ನಾಪೋಕ್ಲು, ಡಿ. ೨೪: ವೀರಾಜಪೇಟೆಯ ಪೊಂಬೊಳ್ಚ ಕೂಟ ಐದು ವರ್ಷಗಳ ಅವಧಿ ಪೂರೈಸಿದ ಸವಿನೆನಪಿನ ಹಿನ್ನಲೆಯಲ್ಲಿ ಕೂಟದ ವತಿಯಿಂದ ನಾಪೋಕ್ಲುವಿನ ಪುನಶ್ಚೇತನ ಚಾರಿಟೇಬಲ್ ಟ್ರಸ್ಟ್ನ ಮುಖ್ಯಸ್ಥೆ, ಸಮಾಜ ಸೇವಕಿ ಬಾಳೆಯಡ ದಿವ್ಯ ಮಂದಪ್ಪ ಅವರನ್ನು ಟ್ರಸ್ಟ್ನ ಆವರಣದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.
ಕೂಟದ ಅಧ್ಯಕ್ಷ ಚಂಗೇಟಿರ ಸೋಮಣ್ಣ ಅವರು ಈ ದಿನದ ಉದ್ದೇಶದ ಬಗ್ಗೆ ಮಾತನಾಡಿದರು. ಸ್ಥಾಪಕ ಕೋಟೇರ ಪೂಣಚ್ಚ, ಕಾರ್ಯದರ್ಶಿ ಜಮ್ಮಡ ಮೋನ ಭೀಮಯ್ಯ, ಆಡಳಿತ ಮಂಡಳಿ ಸದಸ್ಯರಾದ ಕಳ್ಳಿಚಂಡ ದೀನ ಉತ್ತಪ್ಪ, ಕಾಣತಂಡ ವಿವೇಕ್ ಅಯ್ಯಪ್ಪ, ಕೂಟದ ಸದಸ್ಯರಾದ ಕ್ಯಾಪ್ಟನ್ ಬಿದ್ದಂಡ ನಾಣಿ ದೇವಯ್ಯ ಮಾತನಾಡಿ, ದಿವ್ಯ ಅವರ ಸಮಾಜ ಸೇವೆಯ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿ ಶುಭ ಹಾರೈಸಿದರು.
ಸನ್ಮಾನ ಸ್ವೀಕರಿಸಿದ ಟ್ರಸ್ಟ್ನ ಮುಖ್ಯಸ್ಥೆ ದಿವ್ಯ ಮಂದಪ್ಪ ಅವರು ತನ್ನ ಅನುಭವವನ್ನು ಹಂಚಿಕೊAಡರು.
ಈ ಸಂದರ್ಭದಲ್ಲಿ ಪೊಂಬೊಳ್ಚ ಕೂಟದ ಸಹಕಾರ್ಯದರ್ಶಿ ಅಜ್ಜಿಕುಟ್ಟೀರ ಭವ್ಯ ಬೋಪಣ್ಣ, ಖಜಾಂಚಿ ಶಿವಚಾಳಿಯಂಡ ರೋಹಿಣಿ ಬೋಪಣ್ಣ, ಮೊಣ್ಣಂಡ ವಿನು ಕಾರ್ಯಪ್ಪ, ಅಪ್ಪನೆರವಂಡ ವಿನು ಮಾದಪ್ಪ, ಕುಂಡ್ಯೋಳAಡ ಬೋಪಣ್ಣ, ಸದಸ್ಯರಾದ ಕೆ. ಗಿರೀಶ್, ಶಿವಚಾಳಿಯಂಡ ಬೋಪಣ್ಣ, ಪುನಶ್ಚೇತನ ಚಾರಿಟೇಬಲ್ ಟ್ರಸ್ಟ್ನ ಶಿಕ್ಷಕಿ ಅಸ್ಮ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.