.ಮಡಿಕೇರಿ, ಡಿ. ೨೬: ೩೩/೧೧ ಕೆ.ವಿ ಮೂರ್ನಾಡು ವಿದ್ಯುತ್ ವಿತರಣಾ ಉಪ ಕೇಂದ್ರದಿAದ ಹೊರಹೊಮ್ಮುವ ಎಫ್೨ ನಾಪೋಕ್ಲು ಹಾಗೂ ಎಫ್೫ ಹೊದ್ದೂರು ಫೀಡರ್‌ಗಳಲ್ಲಿ ತಾ. ೨೭ ರಂದು ಬೆಳಿಗ್ಗೆ ೧೦ ರಿಂದ ಸಂಜೆ ೫ ಗಂಟೆಯವರೆಗೆ ಕೊಡಗು ವಿದ್ಯುತ್ ಜಾಲದ ಬಲವರ್ಧನೆ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದರಿಂದ ಈ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ಹೊದ್ದೂರು, ಕಬಡಗೇರಿ, ಕಕ್ಕಬ್ಬೆ, ಕೊಳಕೇರಿ, ಕುಂಜಿಲ, ಎಮ್ಮೆಮಾಡು, ನೆಲಜಿ, ಬಲ್ಲಮಾವಟಿ, ಪೆರೂರು, ನಾಪೋಕ್ಲು ಟೌನ್, ಕೊಟ್ಟಮುಡಿ, ಪಾಲೂರು, ಚೆರಿಯಪರಂಬು, ಹಳೆ ತಾಲೂಕು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

* ೬೬/೧೧ ಕೆ.ವಿ ಪೊನ್ನಂಪೇಟೆ ವಿದ್ಯುತ್ ವಿತರಣಾ ಉಪ ಕೇಂದ್ರದಲ್ಲಿ ನೂತನ ಬ್ರೇಕರ್‌ಗಳ ನಿರ್ವಹಣೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿರುವುದರಿಂದ ಈ ಕೇಂದ್ರದಿAದ ಹೊರಹೊಮ್ಮುವ ಎಫ್೧ ನಲ್ಲೂರು, ಎಫ್೨-ಬಾಳೆಲೆ, ಎಫ್೪-ತಿತಿಮತಿ, ಎಫ್೫-ಪಾಲಿಬೆಟ್ಟ, ಎಫ್೬-ಬೇಗೂರು, ಎಫ್೭-ಗೋಣಿಕೊಪ್ಪ, ಎಫ್೮-ಪೊನ್ನಂಪೇಟೆ, ಎಫ್೯-ಹಾತೂರು, ಎಫ್೧೦-ಹೈಸೊಡ್ಲೂರು, ಫೀಡರ್‌ನಲ್ಲಿ ತಾ. ೨೭ ರಂದು ಬೆಳಿಗ್ಗೆ ೧೦ ರಿಂದ ಸಂಜೆ ೪ ಗಂಟೆಯವರೆಗೆ ವಿದ್ಯುತ್ ಸರಬರಾಜಾಗುವ ಪೊನ್ನಂಪೇಟೆ, ಗೋಣಿಕೊಪ್ಪ, ತಿತಿಮತಿ, ಹಾತೂರು, ಅರುವತ್ತೋಕ್ಲು, ಕಿರುಗೂರು, ದೇವರಪುರ, ಮಾಯಮುಡಿ ಧನುಗಾಲ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.