*ಗೋಣಿಕೊಪ್ಪ, ಡಿ. ೨೬: ವಿವಿಧ ಕೈಗಾರಿಕಾ ಉತ್ಪನ್ನಗಳಿಗೆ ಬಳಕೆ ಯಾಗುವ ಯೂರಿಯಾ ಗೊಬ್ಬರ ತುಂಬಿದ ಲಾರಿ ರಸ್ತೆಯಲ್ಲೇ

ಮಗುಚಿ ಕೊಂಡ ಘಟನೆ ಗೋಣಿ ಕೊಪ್ಪದ ಚನ್ನಂಗೊಲ್ಲಿ ಸಮೀಪ ನಡೆದಿದೆ.

ಮೈಸೂರು ಮಾರ್ಗದಿಂದ ಕೇರಳಕ್ಕೆ ತೆರಳುತ್ತಿದ್ದ ಗೊಬ್ಬರ ತುಂಬಿದ ಲಾರಿ ಚನ್ನೆಂಗೊಲ್ಲಿ ಸಮೀಪ ತಲುಪಿದಾಗ ಲಾರಿಯ ಚಕ್ರ ಒಡೆದು ಹೋದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಎಡಬದಿಗೆ ಮಗುಚಿಕೊಂಡಿದೆ.

ಸಮೀಪದಲ್ಲಿದ್ದ ಟೀ ಕ್ಯಾಂಟೀನ್ ಎದುರಿಗೆ ನಿಲ್ಲಿಸಿದ ಎರಡು ಸ್ಕೂಟರ್‌ಗಳಿಗೂ ಡಿಕ್ಕಿ ಹೊಡೆದಿದೆ. ಲಾರಿ ಚಾಲಕ ಹಾಗೂ ಕ್ಲೀನರ್ ಅಪಾಯದಿಂAದ ಪಾರಾಗಿದ್ದು, ಘಟನೆ ನಡೆದ ಸ್ಥಳದಿಂದ ಇಬ್ಬರೂ ಕೂಡ ಪರಾರಿಯಾಗಿದ್ದಾರೆ. ಲಾರಿ ವೀರಾಜಪೇಟೆಯ ಆರ್ಜಿ ಗ್ರಾಮದ ರಶೀದ್ ಅವರಿಗೆ ಸೇರಿದ್ದಾಗಿದೆ.

ಗೋಣಿಕೊಪ್ಪ ಪೊಲೀಸ್ ಠಾಣಾಧಿಕಾರಿ ಪ್ರದೀಪ್‌ಕುಮಾರ್ ಬಿ.ಕೆ ಮತ್ತು ಎಎಸ್‌ಐ ಧನಪತಿ, ವೆಂಕಟೇಶ್, ಶಶಿ ಕುಮಾರ್, ತನುಕುಮಾರ್, ಸತೀಶ್, ಲೋಕೇಶ್ ಸ್ಥಳಕ್ಕೆ ತೆರಳಿ ಕ್ರಮಕೈಗೊಂಡಿದ್ದಾರೆ.