡ ಐನ್‌ಮನೆಗೆ ಭೇಟಿ ನೀಡಿ ರಾತ್ರಿ ಕೆದಮುಳ್ಳೂರು ಈಶ್ವರ ದೇವಾಲಯದಲ್ಲಿ ವಾಸ್ತವ್ಯ, ಜನವರಿ ೫ ರಂದು ಪಾಲೆಕಂಡ ಐನ್‌ಮನೆಗೆ ಭೇಟಿ ನೀಡಿ ಕೆದಮುಳ್ಳೂರು ಈಶ್ವರ ದೇವಾಲಯದಲ್ಲಿ ವಾಸ್ತವ್ಯ.

ಜನವರಿ ೬ ರಂದು ಕೆದಮುಳ್ಳ್ಳೂರು ಈಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಕದನೂರು ಗ್ರಾಮದ ಭಗವತಿ ದೇವಾಲಯಕ್ಕೆ ಭೇಟಿ ನೀಡಿ ಮಗ್ಗುಲದ ಚೋಕಂಡ ಐನ್‌ಮನೆಗೆÀ ಭೇಟಿ ನೀಡಿ ಅಯ್ಯಪ್ಪ ದೇವಾಲಯದಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಜನವರಿ ೭ ರಂದು ವೀರಾಜಪೇಟೆ ಗಣಪತಿ ದೇವಾಲಯ, ಮಡಿಕೇರಿಯ ಓಂಕಾರೇಶ್ವರ ದೇವಾಲಯ, ಕೋಟೆ ಗಣಪತಿ ದೇವಾಲಯಕ್ಕೆ ಬೇಟಿ ನೀಡಿ ಕೊಡಂದೇರ ಐನ್ ಮನೆಯಲ್ಲಿ ವಾಸ್ತವ್ಯ. ಜನವರಿ ೮ ರಂದು ಹಳ್ಳಿಗಟ್ಟು ಭದ್ರಕಾಳಿ ದೇವಾಲಯಕ್ಕೆ ತೆರಳಿ ಕೊಕ್ಕಂಡ ಐನ್‌ಮನೆ, ಮುರುವಂಡ ಐನ್‌ಮನೆ, ಬಿಟ್ಟಂಗಾಲದ ಕಾಮೆಯಂಡ ಐನ್‌ಮನೆಗೆ ತೆರಳಿ ಮಾಚೇಟ್ಟಿರ ಐನ್‌ಮನೆಯಲ್ಲಿ ವಾಸ್ತವ್ಯ. ಜನವರಿ ೯ ರಂದು ಬಾಳುಗೋಡುವಿನ ಭದ್ರಕಾಳಿ ದೇವಾಲಯದಲ್ಲಿ ಪೂಜೆ ಬಳಿಕ ಮೂರಿರ ಐನ್‌ಮನೆ, ಅಮ್ಮಣಕುಟ್ಟಂಡ ಐನ್‌ಮನೆಗೆ ಭೇಟಿ ನೀಡಿ ಬೈತೂರು ದೇವಾಲಯಕ್ಕೆ ತೆರಳಲಿದ್ದಾರೆ.

ಹಬ್ಬದ ಸಂದರ್ಭ ದೇವಸ್ಥಾನಕ್ಕೆ ತರಕಾರಿ ಹಾಗೂ ಇತರ ಪೂಜಾ ಸಾಮಗ್ರಿಗಳನ್ನು ನೀಡುವವರು ಜನವರಿ ೧೦ರ ಒಳಗೆ ಆತ್ರೇಯ ಆಸ್ಪತ್ರೆ ಎದುರು ಇರುವ ಗಣಪ ಟ್ರೇರ‍್ಸ್ (ಆದಿ ಬೈತೂರಪ್ಪ ಭಕ್ತ ಜನಸಂಘ ಕಚೇರಿ)ನಲ್ಲಿ ನೀಡಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ ೯೬೬೩೯೭೭೩೦೪, ೯೬೮೬೩೫೫೭೮೯ ಸಂಪರ್ಕಿಸಬಹುದು ಎಂದು ಪೊನ್ನಪ್ಪ ತಿಳಿಸಿದರು.

ಗೋಷ್ಠಿಯಲ್ಲಿ ಶ್ರೀ ಆದಿ ಬೈತೂರಪ್ಪ ಭಕ್ತಜನ ಸಂಘದ ಅಧ್ಯಕ್ಷ ಅಮ್ಮಣಕುಟ್ಟಂಡ ಕಿರಣ್ ಸುಬ್ರಮಣಿ, ಸಂಚಾಲಕ ಚೇಂದAಡ ಶಿವಕುಮಾರ್, ಖಜಾಂಚಿ ಅಲ್ಲಪಂಡ ಲಿಖಿತ್ ಮುತ್ತಣ್ಣ, ಸದಸ್ಯರಾದ ಮಂಡೇಪAಡ ರೀಶು ಕಾರ್ಯಪ್ಪ ಉಪಸ್ಥಿತರಿದ್ದರು.