ಸುAಟಿಕೊಪ್ಪ, ಡಿ. ೨೬: ಸುಂಟಿಕೊಪ್ಪದ ಕೂರ್ಗ್ ಚೆಸ್ ಕ್ಲಬ್ ವತಿಯಿಂದ ತಾ. ೩೧ರಂದು ಬೆಳಿಗ್ಗೆ ೯.೩೦ ಗಂಟೆಗೆ ಶ್ರೀ ಗುಂಡುಗುಟ್ಟಿ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಜಿಲ್ಲಾಮಟ್ಟದ ಚೆಸ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಕ್ಲಬ್‌ನ ಯೋಜನಾ ನಿರ್ದೇಶಕರುಗಳಾದ ಎಸ್. ವೇಲು, ಒ.ಜಿ. ಮಣಿಕಂಠ (ಮಣಿ), ಪಂದ್ಯಾವಳಿಯ ನಿರ್ದೇಶಕರಾದ ತಿರುಮೂರ್ತಿ ಹಾಗೂ ಸಂಯೋಜಕರಾದ ಎಂ. ಭಾಸ್ಕರ್ ತಿಳಿಸಿದ್ದಾರೆ. ೭ ರಿಂದ ೧೪ ವರ್ಷ ಪ್ರಾಯದ ಮಕ್ಕಳ ವಿಭಾಗದಲ್ಲಿ ಪ್ರಥಮ ಬಹುಮಾನ ರೂ. ೩೦೦೦, ದ್ವಿತೀಯ ಬಹುಮಾನ ರೂ. ೨೦೦೦, ತೃತೀಯ ಬಹುಮಾನ ರೂ. ೧೦೦೦ ನಗದು ಬಹುಮಾನ ಹಾಗೂ ಐವರು ಸ್ಪರ್ಧೆಗಳಿಗೆ ಆಕರ್ಷಕ ಟ್ರೋಫಿ ನೀಡಲಾಗುವುದು.

೧೫ ವರ್ಷ ಮೇಲ್ಪಟ್ಟವರ ವಿಭಾಗದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ರೂ. ೫೦೦೦, ದ್ವಿತೀಯ ಬಹುಮಾನ ರೂ. ೩೦೦೦, ತೃತೀಯ ಬಹುಮಾನ ರೂ. ೧೫೦೦ ನಗದು ಬಹುಮಾನ ಹಾಗೂ ಐವರು ಸ್ಪರ್ಧಿಗಳಿಗೆ ಆಕರ್ಷಕ ಟ್ರೋಫಿ ಸಿಗಲಿದೆ. ಮೊದಲು ಹೆಸರು ನೋಂದಾಯಿಸಿಕೊಳ್ಳುವ ೧೦೦ ಸ್ಪರ್ಧಿಗಳಿಗೆ ಮಾತ್ರ ಅವಕಾಶ ನೀಡಲಾಗುವುದು. ಈ ಚೆಸ್ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವವರು ತಾ. ೩೦ ರ ರಾತ್ರಿ ೯ ಗಂಟೆ ಒಳಗೆ ಹೆಸರನ್ನು ನೋಂದಣಿ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಹಾಗೂ ಹೆಸರು ಎಸ್. ವೇಲು ೯೦೦೮೧೯೧೦೨೧, ಮಣಿಕಂಠ (ಮಣಿ) ೯೪೮೧೭೭೦೬೫೮, ತಿರುಮೂರ್ತಿ ೮೭೬೨೯೬೫೧೨೦, ಸಂಪರ್ಕಿಸಬಹುದಾಗಿದೆ.