ಪೊನ್ನAಪೇಟೆ, ಡಿ. ೨೩: ಪೊನ್ನಂಪೇಟೆ ಕುಂದ ರಸ್ತೆಯ ಭಗವತಿ ಸ್ನೇಹಿತರ ಯುವಕ ಸಂಘದ ಸದಸ್ಯರು ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆ ಪ್ರಾಥಮಿಕ ವಿಭಾಗದ ಆವರಣ ಗೋಡೆಗಳಿಗೆ ಬಣ್ಣ ಬಳಿಯುವ ಮೂಲಕ ಆವರಣಗೋಡೆಯನ್ನು ಅಂದಗಾಣಿಸಿದ್ದಾರೆ. ಸುಮಾರು ೧೭ ಸಾವಿರ ರೂಪಾಯಿ ವೆಚ್ಚದ ಬಣ್ಣ ಖರೀದಿಸಿ ಕಾರ್ಯ ನಿರ್ವಹಿಸಿದ್ದು, ಸಂಘದ ಸದಸ್ಯರ ಕಾರ್ಯ ಸಮಾಜಕ್ಕೆ ಮಾದರಿಯಾಗಿದ್ದು, ಸಾರ್ವಜನಿಕರಿಂದ ಪ್ರಶÀಂಸೆ ವ್ಯಕ್ತವಾಗಿದೆ.

ಈ ಬಗ್ಗೆ ಸಂಘದ ಅಧ್ಯಕ್ಷ ಸಂದೀಪ್ ಮಾತನಾಡಿ ತೀತಮಾಡ ಸುಗುಣ ಸೋಮಯ್ಯ ಮತ್ತು ತೀತಮಾಡ ಗಗನ್ ಗಣಪತಿ ಅವರ ಪ್ರೋತ್ಸಾಹದಿಂದ ನಾವು ಇತ್ತೀಚಿನ ದಿನಗಳಲ್ಲಿ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದೇವೆ.

ಒಂದು ವರ್ಷದ ಹಿಂದೆ ಸ್ಥಾಪಿಸಿದ ೧೫ ಮಂದಿ ಸಮಾನ ಮನಸ್ಕರ ಸಂಘ ನಮ್ಮದಾಗಿದ್ದು, ಕಳೆದ ತಿಂಗಳು ಕಾರು ನಿಲ್ದಾಣ ಹಾಗೂ ರಾಮಕೃಷ್ಣ ಆಶ್ರಮದ ಮುಂಭಾಗ ಸಿಮೆಂಟ್ ಹಾಗೂ ಜಲ್ಲಿಯಿಂದ ರಸ್ತೆಗುಂಡಿಯನ್ನು ಮುಚ್ಚುವ ಕೆಲಸ ಮಾಡಿದ್ದೆವು. ಇದೀಗ ನಮ್ಮ ಊರಿನ, ನಾವು ಓದಿದ ಸರ್ಕಾರಿ ಶಾಲೆ ಆವರಣ ಚಂದ ಕಾಣಲಿ ಎಂಬ ಉದ್ದೇಶದಿಂದ ಗೋಡೆಗೆ ಬಣ್ಣ ಬಳಿದಿದ್ದೇವೆ.

ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ಮತ್ತಷ್ಟು ಉತ್ತಮ ಕೆಲಸಗಳನ್ನು ಮಾಡಲಾಗುವುದು ಎಂದರು. ಸಂಘದ ಸದಸ್ಯರಾದ ಸಂದೀಪ್, ಮನು, ಕಾವೇರಪ್ಪ, ಸಂದೇಶ್ ರಾಮು, ಸಂದೇಶ್, ಮಧು, ಶಿವು, ರಾಜೇಶ್, ಮಹದೇವ ಬಣ್ಣ ಬಳಿಯುವ ಕಾರ್ಯ ನಿರ್ವಹಿಸಿದರು.