ಪಾಲಿಬೆಟ್ಟ, ಡಿ. ೨೬: ಪಾಲಿಬೆಟ್ಟದ ಲೂರ್ಡ್ಸ್ ಶಾಲೆಯ ಸುವರ್ಣ ಮಹೊತ್ಸವವನ್ನು ಆಚರಿಸಿದರು.
ಕಾರ್ಯಕ್ರಮಕ್ಕೆ ಆಗಮಿಸಿದ ವೀರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರು ಕಾರ್ಯಕ್ರಮದ ಲಾಂಛನ ಅನಾವರಣಗೊಳಿಸಿ ಮಾತನಾಡಿ, ಶೈಕ್ಷಣಿಕವಾಗಿ ಹಾಗೂ ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮ ಹೆಸರನ್ನು ಪಡೆದು ಸುತ್ತಮುತ್ತಲಿನ ಅನೇಕ ವಿದ್ಯಾರ್ಥಿಗಳಿಗೆ ಒಳ್ಳೆಯ ವಿದ್ಯಾಭ್ಯಾಸವನ್ನು ನೀಡುವುದರ ಮೂಲಕ ಸಮಾಜದಲ್ಲಿ ಅವರ ಪ್ರತಿಭೆಯನ್ನು ಗುರುತಿಸುವಂತೆ ಲೂರ್ಡ್ಸ್ ಶಾಲೆ ಮಾಡಿದೆ ಎಂದರು.
ವಿದ್ಯಾದಾನ ಎಂಬುವುದು ಒಬ್ಬ ವ್ಯಕ್ತಿಯ ಜೀವನವನ್ನು ರೂಪಿಸುವ ಕ್ರಿಯೆಯಾಗಿದ್ದು, ಶಿಕ್ಷಕರು ಇದನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ವಿವಿಧ ರೀತಿಯ ನೃತ್ಯಗಳು, ಕಿರುನಾಟಕಗಳು, ಭರತನಾಟ್ಯ, ಕರಾಟೆ ಜರುಗಿದವು. ಸಮಾರಂಭದಲ್ಲಿ ಪಾಲಿಬೆಟ್ಟ ಕಾಂಗ್ರೆಸ್ ವಲಯ ಅಧ್ಯಕ್ಷ ಮಾಳೇಟಿರ ಸಾಬು ಕಾಳಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹೆಚ್.ಪಿ. ಗಣೇಶ್, ಪಿ.ಡಬ್ಲ್ಯು.ಡಿ. ಗುತ್ತಿಗೆದಾರ ವಿನ್ಸೆಂಟ್ ಚೆರಿಯನ್, ಸಿದ್ದಾಪುರ ಸಂತ ಅಂತೋಣಿ ಶಾಲೆಯ ಮುಖ್ಯೋಪಾಧ್ಯಾಯಿನಿ ಅರ್ಪಿತಾ, ಲೂರ್ಡ್ಸ್ ಶಾಲೆಯ ಮುಖ್ಯೋಪಾಧ್ಯಾಯಿನಿಯರಾದ ತೆರೆಸಾ ಮತ್ತು ಕ್ಯಾಂಡಿಡಾ, ಪಾಲಿಬೆಟ್ಟ ಕ್ಲಸ್ಟರ್ನ ಕರುಂಬಯ್ಯ ಉಪಸ್ಥಿತರಿದ್ದರು.